ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಆಕ್ರೋಶ ಎದುರಿಸಿದ ಸಂಯುಕ್ತಾ ಬಂಡಿ

Last Updated 26 ಏಪ್ರಿಲ್ 2013, 6:42 IST
ಅಕ್ಷರ ಗಾತ್ರ

ಡಂಬಳ: ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರ ಮತಯಾಚಿಸುವ ಕಾರ್ಯ ಕ್ರಮದಲ್ಲಿ ಸಚಿವ ಕಳಕಪ್ಪ ಬಂಡಿ ಪತ್ನಿ ಸಂಯುಕ್ತಾ ಬಂಡಿ ಅವರನ್ನು ಕೆಲವು ಮಹಿಳೆಯರು ನೇರವಾಗಿ ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.

ತಮ್ಮ ಓಣಿ ಹಾಗೂ ಗ್ರಾಮದ ಜನತೆ ಎದುರಿಸುವ ಸಮಸ್ಯೆ ಬಗೆಗೆ ಐದು ವರ್ಷ ಆಡಳಿತದಲ್ಲಿ ನೆನಪು ಮಾಡಿಕೊಳ್ಳದೆ. ಚುನಾವಣೆ ಸಮಯದಲ್ಲಿ ಮಾತ್ರ ಸುಳ್ಳು ಭರವಸೆ ನೀಡಿ ಮತಕ್ಕಾಗಿ ಮನೆ-ಬಾಗಿಲಿಗೆ ಏಕೆ? ಬರುತ್ತಿರಿ ಎಂದು ಪ್ರಶ್ನೆ ಮಾಡಿದರು.

ಓಟ್ ಕೇಳಾಕ್ ನಿಮಗೆ ಈಗ ಡಂಬಳ ನೆನಪು ಆಗೈತಿ ಎಂದು   ಆಕ್ರೋಶ ವ್ಯಕ್ತಪಡಿಸಿದರು.ತಕ್ಷಣ ಸಂಯುಕ್ತ ಬಂಡಿ ಪ್ರತಿಕ್ರಿಯಿಸಿ,  `ನಿಮಗೆ ಕಷ್ಟ ಬಂದರೆ ನನ್ನ ಹತ್ತಿರ ಹೇಳಾಕ್ ನನ್ನ ಫೋನ್ ನಂಬರ್ ಕೊಡುತ್ತೇನೆ. ಇಲ್ಲಿ ಗಂಡು ಮಕ್ಕಳ ಎದುರು ಅಸಹ್ಯ ಮಾಡ ಬೇಡರಿ. ನನ್ನ ಮನೆ ಮುಂಡರಗಿಯಲ್ಲಿ ಇದೆ. ಅಲ್ಲಿಗೆ ಬಂದು ತಮ್ಮ ಬೇಡಿಕೆ       ಸಲ್ಲಿಸಿ ಎಂದು ಮನವಿ ಮಾಡಿ  ಮಹಿಳೆ ಯರನ್ನು ಶಾಂತಗೊಳಿಸಿದರು.

`ಬಿಜೆಪಿ ಸಾಧನೆಯೇ ಗೆಲುವಿಗೆ ದಾರಿ'
ಡಂಬಳ:
ಬಿಜೆಪಿ ಸರ್ಕಾರದ ಐದು ವರ್ಷಗಳ ಸಾಧನೆ ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ನಾಯಕಿ ಸಂಯಕ್ತಾ ಬಂಡಿ ಹೇಳಿದರು.

ಸ್ಥಳೀಯ ಕುರಿ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಗುರುವಾರ ಪ್ರಚಾರ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ರೋಣ ವಿಧಾನಸಭೆ ಮತಕ್ಷೇತ್ರದಲ್ಲಿ ಅಭಿವೃದ್ಧಿಪರ ಕಾರ್ಯ ಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಜನತೆ ಬೆಂಬಲಿಸಲಿ ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸರೋಜಿನಿ ಭಾರದ್ವಾಜ್ ಮಾತನಾಡಿದರು. ಬಿಜೆಪಿ ನಾಯಕಿಯರಾದ ದೀಪಾ ಗೋಯಲ್, ಕೀರ್ತಿ ಕೊಟಗಿ, ಬಸಮ್ಮ ಸಾಲಿಮಠ, ಕವಿತಾ ಜಾಲಿಹಾಳ, ಲಕ್ಷ್ಮೀಬಾಯಿ ಖೋಡೆ, ಬಿಜೆಪಿ ಮುಖಂಡರಾದ ಎಸ್.ವಿ.ಪಾಟೀಲ, ಬಸವರಾಜ ಸಂಗನಾಳ, ಮಾಜಿ ಜಿ.ಪಂ.ಸದಸ್ಯ ಶಿವಪ್ಪ ಅಂಕದ, ಶಂಕರಗೌಡ ಜಾಯಿನಗೌಡರ,  ರಂಗಪ್ಪ ಜೊಂಡಿ,  ಎಂ.ಎಸ್.ಪಾಟೀಲ. ತಾ.ಪಂ.ಸದಸ್ಯ ಸಿದ್ದನಗೌಡ ಪಾಟೀಲ, ಸೋಮಶೇಖರಯ್ಯ ಗುರುವಿನ, ಅಶೋಕ ವನ್ನಾಲ, ರವಿ ಕಲಾಲ, ಮುತ್ತಣ್ಣ ಶೆಟ್ಟರ್, ವಿರೇಶ ಬಳಿಗೇರ, ವೆಂಕನಗೌಡ ಪಾಟೀಲ, ಜಿ.ಪಂ.ಸದಸ್ಯ ಬೀರಪ್ಪ ಬಂಡಿ, ತಾ.ಪಂ.ಸದಸ್ಯ ಎನ್.ಟಿ.ಪ್ಯಾಟಿ, ಮುತ್ತು ಹಿರೇಮಠ, ಶಂಕ್ರವ್ವ ಬಚನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT