ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಡೋಣಿ ನದಿಗೆ ಪ್ರವಾಹ

Last Updated 14 ಸೆಪ್ಟೆಂಬರ್ 2013, 8:56 IST
ಅಕ್ಷರ ಗಾತ್ರ

ತಾಳಿಕೋಟೆ: ಪಟ್ಟಣ ಹಾಗೂ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿಗೆ  ಶುಕ್ರವಾರ ಬೆಳಿಗ್ಗೆಯಿಂದಲೇ ಪ್ರವಾಹ ಬಂದಿತ್ತು.

ಹಡಗಿನಾಳ ರಸ್ತೆಯಲ್ಲಿರುವ ನೆಲಮಟ್ಟದ ಸೇತುವೆ ಮೇಲೆ ನಾಲ್ಕು ಅಡಿಗೂ ಹೆಚ್ಚಿನ ಪ್ರವಾಹವಿದ್ದುದರಿಂದ ಇಡೀ ದಿನ ಸಂಚಾರಕ್ಕೆ ವ್ಯತ್ಯಯ­ವಾಯಿತು. ಇದರಿಂದಾಗಿ ಈ ಮಾರ್ಗ­ದಲ್ಲಿ  ಸಂಚರಿಸಬೇಕಿದ್ದ  ಮುದ್ದೇಬಿಹಾಳ ನಾಲತವಾಡ ಕಲ್ಲದೇವನಹಳ್ಳಿ, ಮೂಕಿಹಾಳ, ಶಿವಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿತು. ಇದರಿಂದಾಗಿ ಎಲ್ಲ ವಾಹನಗಳು ಮಿಣಜಗಿ ಮಾರ್ಗದ ಮೂಲಕ ಸಂಚರಿಸುವಂತಾಯಿತು. 

ಸೇತುವೆ ಎತ್ತರಕ್ಕೆ ಹೆಚ್ಚಿದ ಬೇಡಿಕೆ:  ಮಳೆಗಾಲದಲ್ಲಿ ಪದೇ ಪದೇ ಈ ಮಾರ್ಗ ಪ್ರವಾಹದಿಂದ ಮುಚ್ಚಿ ಹೋಗುತ್ತಿರುವುದರಿಂದ ಈ ಸೇತುವೆಯನ್ನು ಎತ್ತರ ಮಾಡಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ದುರಸ್ತಿಯಾಗದ ಮುಖ್ಯ ಸೇತುವೆ: ರಾಜ್ಯ ಹೆದ್ದಾರಿಯಲ್ಲಿರುವ ಮುಖ್ಯ ಸೇತುವೆ ಶಿಥಿಗೊಂಡಿದ್ದು ಅದರ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಪ್ರಸ್ತುತ ಬ್ರಿಟಿಷ್‌ ಕಾಲದ ಸೇತುವೆ ಮೇಲೆ ನಿಧಾನಕ್ಕೆ ಸಂಚಾರ ನಡೆದಿದೆ.
 

ಈ ಸೇತುವೆಗೂ ಪ್ರವಾಹದ ನೀರಿಗೂ ಕೇವಲ ಎರಡು ಅಡಿ ಮಾತ್ರ ಅಂತರವಿದೆ. ಪ್ರವಾಹ ಹೆಚ್ಚಾದರೆ ಈ ಮಾರ್ಗವೂ ಮುಚ್ಚಿಹೋಗುವ ಭೀತಿಯಲ್ಲಿ ಜನತೆ ಇದ್ದಾರೆ. ಪ್ರವಾಹ ಹೆಚ್ಚಿದರೆ  ವಿಜಾಪುರ ಹುಬ್ಬಳ್ಳಿ, ಮುದ್ದೇಬಿಹಾಳಗಳಿಗೆ ಹೋಗುವ ಎಲ್ಲ ರಸ್ತೆಗಳೂ ಬಂದ್‌ ಆಗುತ್ತವೆ. ಜೂನ್‌ ತಿಂಗಳಲ್ಲೇ ಮುಖ್ಯ ಸೇತುವೆ ದುರಸ್ತಿ ಕಾರ್ಯ ಆರಂಭಗೊಂಡಿದ್ದು 15 ದಿನಗ­ಳಲ್ಲಿ ಸೇತುವೆ ಕಾರ್ಯ ಮುಗಿಯಬ­ಹುದು ಎಂಬ ನಿರೀಕ್ಷೆಯಲ್ಲಿ ಜನತೆ­ಯದ್ದಾಗಿತ್ತು.

ಲೋಕೋಪಯೋಗಿ ಇಲಾಖೆ ಸಹ ದುರಸ್ತಿ ಪ್ರಾರಂಭವಾದ ತಿಂಗಳಲ್ಲಿ  ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದು ತಿಳಿಸಿದ್ದರು. ಆದರೆ ಸೆಪ್ಟೆಂಬರ್‌ ಬಂದರೂ ಸೇತುವೆ ಸಂಚಾರಕ್ಕೆ ತೆರೆದುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT