ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆ ತೆರೆಯಲು ವಾಲ್‌ಮಾರ್ಟ್ ಲಂಚ

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಭಾರತದ ಚಿಲ್ಲರೆ ಮಾರಾಟ ಕ್ಷೇತ್ರವನ್ನು ಪ್ರವೇಶಿಸಲು ಮಾಡಿದ ಲಾಬಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವುದಾಗಿ ಹೇಳಿ ವಾಲ್‌ಮಾರ್ಟ್ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ, ಮೆಕ್ಸಿಕೊದಲ್ಲಿರುವ ವಾಲ್‌ಮಾರ್ಟ್ ಅಂಗಸಂಸ್ಥೆ, ಅಮೆರಿಕದಲ್ಲಿ ತನಗೆ ಬೇಕಾದ ಸ್ಥಳಗಳಲ್ಲಿ ಮಾರಾಟ ಮಳಿಗೆ ತೆರೆಯಲು ಸ್ಥಳೀಯ ಅಧಿಕಾರಿಗಳಿಗೂ ಲಂಚ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ತನಗೆ ಇಷ್ಟವಾದ ಸ್ಥಳಗಳಲ್ಲಿ ಮಾರಾಟ ಮಳಿಗೆ ತೆರೆಯುವುದಕ್ಕೆ ಒಪ್ಪಿಗೆ ಪಡೆಯಲು ಮಾತ್ರ ವಾಲ್‌ಮಾರ್ಟ್ ಡಿ ಮೆಕ್ಸಿಕೊ ಲಂಚ ನೀಡಿಲ್ಲ. ಕೆಲ ಕಾನೂನುಬಾಹಿರ ಲಾಭ ಪಡೆಯಲು ಸಾಕಷ್ಟು ಲಂಚ ನೀಡಿದೆ ಎಂದು ನ್ಯೂಯಾರ್ಕ್ ಟೈಮ್ಸ ತನಿಖಾ ವರದಿ ಬೆಳಕು ಚೆಲ್ಲಿದೆ.  ಅನಿವಾರ್ಯ ಕಾರಣಗಳಿಗಾಗಿ ವಾಲ್‌ಮಾರ್ಟ್ ಲಂಚ ನೀಡಿಲ್ಲ. ಬದಲಾಗಿ ತನ್ನ ಲಾಭಕ್ಕೋಸ್ಕರ ಪ್ರಜ್ಞಾಪೂರ್ವಕವಾಗಿ ಇಂತಹ ಆಮಿಷಗಳನ್ನು ಒಡ್ಡಿದೆ. ತನ್ನ ಹಿತಾಸಕ್ತಿ ರಕ್ಷಣೆಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಕ್ತ ಸಂವಾದ, ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿದೆ ಎಂದು ವರದಿ ಹೇಳಿದೆ.

ಅಮೆರಿಕದ ಕಾರ್ಪೋರೇಟ್ ಸಂಸ್ಥೆಗಳು ಅಧಿಕಾರಿಗಳಿಗೆ ನೀಡುವ ಲಂಚದ ಆಮಿಷಕ್ಕೆ ತಡೆಯೊಡ್ಡುವ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಇಲ್ಲಿಯ ನ್ಯಾಯಾಂಗ ಇಲಾಖೆ, ಭದ್ರತಾ ಮತ್ತು ವಿನಿಮಯ ಆಯೋಗ ವಾಲ್‌ಮಾರ್ಟ್ ವಿರುದ್ಧ ಪ್ರತ್ಯೇಕ ತನಿಖೆ ಕೈಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT