ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲತೆಯಿಂದ ರಾಷ್ಟ್ರ ಸಮೃದ್ಧಿ

Last Updated 18 ಜನವರಿ 2011, 20:10 IST
ಅಕ್ಷರ ಗಾತ್ರ

ಮಸ್ಕಿ: ಭಾರತ ಸಮುೃದ್ಧ ರಾಷ್ಟ್ರವಾಗಬೇಕಾದರೆ ಮಹಿಳೆಯರ ಸಬಲಿಕರಣವಾಗಬೇಕು ಎಂದು ಪಿಎಸ್‌ಐ ಉದಯರವಿ ಹೇಳಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಮಂಗಳವಾರ ನಡೆದ ಹೆಣ್ಣುಮಕ್ಕಳ ಮಾರ್ಗದರ್ಶಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಿದೆ ಎಂದರು.

ಪುರುಷರಿಗಿಂತ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಮಹಿಳೆಯರು ತಮಗಿರುವ ಸೌಲಭ್ಯವನ್ನು ಪಡೆದುಕೊಂಡು ಉನ್ನತಿ ಸಾಧಿಸಬೇಕು ಎಂದರು.

ಪ್ರಸಕ್ತ ದಿನಗಳಲ್ಲಿ ಮಹಿಳೆಯರು ದುಡಿಮೆ ಮತ್ತು ಕುಟುಂಬ ನಿರ್ವಹಣೆಯ ಜತೆಗೆ ತಮ್ಮತನವನ್ನು ಉಳಿಸಿಕೊಳ್ಳಬೇಕಾದ ಸವಾಲು ಇದೆ ಎಂದು ಡಾ.ಶಿವಶರಣಪ್ಪ ಇತ್ಲಿ ಅಭಿಪ್ರಾಯಪಟ್ಟರು.
 
ಮುಖ್ಯೋಪಾಧ್ಯಾಯ ಹೇಮಯ್ಯ, ಉಪನ್ಯಾಸಕ ಮಹಾಂತೇಶ ಮಸ್ಕಿ, ರಂಗಯ್ಯ ಶಟ್ಟಿ ಮಾತನಾಡಿದರು. ಪಿ.ಜಿ.ಹಚ್ಚೊಳ್ಳಿ, ದುರುಗಣ್ಣ, ಬಸವರಾಜ ಶಿಕ್ಷಕರು ಉಪಸ್ಥಿತರಿದ್ದರು. ದೊಡ್ಡಪ್ಪ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT