ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹಕ್ಕೆ ಕಾಯಕಲ್ಪ

ಪ್ರಜಾವಾಣಿ ಫಲಶ್ರುತಿ
Last Updated 3 ಸೆಪ್ಟೆಂಬರ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಮಳೆ ನೀರು ಸಂಗ್ರಹ ಯೋಜನೆಗೆ ಕೊನೆಗೂ ಕಾಯಕಲ್ಪ ದೊರೆತಿದೆ.
ವಿಧಾನಸೌಧದ ದಕ್ಷಿಣ ಭಾಗದ ಚಾವಣಿಯ ಮೇಲೆ ಸುರಿಯುವ ನೀರನ್ನು ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಎರಡು ತೊಟ್ಟಿಗಳಲ್ಲಿ ಸಂಗ್ರಹಿಸುವ ಯೋಜನೆ ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. 5800 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ವಿಧಾನಸೌಧದ ದಕ್ಷಿಣ ಭಾಗದಿಂದ ಒಟ್ಟು 4 ಲಕ್ಷ ಲೀಟರ್ ಸಾಮರ್ಥ್ಯದ ತೊಟ್ಟಿಗಳಲ್ಲಿ ನೀರು ಸಂಗ್ರಹಿಸುವುದು ಯೋಜನೆಯ ಉದ್ದೇಶವಾಗಿತ್ತು.

ಆದರೆ, ಈ ಯೋಜನೆ ನಿಷ್ಕ್ರಿಯ ವಾಗಿರುವ ಕುರಿತು `ಪ್ರಜಾವಾಣಿ' ಆ.14ರಂದು `ವಿಧಾನಸೌಧದಲ್ಲಿ ವಿಫಲವಾದ ಮಳೆ ನೀರು ಸಂಗ್ರಹ' ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಪ್ರಕಟಿಸಿತ್ತು.

ಈ ವರದಿಯಿಂದ ಎಚ್ಚೆತ್ತುಗೊಂಡ ಲೋಕೋಪಯೋಗಿ ಇಲಾಖೆ ತೊಟ್ಟಿಗಳು ಹಾಗೂ ಪೈಪ್‌ಗಳನ್ನು ದುರಸ್ತಿಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT