ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ರಕ್ಷಣೆಗೆ ಸರ್ಕಾರ ವಿಫಲ

Last Updated 16 ಜುಲೈ 2013, 7:15 IST
ಅಕ್ಷರ ಗಾತ್ರ

ಕಾರಟಗಿ: ರಾಜ್ಯ ಸೇರಿದಂತೆ ದೇಶದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಅಧಿಕಗೊಳ್ಳುತ್ತಿವೆ.
ಇದರ ನಿಯಂತ್ರಣಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಕಠಿಣ ಕಾನೂನು ಜಾರಿಗೊಳಿಸಿ, ತಡೆಯಲು ವಿಫಲವಾಗಿವೆ. ಮಹಿಳೆಯರಿಗೆ ಅಗತ್ಯ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಯುವ ಜಾಗೃತಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಳ್ವಿ ವಲಿಭಾಷಾ ಹೇಳಿದರು.

ಯುವ ಜಾಗೃತಿ ವೇದಿಕೆಯ ಕಾರಟಗಿ ಘಟಕದ ಆರಂಭಕ್ಕೆ ಡಾ. ರಾಜಕುಮಾರ ಕಲಾ ಮಂದಿರದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರು ಆತ್ಮರಕ್ಷಣೆಗೆ ಮುಂದಾಗಬೇಕಿದೆ. ಗ್ರಾಮೀಣ ಭಾಗದಲ್ಲೂ ಸಂಘಟನೆಯನ್ನು ಬಲಗೊಳಿಸಬೇಕಾದ ಅಗತ್ಯ ಇದೆ ಎಂದರು.
ದೇವೇಂದ್ರಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಎಂ. ಲಕ್ಷ್ಮೀ ಮೂಲಿಮನಿ, ಪ್ರಧಾನ ಕಾರ್ಯದರ್ಶಿ ಕೆ. ಕಾವ್ಯ ಹನುಮಂತ, ಕಾರಟಗಿ ಘಟಕದ ಶಾರದಾ ಹೊಸಮಠ, ರಾಜೇಶ್ವರಿ, ಮೀನಾಕ್ಷಿ, ವಿಜಯಲಕ್ಷ್ಮೀ, ಸಂಗೀತಾ, ಕರಿಯಮ್ಮ, ಶರಣಮ್ಮ, ನಾಗವೇಣಿ, ಸುಮಲತಾ, ಅಂಬಮ್ಮ, ಮಾರೆಮ್ಮ, ಶಾರದ, ಉಮಾದೇವಿ ವಿವಿಧ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಎಸ್. ತಿಕ್ಕಪ್ಪ, ಜಾಕೀರ್, ಶ್ರೀಕಾಂತ, ಹರೀಶ್ ಪೂಜಾರಿ, ಟಿ. ರಮೇಶ್ ಚಲವಾದಿ, ಪರಮೇಶ್ವರ ನಾಯಕ, ಪರಮೇಶ್ವರ ಪೂಜಾರ್, ಮಹ್ಮದ್ ಷರೀಫ್, ಮೀನಾಕ್ಷಿ, ಇಸ್ಮಾಯಿಲ್ ಇದ್ದರು.

ಸಂಗೀತಾ ಪ್ರಾರ್ಥಿಸಿದರು. ಅಶ್ವಿನಿ ಹಳೇಮನಿ ಸ್ವಾಗತಿಸಿದರು. ಶಾರದಾ, ಪ್ರಭಾವತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT