ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರಸ್ವಾಮಿ ಮಹೋತ್ಸವ ಇಂದಿನಿಂದ

Last Updated 6 ಫೆಬ್ರುವರಿ 2012, 7:40 IST
ಅಕ್ಷರ ಗಾತ್ರ

ಸರಗೂರು: ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಫೆ. 6 ರಿಂದ 8 ರವರೆಗೆ ನಡೆಯಲಿದೆ.

ಸೋಮವಾರ ಬೆಳಿಗ್ಗೆ 6 ಗಂಟೆಗೆ ಮಹಾರುದ್ರಾಭಿಷೇಕ, ಬೆಳಿಗ್ಗೆ 7 ರಿಂದ 10 ಗಂಟೆಯವರಗೆ ನಾಗಣಾಪುರ ನಡುಕೆರೆ ಶ್ರೀ ಮಹದೇಶ್ವರಸ್ವಾಮಿ ಸಂಘದ ವತಿಯಿಂದ ಭಜನೆ, ಸಂಜೆ 7 ರಿಂದ ರಾತ್ರಿ 10 ರವರೆಗೆ ಕೆಂಚನಹಳ್ಳಿ ಪ್ರೌಢಶಾಲೆ ಮಕ್ಕಳಿಂದ ಕಂಸಾಳೆ ನೃತ್ಯ ಹಾಗೂ ಉಮಾಪತಿ ತಂಡದವರಿಂದ ಭಕ್ತಿ ಗೀತೆಗಳು ನಡೆಯಲಿವೆ.

ಅದೇ ದಿನ ರಾತ್ರಿ 10 ರಿಂದ 12 ರವರೆಗೆ ಕೆಂಚನಹಳ್ಳಿ ಕಲಾ ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯುವುದು. ರಾತ್ರಿ 12ಕ್ಕೆ ಈ-ಟಿವಿ ಮತ್ತು ಝೀ-ಟಿವಿ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ ಇದೆ. ಇದೇ ವೇಳೆ ಹಾಲುಹರವಿ ಸೇವೆ, ಸ್ವಾಮಿಯ ಮೆರವಣಿಗೆ ನಂತರ ಕೊಂಡೋತ್ಸವ ನಡೆಯಲಿದೆ.

ಫೆ. 7 ರಂದು ಬೆಳಿಗ್ಗೆ 6 ಕ್ಕೆ ಸಹಸ್ರ ಬಿಲ್ವಾರ್ಚನೆ, 9 ಕ್ಕೆ ಮಹಾಮಂಗಳಾರತಿ, ಸಂಜೆ 5 ರಿಂದ 7 ಗಂಟೆವರೆಗೆ ಕೆಂಚನಹಳ್ಳಿ ಪ್ರೌಢಶಾಲೆ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಲಿವೆ. ರಾತ್ರಿ 8 ರಿಂದ 11 ರವರೆಗೆ ಪ್ರಿಯಾ ಥಿಯೇಟರ್ ಕಲಾವಿದರಿಂದ ರಂಗಗೀತೆಗಳ ಗಾಯನ ನಡೆಯಲಿದೆ. ರಾತ್ರಿ 10 ಗಂಟೆಗೆ ಆನೆ ವಾಹನೋತ್ಸವ, 11 ಗಂಟೆಗೆ ಮೈಸೂರಿನ ವಿ.ಮಾಲಿನಿ `ಶಿವಕಥೆ~ ಪ್ರಸ್ತುತಪಡಿಸಲಿದ್ದಾರೆ.

ಫೆ. 8 ರಂದು ಬೆಳಿಗ್ಗೆ 6 ಕ್ಕೆ ಸ್ವಾಮಿಗೆ ಬಿಲ್ವಾರ್ಚನೆ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಮಧ್ಯಾಹ್ನ 2 ರಿಂದ 5 ಗಂಟೆ ವರಗೆ ತೆಲಗುಮಸಹಳ್ಳಿ ಗುರುಮಲ್ಲೇಶ್ವರ ಸಂಗದವರಿಂದ ಭಜನೆಗಳು ನಡೆಯಲಿವೆ.

ಅದೇ ದಿನ ಸಂಜೆ 6 ಗಂಟೆಗೆ ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಚಿಕ್ಕಣ್ಣ ಅಧ್ಯಕ್ಷತೆ ವಹಿಸುವರು. ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಕಾರ್ಯಕ್ರಮದ ಉದ್ಘಾಟಿಸುವರು. ಸಚಿವ ಸಿ.ಎಚ್. ವಿಜಯಶಂಕರ್ ದನಗಳ ಪರಿಷೆ ಉದ್ಘಾಟಿಸುವರು. ಸಂಸದ ಆರ್. ಧ್ರುವನಾರಾಯಣ ಬಹುಮಾನ ವಿತರಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಧುರೀಣ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ತೋಂಟದಾರ್ಯ, ಸಂದೇಶ್ ನಾಗರಾಜು, ಚಿಕ್ಕಮಾದು, ಸಿದ್ದರಾಜು, ಮಾಜಿ ಸಚಿವ ಎಂ.ಶಿವಣ್ಣ, ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಎಂ.ಪಿ.

ವೆಂಕಟೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಮೈಸೂರು ನಗರಾಭಿವೃದ್ಥಿ ಪ್ರಾಧಿಕಾರದ ಅಧ್ಯಕ್ಷ ಎಲ್.ನಾಗೇಂದ್ರ, ಕಾವೇರಿ ಜಲನಯನ ಅಭಿಯಂತರ ವರದರಾಜು, ಉಪ ವಿಭಾಗಾಧಿಕಾರಿ ಲಿಂಗಮೂರ್ತಿ, ತಹಶೀಲ್ದಾರ್ ಸಿ.ಎನ್. ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೆ.ಎನ್. ಅಣ್ಣೇಗೌಡ,  ತೋಟಗಾರಿಕೆ ಉಪ ನಿರ್ದೇಶಕ ಸಿ.ನಾಗರಾಜು, ಕರ್ನಾಟಕ ಕೃಷಿ ಮಾರಾಟ ಮಂಡಳಿ ಎಂ.ಎನ್. ಅಶೋಕ್‌ಕುಮಾರ್, ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಡಿ.ಸಿ. ಸಿದ್ದಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರು ಬಿ.ಮಹೇದ್ರ, ಅಮ್ಮಣ್ಣಿ ವೆಂಕಟೇಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಶಿವರಾಮು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್.ಸಿ. ಮಂಜುನಾಥ್, ಡಿ.ಎಂ. ಚಿಕ್ಕಣ್ಣೇಗೌಡ, ನಂದಿನಿ ಚಂದ್ರಶೇಖರ್, ಎಚ್.ಆರ್. ಭಾಗ್ಯಲಕ್ಷ್ಮಿ, ಪದ್ಮ ಬಸವರಾಜು, ಎಂ.ರಾಜಲಕ್ಷ್ಮಿ, ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಟಿ. ನರಸಿಂಹಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಳಿಕ ಸಂಜೆ 9ಕ್ಕೆ ಮಹಾಮಂಗಳಾರತಿ, 9.30 ರಿಂದ 1.30 ರವರೆಗೆ ಮೈಸೂರಿನ ರಂಗಸ್ವಾಮಿ ವಾದ್ಯ ವೃಂದ ಹಾಗೂ 1.30 ರಿಂದ ನಂಜನಗೂಡು ಶಿವರಂಜನಿ ಮೆಲೋಡಿಸ್ ಅವರಿಮದ ಆರ್ಕೆಸ್ಟ್ರಾ ನಡೆಯುತ್ತದೆ.
ಮಧರಾತ್ರಿ ಕಪಿಲಾ ನದಿ ಹಿನ್ನೀರಿನಲ್ಲಿ ಮಹದೇಶ್ವರಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT