ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ ನ್ಯಾಯಮಂಡಳಿ ರಾಜ್ಯಕ್ಕೆ ಭೇಟಿ

Last Updated 16 ಡಿಸೆಂಬರ್ 2013, 20:19 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್‌ ನೇತೃತ್ವದ ಮಹಾದಾಯಿ ನ್ಯಾಯ­ಮಂಡಳಿ­ಯು ಬುಧವಾರದಿಂದ (ಡಿ.18­ರಿಂದ 23ರವರೆಗೆ) ಆರು ದಿನಗಳ ಕಾಲ ರಾಜ್ಯದ ಮಹಾದಾಯಿ ಕಣಿವೆ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ, ಮಾಹಿತಿ ಸಂಗ್ರಹಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಸೋಮವಾರ ವಿಧಾನಸೌಧ­ದಲ್ಲಿ ಪತ್ರಕರ್ತರ ಜೊತೆ ಮಾತ­ನಾಡಿದ ಅವರು, ‘ನ್ಯಾ.­ಪಾಂಚಾಲ್‌, ನ್ಯಾ.­ವಿನಯ್‌ ಮಿತ್ತಲ್, ನ್ಯಾ.ಪಿ.ಎಸ್‌.­ನಾರಾಯಣ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ತಾಂತ್ರಿಕ ಸಮಿತಿಯ ಸದಸ್ಯರು ಹಾಗೂ ಉಭಯ ರಾಜ್ಯಗಳ ವಕೀಲರು ಈಗಾಗಲೇ ಗೋವಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಬುಧವಾರ ಅಂತಾರಾ ಅಣೆಕಟ್ಟೆಯಿಂದ ರಾಜ್ಯದಲ್ಲಿ ಪ್ರವಾಸ ಆರಂಭಿಸಲಿದ್ದಾರೆ’ ಎಂದರು. ಶನಿವಾರದವರೆಗೂ ಈ ತಂಡ ಕಳಸಾ, ಬಂಡೂರ, ಸೂಪಾ, ಮಲ­ಪ್ರಭಾ ಅಣೆಕಟ್ಟೆ ಮತ್ತಿತರ ಕಡೆಗಳಲ್ಲಿ ಪರಿಶೀಲನೆ ನಡೆಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT