ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ ಪ್ರದೇಶಗಳಿಗೆ ನಾಳೆ ಕೇಂದ್ರ ತಂಡದ ಭೇಟಿ

Last Updated 24 ಸೆಪ್ಟೆಂಬರ್ 2013, 8:26 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಹಾನಿಗೆ ಒಳಗಾದ ಪ್ರದೇಶಗಳ ಪರಿವೀಕ್ಷಣೆ ನಡೆಸಲು ಸೆ.25ರಂದು ಕೇಂದ್ರದ ತನಿಖಾ ತಂಡ ಆಗಮಿಸಿ ಪರಿಶೀಲಿಸಲಿದೆ.

ಈ ಭೇಟಿಗೆ ಸಂಬಂಧಿಸಿದಂತೆ ಭೇಟಿಯ ಸ್ಥಳ ಮತ್ತು ಸಮಯದ ವಿವರ ಈ ಕೆಳಕಂಡಂತಿದೆ.
ಸೆ. 25ರಂದು ಬೆಳಿಗ್ಗೆ 7.45ಕ್ಕೆ ಜೋಗ, 8.45ಕ್ಕೆ ಕಾನ್ಲೆ, 9.15ಕ್ಕೆ ಮಂಡಗಳಲೆ, 9.30ಕ್ಕೆ ಹುಳಿಗಾರು, 9.55ಕ್ಕೆ ಪುರಪ್ಪೆಮನೆ ಗ್ರಾಮಗಳ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಈ ಪ್ರದೇಶದ ರೈತರೊಂದಿಗೆ ಸಮಾಲೋಚನೆ ನಡೆಸುವರು. ನಂತರ 9.55ಕ್ಕೆ ಪುರಪ್ಪೆಮನೆಯಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳ ಪ್ರಗತಿ ಪರಿಶೀಲಿಸುವರು. 10.30ಕ್ಕೆ ಹೊಸನಗರ, 11.20ಕ್ಕೆ ಅರಗ ಗ್ರಾಮದ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 12.05ಕ್ಕೆ ಅರಗದಲ್ಲಿ ಮಳೆಯಿಂದ ಹಾನಿಗೊಳಗಾದ ಕಾಲುವೆಯನ್ನು ವೀಕ್ಷಿಸುವರು. 12.15ಕ್ಕೆ ಅರಗ, ತೀರ್ಥಹಳ್ಳಿ ಮತ್ತು ತಳಗೆರೆ(ಆಗುಂಬೆ) ಯಲ್ಲಿ ಬೆಳೆಹಾನಿ ಪ್ರದೇಶಗಳನ್ನು ವೀಕ್ಷಿಸಿ, ರೈತರೊಂದಿಗೆ ಸಮಾಲೋಚನೆ ನಡೆಸುವರು.

ಈ ಸಂದರ್ಭದಲ್ಲಿ ಸಂಬಂಧಿತ ಪ್ರದೇಶಗಳ ರೈತರು ತಂಡದ ಭೇಟಿ ಸ್ಥಳದಲ್ಲಿದ್ದು ತಮ್ಮ ಅಹವಾಲುಗಳು ಅಥವಾ ವಾಸ್ತವ ಸಂಗತಿಗಳನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT