ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕೂಟದಲ್ಲಿ ಭಕ್ತರ ಪುಣ್ಯಸ್ನಾನ

Last Updated 14 ಆಗಸ್ಟ್ 2012, 7:20 IST
ಅಕ್ಷರ ಗಾತ್ರ

ಬಾದಾಮಿ: ಇಲ್ಲಿಗೆ ಸಮೀಪದ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರವಾಗಿರುವ ಮಹಾಕೂಟೇಶ್ವರ ದೇವಾಲಯದ ವಿಷ್ಣು ಪುಷ್ಕರಣಿ ಮತ್ತು ಕಾಶಿ ಹೊಂಡದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು.

ಶ್ರಾವಣ ಮಾಸದ ಕಡೆ ಸೋಮವಾರ ಅಂಗವಾಗಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಪುಣ್ಯಸ್ನಾನದ ನಂತರ ದೇವಾಲಯಲ್ಲಿ ಮಹಾಕೂಟೇಶ್ವರ ಮೂರ್ತಿಗೆ ಶ್ರದ್ಧೆ ಭಕ್ತಿಯಿಂದ ಹೂವು, ಕಾಯಿ, ಹಣ್ಣು, ಕರ್ಪೂರ, ಎಣ್ಣೆದೀಪದ ಜೊತೆಗೆ ಆರಾಧಿಸಿದರು.

ತಮ್ಮ ವಾಹನಗಳ ಮೂಲಕ ಕುಟುಂಬವರ್ಗ, ಸ್ನೇಹಿತರು ಆಗಮಿಸಿದ್ದರು. ನಂತರ  ಕಟ್ಟಿಕೊಂಡು ಬಂದ ಅಡಿಗೆಯನ್ನು ತೋಟದಲ್ಲಿ,ಬೆಟ್ಟದ ಮೇಲೆ ಕುಳಿತು ಸವಿದರು. ವಿವಿಧ ಗ್ರಾಮಗಳಿಂದ ಭಜನೆಗಳ ತಂಡಗಳು ಆಗಮಿಸಿದ್ದವು.

ಹುಲಿಗೆಮ್ಮನಕೊಳ್ಳ, ಸಿದ್ದಪ್ಪನಕೊಳ್ಳ, ಪಟ್ಟದಕಲ್ಲು, ಶಿವಯೋಗ ಮಂದಿರ ಹಾಗೂ ಬನಶಂಕರಿ ದೇವಾಲಯಕ್ಕೂ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಈ ಬಾರಿ ಮುಂಗಾರು ಮಳೆಯ ಅಭಾವದ ಕಾರಣ ಭಕ್ತರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT