ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಶವ ಪತ್ತೆ

Last Updated 24 ಸೆಪ್ಟೆಂಬರ್ 2013, 20:04 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಅನು ಗೊಂಡನಹಳ್ಳಿ ಹೋಬಳಿ ಓಬಳಾಪುರ ಗ್ರಾಮದ ಬಳಿಯ ನೀಲಗಿರಿ ತೋಪಿ ನಲ್ಲಿ ವಿವಾಹಿತ ಮಹಿಳೆಯ ಶವ ವೊಂದು ಮಂಗಳವಾರ ಪತ್ತೆಯಾಗಿದೆ.

ಸುಮಾರು 30 ವರ್ಷ ವಯಸ್ಸಿನ ಆ ಮಹಿಳೆಯ ಎಡ ಕಿವಿಯಲ್ಲಿ ರಕ್ತದ ಕಲೆಗಳಿದ್ದು ಕುತ್ತಿಗೆಯನ್ನು ಹಗ್ಗದಿಂದ ಹಿಸುಕಿದ ಗುರುತಿದೆ. ಆಕೆಯ ಎಡಗೈ ಯಲ್ಲಿ ಎಲ್ಲಮ್ಮ ಹಾಗು ಬಲಗೈಯಲ್ಲಿ ಸುಬ್ರಮಣಿ ಎಂದು ಬರೆದ ಹಚ್ಚೆಯ ಗುರುತಿದೆ. ಆಕೆಯನ್ನು ಎಲ್ಲಿಯೋ ಕೊಲೆ ಮಾಡಿ ನಂತರ ಇಲ್ಲಿ ತಂದು ಹಾಕಿರಬಹುದು ಎಂದು ಶಂಕಿಸಲಾಗಿದೆ.

ಅನುಗೊಂಡನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ವಾರಸುದಾರರು 080–27945777 ಸಂಪರ್ಕಿಸಲು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT