ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಐದು ಅಂತಸ್ತಿನ ಕಟ್ಟಡ ಕುಸಿತ

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಠಾಣೆ (ಐಎಎನ್‌ಎಸ್‌): ಇಲ್ಲಿನ ಮುಂಬ್ರ ಪಟ್ಟಣದಲ್ಲಿ ಶನಿವಾರ ಐದು ಅಂತಸ್ತಿನ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಮೂವರು ಕಟ್ಟಡದಡಿ ಸಿಲುಕಿರುವ ಶಂಕೆ ವ್ಯಕ್ತ ಪಡಿಸಲಾಗಿದೆ. ಆದರೆ ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು ಸಂಭವಿಸಿಲ್ಲ.

ರೈಲ್ವೆನಿಲ್ದಾಣದ ಎದುರಿಗಿರುವ ಬನೂ ಅಪಾರ್ಟ್‌ಮೆಂಟ್ ಶನಿವಾರ ಮುಂಜಾನೆ ಕುಸಿದಿದೆ. ಅಪಾರ್ಟ್‌ಮೆಂಟಿನಲ್ಲಿ 42 ಕುಟುಂಬಗಳು ವಾಸವಾಗಿದ್ದು, ಕಟ್ಟಡ ಅದು ರುತ್ತಿದ್ದಂತೆಯೇ ಸುಮಾರು 100 ಜನರು ಕಟ್ಟಡದಿಂದ ಹೊರಬಂದು ಜೀವ ಉಳಿಸಿ ಕೊಂಡರು ಎಂದು ಮೂಲಗಳು ತಿಳಿಸಿವೆ. ಕಟ್ಟಡದ ಅವಶೇಷಗಳಡಿ ಮೂವರು ಸಿಲುಕಿ ರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

‘ಸಣ್ಣ ನಗರ, ಪಟ್ಟಣಗಳಲ್ಲಿ 100 ವಿಮಾನ ನಿಲ್ದಾಣ’
ಕಿಶನ್‌ಗಡ (ಅಜ್ಮೇರ್‌) (ಪಿಟಿಐ):
ಸಣ್ಣ ನಗರಗಳು, ಪಟ್ಟಣಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಸಲುವಾಗಿ 2020ರ ವೇಳೆಗೆ 100 ನಿಲ್ದಾಣಗಳನ್ನು ನಿರ್ಮಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಯೋಜನೆಯಡಿಯ ಮೊತ್ತಮೊದಲ ನಿಲ್ದಾಣವು ರಾಜಸ್ತಾನದ ಅಜ್ಮೇರ್‌ ಜಿಲ್ಲೆಯ ಕಿಶನ್‌ಗಡದಲ್ಲಿ ನಿರ್ಮಾಣವಾಗಲಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ನಿಲ್ದಾಣದ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

‘ಈ ಮುಂಚೆ ಮೆಟ್ರೊ ನಗರಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಿತ್ತು. ಆದರೆ ಈಗ ರಾಷ್ಟ್ರದ ಸಣ್ಣ ನಗರಗಳು, ಪಟ್ಟಣಗಳಿಗೆ ವಿಮಾನ ಸಂಪರ್ಕ ಕಲ್ಪಿಸಬೇಕೆಂಬುದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಇದಕ್ಕಾಗಿ 2020ರ ವೇಳೆಗೆ 100 ವಿಮಾನ ನಿಲ್ದಾಣಗಳ ಜಾಲ ನಿರ್ಮಾಣವಾಗಲಿದ್ದು, ವಾರ್ಷಿಕ 30 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿವೆ’ ಎಂದು ಮನಮೋಹನ್‌ ಸಿಂಗ್‌ ಈ ಸಂದರ್ಭದಲ್ಲಿ ತಿಳಿಸಿದರು.

161 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಲಿರುವ ಕಿಶನ್‌ಗಡದ ವಿಮಾನ ನಿಲ್ದಾಣವನ್ನು 2016ರಲ್ಲಿ ಪ್ರಯಾಣಿಕರ ಬಳಕೆಗೆ ಲಭ್ಯವಾಗಿಸುವ ಗುರಿ ಇದೆ. ಇದು ಈ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT