ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಸಮುದಾಯ ಭವನ ಉದ್ಘಾಟನೆ

Last Updated 3 ಜೂನ್ 2011, 8:20 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಬುಧವಾರ ಸಂಜೆ ಹಿಂದಿನ ಪೀಠಾಧಿಪತಿ ಮುರುಘರಾಜೇಂದ್ರ ಶಿವಾಚಾರ್ಯರ 18ನೇ ಪುಣ್ಯಸ್ಮರಣೋತ್ಸವ ಹಾಗೂ ಸಮುದಾಯ ಭವನ ಉದ್ಘಾಟಾನ ಸಮಾರಂಭ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ ಲಿಂಗನಿಷ್ಠೆ, ಸದಾ ಪೂಜಾ ಸಂಪನ್ನರಾದ ಮುರುಘರಾಜೇಂದ್ರರು ಭಕ್ತರ ಕಷ್ಟಗಳಿಗೆ ಸ್ಪಂದಿಸಿ ಭಕ್ತರಿಗೆ ಒಳ್ಳೆಯದನ್ನೆ ಬಯಸಿದವರಾಗಿದ್ದರು ಎಂದರು. ಶ್ರೀಮಠಕ್ಕೆ ಅವರ ಉತ್ತರಾಧಿಕಾರಿಗಳಾಗಲಿರುವ ರುದ್ರದೇವರು ಎಂ.ಎ.ಪದವಿಧರರಾಗಿದ್ದು ಶ್ರೀಮಠದಿಂದ ಪ್ರಗತಿಪರ ಚಟುವಟಿಕೆ ನಿರ್ವಹಿಸಲು ಭಕ್ತರು ಸಹಕರಿಸಬೇಕೆಂದು ನಂದವಾಡಗಿ ಶ್ರೀಗಳು ಆಶೀವರ್ಚನ ನೀಡಿದರು.

ಮಠಗಳು ಸಾಂತ್ವನ ಕೇಂದ್ರಗಳಾಗಿವೆ ಎಂದು ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಜಿ ತಿಳಿಸಿದರು.ಡಾ.ಚನ್ನಬಸವ ದೇವರು, ಜಿಲ್ಲಾ ಪಂಚಾಯತ್ ಸದಸ್ಯರಾದ ಮಹಾದೇವಪ್ಪಗೌಡ ಮಾತನಾಡಿದರು. ಗಚ್ಚಿನಮಠದ ರುದ್ರದೇವರು ನೇತೃತ್ವ ಬಹಿಸಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಗೋನ್ವಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀಲಮ್ಮ ಮರಳದ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ.ಮುರಾರಿ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ, ಹನುಮಂತಪ್ಪ ಮೋಚಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಪತ್ರೆಯ್ಯಸ್ವಾಮಿ ಹಿರೇಮಠ ಹುಲ್ಲೂರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿದರು. ನಾಗಭೂಷಣ ನಂದಿಹಾಳ ಶಿಕ್ಷಕರು ನಿರ್ವಹಿಸಿದರು. ಸಿದ್ರಾಮಯ್ಯ ಗಡ್ಡಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT