ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣಕ್ಕೆ ಭಾರತದ ದೇಣಿಗೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಭಾರತವು ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ಸಂಸ್ಥೆಗೆ 10 ಲಕ್ಷ ಡಾಲರ್‌ಗಳ ಕೊಡುಗೆ ನೀಡುವ ಮೂಲಕ ಲಿಂಗ ಸಮಾನತೆಗೆ ತಾನು ಕಟಿಬದ್ಧವಾಗಿರುವುದನ್ನು ದೃಢಪಡಿಸಿದೆ.

ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿಯಾಗಿರುವ ಹರ್ದೀಪ್ ಸಿಂಗ್ ಪುರಿ ಅವರ ಪ್ರತಿನಿಧಿ ಗುರುವಾರ ಈ ಚೆಕ್ ಅನ್ನು ಮಹಿಳಾ ಸಬಲೀಕರಣ ಸಂಸ್ಥೆಗೆ ಹಸ್ತಾಂತರಿಸಿದರು. ವಿಶ್ವಸಂಸ್ಥೆ ಮಹಿಳಾ ವಿಭಾಗದ ಉಪ ಮಹಾಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಮಿಶೆಲ್ ಬಚೆಲೆಟ್ ಅವರು ಈ ಚೆಕ್ ಅನ್ನು ಸ್ವೀಕರಿಸಿದರು. ಈ ಮೊತ್ತವು ವಿಶ್ವಸಂಸ್ಥೆಯ ಮಹಿಳಾ ಸಂಪನ್ಮೂಲ ನಿಧಿಗೆ ಭಾರತ ಪ್ರಕಟಿಸಿದ 50 ಲಕ್ಷ ಡಾಲರ್‌ಗಳ ಕೊಡುಗೆಯ ಪೈಕಿ ಎರಡನೇ ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT