ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ, ಛತ್ತೀಸಗಡಕ್ಕೆ ಪ್ರಶಸ್ತಿ

ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌
Last Updated 22 ಸೆಪ್ಟೆಂಬರ್ 2013, 19:39 IST
ಅಕ್ಷರ ಗಾತ್ರ

ದಾವಣಗೆರೆ: ಉತ್ತಮ ಪ್ರದರ್ಶನ ತೋರಿದ ಮಹಾರಾಷ್ಟ್ರ ಪುರುಷರು ಹಾಗೂ ಛತ್ತೀಸಗಡ ಮಹಿಳೆಯರು ಇಲ್ಲಿನ ರೇಣುಕಾ ಮಂದಿರದಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ನ ಚಾಂಪಿಯನ್ನರಾದರು.

ಮಹಿಳೆಯರ ಮತ್ತು ಪುರುಷರ ವಿಭಾಗಗಳ ಮೊದಲ ಮತ್ತು ದ್ವಿತೀಯ ಸ್ಥಾನಗಳನ್ನು ಈ ಎರಡೂ ರಾಜ್ಯಗಳ ತಂಡಗಳು ಗಿಟ್ಟಿಸಿಕೊಂಡವು.

ಒಟ್ಟು 662.5 ಕೆ.ಜಿ ಎತ್ತಿದ ಮಹಾರಾಷ್ಟ್ರದ ಪರ್ವಿಂದರ್ ಸಿಂಗ್‌ ‘ಸ್ಟ್ರಾಂಗ್‌ಮ್ಯಾನ್‌ ಆಫ್‌ ಇಂಡಿಯಾ’ ಹಾಗೂ ಒಟ್ಟು 260 ಕೆ.ಜಿ. ಎತ್ತಿದ ಛತ್ತೀಸಗಡದ ಹೇಮಲತಾ ಕೊಸರೆ ‘ಸ್ಟ್ರಾಂಗ್ ವುಮೆನ್‌ ಆಫ್‌ ಇಂಡಿಯಾ’ ಗೌರವಕ್ಕೆ ಪಾತ್ರರಾದರು.

ಮಾಸ್ಟರ್‌ 1 ವಿಭಾಗದಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ್‌ ಮೇಧೆ 377.50 ಕೆ.ಜಿ ಎತ್ತಿದರೆ, ಮಾಸ್ಟರ್‌ 2 ವಿಭಾಗದಲ್ಲಿ ಛತ್ತೀಸಗಡದ ಅರ್ಜುನ್‌ ಸಗರ್‌ವಂಶಿ 535 ಕೆ.ಜಿ., ಮಾಸ್ಟರ್‌ 3 ವಿಭಾಗದಲ್ಲಿ ಮಧ್ಯಪ್ರದೇಶದ ಗೋವರ್ಧನ್‌ ಪಿ. ಜಡಿನ್‌ 390 ಕೆ.ಜಿ ಎತ್ತಿ ಇದೇ ಗೌರವ ಗಿಟ್ಟಿಸಿಕೊಂಡರು.

210 ಕೆ.ಜಿ. ಎತ್ತಿದ ಚತ್ತೀಸಗಡದ ರೀಟಾ ರಾಣಿ ಲಾಲ್‌ ಮಾಸ್ಟರ್‌ ವಿಭಾಗದಲ್ಲಿ ಸ್ಟ್ರಾಂಗ್ ವುಮೆನ್‌ ಆಫ್‌ ಇಂಡಿಯಾ ಗೌರವ ಪಡೆದರು.

ಫಲಿತಾಂಶ: ಪುರುಷರು: 74 ಕೆ.ಜಿ. ಮಾಸ್ಟರ್ಸ್‌ 2: ಸಂದೀಪ್‌ ಕೆ.ಕುಲಕರ್ಣಿ (ಮಹಾರಾಷ್ಟ್ರ, ಸ್ಕ್ವಾಟ್‌ 132.5, ಬೆಂಚ್‌ ಪ್ರೆಸ್‌ 82.5, ಡೆಡ್‌ ಲಿಫ್ಟ್‌ 165, ಒಟ್ಟು 380)–1, ಅಮಿತ್ ಮುಖರ್ಜಿ (ಪಶ್ಚಿಮ ಬಂಗಾಳ, ಸ್ಕ್ವಾಟ್‌ 127.5, ಬೆಂಚ್ ಪ್ರೆಸ್‌ 92.5, ಡೆಡ್‌ ಲಿಫ್ಟ್‌ 157.5, ಒಟ್ಟು 377.5)–2.

ಮಾಸ್ಟರ್ಸ್‌ 3: ಸತ್ಯನಾರಾಯಣ್‌ (ಮಹಾರಾಷ್ಟ್ರ, ಸ್ಕ್ವಾಟ್‌ 65, ಬೆಂಚ್ ಪ್ರೆಸ್‌ 60, ಡೆಡ್‌ ಲಿಫ್ಟ್‌ 90, ಒಟ್ಟು 215)–1.83 ಕೆ.ಜಿ ಕ್ಲಾಸ್‌: ಪರ್ವಿಂದರ್‌ ಸಿಂಗ್‌ (ಮಹಾರಾಷ್ಟ್ರ ಸ್ಕ್ವಾಟ್‌ 260, ಬೆಂಚ್ ಪ್ರೆಸ್‌ 150, ಡೆಡ್‌ ಲಿಫ್ಟ್‌  252.5, ಒಟ್ಟು 662.5)–1. ಮಧು ಎಸ್ (ಕರ್ನಾಟಕ, ಸ್ಕ್ವಾಟ್‌ 225, ಬೆಂಚ್ ಪ್ರೆಸ್‌ 135, ಡೆಡ್‌ ಲಿಫ್ಟ್‌ 245, ಒಟ್ಟು 605)–2.

ಮಾಸ್ಟರ್ಸ್‌ 1 : ಸುಶೀಲ್‌ ಥಾಕ್ರೆ (ಮಹಾರಾಷ್ಟ್ರ, ಸ್ಕ್ವಾಟ್‌ 127.5,  ಬೆಂಚ್ ಪ್ರೆಸ್‌ 105, ಡೆಡ್‌ ಲಿಫ್ಟ್‌ 160, ಒಟ್ಟು 392.5)–1, ಮಹೇಂದ್ರ ಕುಮಾರ್‌ ಟೇಕಮ್‌ (ಛತ್ತೀಸಗಡ, ಸ್ಕ್ವಾಟ್‌ 132.5, ಬೆಂಚ್ ಪ್ರೆಸ್‌ 82.5, ಡೆಡ್‌ ಲಿಫ್ಟ್‌ 160, ಒಟ್ಟು 375)–2.

ಮಾಸ್ಟರ್ಸ್‌ 2: ಶ್ರೀಬಸ್‌ ಎಂ.ಗೋಸ್ವಾಮಿ (ಮಹಾರಾಷ್ಟ್ರ, ಸ್ಕ್ವಾಟ್‌ 180, ಬೆಂಚ್ ಪ್ರೆಸ್‌ 75, ಡೆಡ್‌ ಲಿಫ್ಟ್‌ 210, ಒಟ್ಟು 465)–1. ಸಂಪತ್‌ ಧಂಕರ್‌ (ಛತ್ತೀಸಗಡ, ಸ್ಕ್ವಾಟ್‌ 130, ಬೆಂಚ್ ಪ್ರೆಸ್‌ 82.5, ಡೆಡ್‌ ಲಿಫ್ಟ್‌ 150, ಒಟ್ಟು 362.5)–2.

93 ಕೆ.ಜಿ ಕ್ಲಾಸ್‌: ಎಸ್‌ ನಾರಾಯಣ್‌ (ಪಶ್ಚಿಮ ಬಂಗಾಳ, ಸ್ಕ್ವಾಟ್‌ 230, ಬೆಂಚ್ ಪ್ರೆಸ್‌ 150, ಡೆಡ್‌ ಲಿಫ್ಟ್‌ 245, ಒಟ್ಟು 625)–1, ಅಜಯ್‌ ಗಾವ್ಡೆ (ಮಹಾರಾಷ್ಟ್ರ, ಸ್ಕ್ವಾಟ್‌ 227.5, ಬೆಂಚ್ ಪ್ರೆಸ್‌ 127.5, ಡೆಡ್‌ ಲಿಫ್ಟ್‌ 260, ಒಟ್ಟು 615)–2.

ಮಾಸ್ಟರ್ಸ್ 1: ಅಶೋಕ್‌ ಕುಮಾರ್‌ ಮುರ್ಮು (ಪಶ್ಚಿಮ ಬಂಗಾಳ, ಸ್ಕ್ವಾಟ್‌ 170, ಬೆಂಚ್ ಪ್ರೆಸ್‌ 115, ಡೆಡ್‌ ಲಿಫ್ಟ್‌ 190, ಒಟ್ಟು 475)–1, ಬಲಿನ್‌ ಕಲಿಟ (ಅಸ್ಸೋಂ, ಸ್ಕ್ವಾಟ್‌ 145, ಬೆಂಚ್ ಪ್ರೆಸ್‌ 122.5, ಡೆಡ್‌ ಲಿಫ್ಟ್‌ 160, ಒಟ್ಟು 427.5)–2.

ಮಾಸ್ಟರ್ಸ್‌ 2: ಅರ್ಜುನ್‌ ಸಗರ್‌ವಂಶಿ (ಛತ್ತೀಸಗಡ, ಸ್ಕ್ವಾಟ್‌ 210, ಬೆಂಚ್ ಪ್ರೆಸ್‌ 125, ಡೆಡ್‌ ಲಿಫ್ಟ್‌ 200, ಒಟ್ಟು 535)–1. ಸುಧೀರ್‌ ಪ್ರಧಾನ್‌ (ಮಹಾರಾಷ್ಟ್ರ, ಸ್ಕ್ವಾಟ್‌ 140, ಬೆಂಚ್ ಪ್ರೆಸ್‌ 100, ಡೆಡ್‌ ಲಿಫ್ಟ್‌  130, ಒಟ್ಟು 370)–2.

ಮಾಸ್ಟರ್ಸ್ 3: ಗೋವರ್ಧನ್‌ ಪಿ.ಜಾದಿನ್ (ಮಧ್ಯಪ್ರದೇಶ, ಸ್ಕ್ವಾಟ್‌ 130, ಬೆಂಚ್ ಪ್ರೆಸ್‌ 100, ಡೆಡ್‌ ಲಿಫ್ಟ್‌ 160, ಒಟ್ಟು 390)–1. ವಿರೂಪಾಕ್ಷಪ್ಪ ಎಂ (ಕರ್ನಾಟಕ, ಸ್ಕ್ವಾಟ್‌ 110, ಬೆಂಚ್ ಪ್ರೆಸ್‌ 90, ಡೆಡ್‌ ಲಿಫ್ಟ್‌ 150, ಒಟ್ಟು 350)–2.

105 ಕೆ.ಜಿ ಕ್ಲಾಸ್: ಆಶೀಶ್‌ ಕುಮಾರ್‌ (ದೆಹಲಿ, ಸ್ಕ್ವಾಟ್‌ 195, ಬೆಂಚ್ ಪ್ರೆಸ್‌ 175, ಡೆಡ್‌ ಲಿಫ್ಟ್‌  207.5, ಒಟ್ಟು 577.5)–1, ಜುಬೇರ್‌ ಖಾನ್‌ (ಮಹಾರಾಷ್ಟ್ರ, ಸ್ಕ್ವಾಟ್‌ 220, ಬೆಂಚ್ ಪ್ರೆಸ್‌ 150, ಡೆಡ್‌ ಲಿಫ್ಟ್‌ 197.5, ಒಟ್ಟು 567.5)–2.

ಮಾಸ್ಟರ್ಸ್‌ 1: ಫಕ್ರುದ್ದೀನ್‌.ಸಿ  (ಕರ್ನಾಟಕ, ಸ್ಕ್ವಾಟ್‌ 190, ಬೆಂಚ್ ಪ್ರೆಸ್‌ 137.5, ಡೆಡ್‌ ಲಿಫ್ಟ್‌ 220, ಒಟ್ಟು 547.3)–1. ಸಿ.ಶಿವಕುಮಾರ್‌ (ತಮಿಳುನಾಡು, ಸ್ಕ್ವಾಟ್‌ 150, ಬೆಂಚ್ ಪ್ರೆಸ್‌ 120, ಡೆಡ್‌ ಲಿಫ್ಟ್‌ 170, ಒಟ್ಟು 440)–2.

ಮಾಸ್ಟರ್‌ 2: ಬಾಲಮುಕುಂದ್ ಸಿಂಗ್‌ (ಛತ್ತೀಸಗಡ, ಸ್ಕ್ವಾಟ್‌ 180, ಬೆಂಚ್ ಪ್ರೆಸ್‌ 105, ಡೆಡ್‌ ಲಿಫ್ಟ್‌  190, ಒಟ್ಟು 475)–1. ತುಳಸಿ ಪ್ರಸಾದ್‌ ಸಿಂಗ್‌ ಸೋನಿ (ಛತ್ತೀಸಗಡ, ಸ್ಕ್ವಾಟ್‌ 120, ಬೆಂಚ್ ಪ್ರೆಸ್‌ 87.5, ಡೆಡ್‌ ಲಿಫ್ಟ್‌ 130, ಒಟ್ಟು 337.5)–2.

ಮಹಿಳೆಯರು: 47 ಕೆ.ಜಿ ಕ್ಲಾಸ್‌: ಸರಸ್ವತಿ ಚಾವ್ಡಾ (ಛತ್ತೀಸಗಡ, ಸ್ಕ್ವಾಟ್‌ 57.5, ಬೆಂಚ್ ಪ್ರೆಸ್‌ 32.5, ಡೆಡ್‌ ಲಿಫ್ಟ್‌ 95, ಒಟ್ಟು 185)–1. ಸಂತೋಶಿ ಖೇವಲೆ (ಮಹಾರಾಷ್ಟ್ರ, ಸ್ಕ್ವಾಟ್‌ 70, ಬೆಂಚ್ ಪ್ರೆಸ್‌ 30, ಡೆಡ್‌ ಲಿಫ್ಟ್‌ 80, ಒಟ್ಟು 180)–2.

52 ಕೆ.ಜಿ ಕ್ಲಾಸ್‌ (ಸೀನಿಯರ್ಸ್‌): ಹೇಮಲತಾ ಕೊಸರೆ (ಛತ್ತೀಸಗಡ, ಸ್ಕ್ವಾಟ್‌ 100, ಬೆಂಚ್ ಪ್ರೆಸ್‌ 45, ಡೆಡ್‌ ಲಿಫ್ಟ್‌ 115, ಒಟ್ಟು 260)–1. ಶೋಭಾ ಇಂಗಳೆ (ಮಹಾರಾಷ್ಟ್ರ, ಸ್ಕ್ವಾಟ್‌ 75, ಬೆಂಚ್ ಪ್ರೆಸ್‌ 35, ಡೆಡ್‌ ಲಿಫ್ಟ್‌  105, ಒಟ್ಟು 215)–2.

57 ಕೆ.ಜಿ ಕ್ಲಾಸ್‌ (ಸೀನಿಯರ್ಸ್‌): ಸವಿತಾ ಜಾಧವ್‌ (ಮಹಾರಾಷ್ಟ್ರ, ಸ್ಕ್ವಾಟ್‌ 70, ಬೆಂಚ್ ಪ್ರೆಸ್‌ 37.5, ಡೆಡ್‌ ಲಿಫ್ಟ್‌ 97.5, ಒಟ್ಟು 205)–1. ಪ್ರತಿಭಾ (ಛತ್ತೀಸಗಡ, ಸ್ಕ್ವಾಟ್‌ 70, ಬೆಂಚ್ ಪ್ರೆಸ್‌  37.5, ಡೆಡ್‌ ಲಿಫ್ಟ್‌ 97.5, ಒಟ್ಟು 205)–2.

63 ಕೆ.ಜಿ ಕ್ಲಾಸ್‌ (ಸೀನಿಯರ್ಸ್‌): ಬೀತಿಕಾ ಮೊಂಡಲ್‌ (ಪಶ್ಚಿಮ ಬಂಗಾಳ, ಸ್ಕ್ವಾಟ್‌ 110, ಬೆಂಚ್‌ಪ್ರೆಸ್‌ 50, ಡೆಡ್‌ ಲಿಫ್ಟ್‌ 115, ಒಟ್ಟು 275)–1. ನೀತು ಬಲೋಡಿ (ದೆಹಲಿ, ಸ್ಕ್ವಾಟ್‌ 85, ಬೆಂಚ್‌ಪ್ರೆಸ್‌ 57.5, ಡೆಡ್‌ ಲಿಫ್ಟ್‌ 120, ಒಟ್ಟು 262.5)–2.

84 ಕೆ.ಜಿ ಕ್ಲಾಸ್‌ (ಸೀನಿಯರ್ಸ್‌): ಅನಘಾ ಪವಾರ್‌ (ಮಹಾರಾಷ್ಟ್ರ, ಸ್ಕ್ವಾಟ್‌ 100, ಬೆಂಚ್‌ಪ್ರೆಸ್‌ 60, ಡೆಡ್‌ ಲಿಫ್ಟ್‌ 105, ಒಟ್ಟು 265)–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT