ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹ...

Last Updated 31 ಜನವರಿ 2012, 19:30 IST
ಅಕ್ಷರ ಗಾತ್ರ

ನಗರಗಳಲ್ಲಿ ಮನೆಯ ಮೇಲ್ಛಾವಣಿಗಳನ್ನು ಸಾಮಾನ್ಯವಾಗಿ ಆರ್‌ಸಿಸಿ, ಮಂಗಳೂರು ಹಂಚು, ಆಸ್‌ಬೆಸ್ಟೋಸ್/ ಗ್ಯಾಲ್ವನೈಸಡ್ ಐಯರ್ನ್ ಜಿಂಕ್ ಶೀಟ್‌ಗಳಿಂದ ನಿರ್ಮಿಸಲಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಮೇಲ್ಛಾವಣಿಯಲ್ಲಿ ಸಂಗ್ರಹವಾಗುವ ಮಳೆನೀರು ಸಾಮಾನ್ಯವಾಗಿ ನಿವೇಶನದ ಬದಿಯಲ್ಲಿರುವ ಚರಂಡಿಗಳಿಗೇ ಸೇರುತ್ತದೆ.

ಮೇಲ್ಛಾವಣಿಗಳನ್ನು ಸಾಮಾನ್ಯವಾಗಿ ಗಟ್ಟಿಯಾದ ವಸ್ತುವಿನಿಂದ ಮಾಡಿರುವುದರಿಂದ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುವುದರೊಂದಿಗೆ ಬಹುಪಾಲು ಬಿಸಿಲಿಗೆ ಆವಿಯಾಗಿ ಹೋಗುತ್ತದೆ.
 
ಹಾಗಾಗಿ ಮೇಲ್ಛಾವಣಿಯ ನೀರನ್ನು ಹಾಗೆಯೇ ಸಂಗ್ರಹ ಮಾಡಲು ಪ್ರತಿಯೊಬ್ಬರೂ ಗಮನ ಹರಿಸಬೇಕು. ಈ ನೀರನ್ನು ಒಂದೋ ಮೇಲ್ಛಾವಣಿಯಲ್ಲೇ ಸಂಗ್ರಹ ಮಾಡಬಹುದು ಅಥವಾ ನೆಲದ ಮೇಲೆ ಅಥವಾ ನೆಲದಡಿಯಲ್ಲಿ ಕಲ್ಲಿನಿಂದ ಕಟ್ಟಿದ ತೊಟ್ಟಿ, ಫೆರೊ ಸಿಮೆಂಟ್ ತೊಟ್ಟಿ ಅಥವಾ ಪ್ಲಾಸ್ಟಿಕ್/ ಲೋಹದ ತೊಟ್ಟಿಗಳಲ್ಲಿ ಸಂಗ್ರಹಿಸಬಹುದಾಗಿದೆ.

ಮಳೆನೀರು ಸಂಗ್ರಹದ ಹಂತಗಳು
 ಮೇಲ್ಛಾವಣಿಯನ್ನು ಸಮತಟ್ಟು ಮತ್ತು ಇಳಿಜಾರಿನ ಮೇಲ್ಛಾವಣಿ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಆರ್‌ಸಿಸಿಯಿಂದ ನಿರ್ಮಿಸಲಾದ ಸಮತಟ್ಟಿನ ಮೇಲ್ಛಾವಣಿಗಳ ತಳಭಾಗವು ಜಲನಿರೋಧಕವಾಗಿರುತ್ತದೆ.

ಮಳೆನೀರು ಸಂಗ್ರಹಿಸುವ ತೊಟ್ಟಿಯತ್ತ ಮೇಲ್ಛಾವಣಿ ಇಳಿಜಾರಾಗಿದ್ದ್ಲ್ಲಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆನೀರನ್ನು ಸಂಗ್ರಹಿಸಲು ಸಾಧ್ಯ. ಇದರಿಂದ ಮೇಲ್ಛಾವಣಿಯಿಂದ ಕೊಳವೆಯವರೆಗಿನ ಉದ್ದವೂ ಕಡಿಮೆಯಾಗುತ್ತದೆ.

ಆರ್‌ಸಿಸಿ, ಮಂಗಳೂರು ಹಂಚು, ಆಸ್‌ಬೆಸ್ಟೋಸ್ ಶೀಟ್‌ಗಳು ಅಥವಾ ಸ್ಟೀಲ್ಶೀಟ್‌ಗಳನ್ನು ಹೊಂದಿರುವ ಇಳಿಜಾರಿನ ಮೇಲ್ಛಾವಣಿಯಲ್ಲಿ ಮಳೆ ನೀರು ಮೇಲ್ಛಾವಣಿಯ ಕೆಳತುದಿಗೆ ಹರಿಯುತ್ತದೆ. ಇಲ್ಲಿ ಲೋಹ ಅಥವಾ ಪಿವಿಸಿ ಪೈಪ್‌ನಿಂದ ಮಾಡಲಾದ ಕೊಳವೆಯನ್ನು ಅಳವಡಿಸುವ ಮೂಲಕ ಮಳೆ ನೀರು ಕೆಳಕ್ಕೆ ಹರಿಯುವಂತೆ ಮಾಡಬಹುದಾಗಿದೆ.
 
ಮಾರ್ಗಗಳು: ಮೇಲ್ಛಾವಣಿಯಲ್ಲಿ ಸಂಗ್ರಹವಾದ ನೀರನ್ನುತೊಟ್ಟಿಗಳಲ್ಲಿಸಂಗ್ರಹಿಸುವಮುನ್ನ ಸೋಸುವಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಿವಿಸಿ, ಎಚ್‌ಡಿಪಿ ಅಥವಾ ಸಿಮೆಂಟ್‌ನಿಂದ ನಿರ್ಮಿಸಲಾದ ಕೆಳಮುಖವಾಗಿ ಹರಿಯುವ ಪೈಪ್‌ಗಳ ಮೂಲಕ ನೀರನ್ನುಸೋಸುವಿಕೆಯ ಸಲಕರಣೆಯತ್ತ ತರಬೇಕು. ಮಾತ್ರವಲ್ಲ ಮೇಲ್ಛಾವಣಿಯ ಅಳತೆಗೆ ತಕ್ಕಂತೆ ಈ ಪೈಪ್‌ಗಳನ್ನು ಅಳವಡಿಸಬೇಕು.
 
ಸೋಸುವಿಕೆ: ಮೇಲ್ಛಾವಣಿಯಲ್ಲಿ ಸಂಗ್ರಹವಾಗುವ ಮಳೆನೀರು ಶುದ್ಧವಾಗಿದ್ದರೂ ಕೆಲವೊಮ್ಮೆ ಹಕ್ಕಿಯ ಹಿಕ್ಕೆ, ದೂಳು, ಮರದ ಎಲೆಗಳು ಮುಂತಾದವುಗಳು ಸೇರಿ ಕಲುಷಿತಗೊಳ್ಳುವ ಸಾಧ್ಯತೆ ಇದೆ.
 
ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಮುನ್ನ ಸೋಸುವಿಕೆ ಕ್ರಿಯೆಗೆ ಒಳಪಡಬೇಕ್ದ್ದಾದು ಅಗತ್ಯವಾಗಿದೆ. ಸೋಸುವಿಕೆಯ ಹಲವು ವಿಧಾನಗಳಿದ್ದು, ಸ್ಯಾಂಡ್ ಬೆಡ್ ಫಿಲ್ಟರ್, ಪಾಪ್-ಅಪ್ ಫಿಲ್ಟರ್ ಮತ್ತು ಸ್ಟೆಬಿಲೈಸೇಶನ್ ಫಿಲ್ಟರ್ ಹೀಗೆ ವಿವಿಧ ವಿಧಾನಗಳಿವೆ.

ಸ್ಯಾಂಡ್ ಬೆಡ್ ಫಿಲ್ಟರ್: ಇದು ಸಾಂಪ್ರದಾಯಿಕ ರೀತಿಯ ಸೋಸುವ ವಿಧಾನವಾಗಿದೆ. ಈ ವಿಧಾನದಲ್ಲಿ ಒರಟಾದ ಮರಳು, ಸಣ್ಣ ಕಲ್ಲು ಮತ್ತು ಜಲ್ಲಿಕಲ್ಲುಗಳನ್ನು ಒಂದರ ಮೇಲೆ ಒಂದರಂತೆ ಪದರ ಪದರವಾಗಿ ಇರಿಸಲಾಗುತ್ತದೆ. ಈ ಫಿಲ್ಟರ್‌ನ ಮೂಲಕ ಒಂದೆಡೆ ಸೇರಿಕೊಳ್ಳುವ ನೀರು ಮತ್ತೊಂದೆಡೆಯಿಂದ ಶುದ್ಧಿಗೊಂಡು ಹೊರಬರುತ್ತದೆ.
 
ಪಾಪ್ ಅಪ್ ಫಿಲ್ಟರ್: ಇದು ರಿಸೆಪ್ಟರ್, ಫ್ಲಷ್ ವಾಲ್ವ್ ಮತ್ತು ಫಿಲ್ಟರ್ ಎಂಬ ಮೂರು ಘಟಕಗಳನ್ನು ಹೊಂದಿದ್ದು, ಮನೆಗಳಲ್ಲಿ ಮತ್ತು ಸಣ್ಣ ಸಂಸ್ಥೆಗಳಲ್ಲಿ ಅಥವಾ ಕೈಗಾರಿಕಾ ಕಟ್ಟಡಗಳಲ್ಲಿ ಇವುಗಳು ಬಹಳ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತದೆ.
 
ಸ್ಟಾಬಿಲೈಸೇಷನ್ ಟ್ಯಾಂಕ್: ಮಳೆ ನೀರು ಹಲವು ಸಣ್ಣ ಸಣ್ಣ ತೊಟ್ಟಿಗಳ ಮೂಲಕ ಹರಿದು ಹೋಗುವುದರಿಂದ ದೊಡ್ಡ ಪ್ರಮಾಣದ ಕಷ್ಮಲಗಳು ಮೊದಲನ ಎರಡು ತೊಟ್ಟಿಗಳಲ್ಲಿ ಸಂಗ್ರಹಗೊಳ್ಳೂತ್ತದೆ.

ನೀರು ಕೆಳಮುಖವಾಗಿ ಹರಿಯುತ್ತಿದ್ದಂತೆಯೇ ಸಣ್ಣ ಹಾಗೂ ತೇಲುವ ಕಷ್ಮಲಗಳು ಮೂರು ಹಾಗೂ ನಾಲ್ಕನೇ ತೊಟ್ಟಿಯಲ್ಲಿ ಸಂಗ್ರಹಗೊಳ್ಳುತ್ತವೆ. ಆದರೆ,
ಈವಿಧಾನದಲ್ಲಿತೊಟ್ಟಿಗಳನ್ನು ನಿಯಮಿತವಾಗಿ ಶುದ್ಧಿಗೊಳಿಸುವುದು ಅಗತ್ಯವಾಗಿದೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT