ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸ್ವರಕ್ಷಣೆಗೆ ಉಂಗುರ!

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಸ್ವರಕ್ಷಣೆಯ ಸಾಧನವಾಗಿ ‘ಸೇವ್ ಮೈ ಸಿಸ್ಟರ್  ಟ್ರಸ್ಟ್’ ಹೊಸ ಮಾದ­ರಿಯ ಉಂಗುರವನ್ನು ಬಿಡುಗಡೆ ಶನಿವಾರ ಮಾಡಿದೆ.
ಈ ಉಂಗುರದಲ್ಲಿ ಕಿರಿದಾದ ಟ್ಯಾಂಕ್ ಇದ್ದು ಅದರಲ್ಲಿ ಸೂಜಿ ಹಾಗೂ ರಸಾಯಾನಿಕ ಅಂಶವಿರು­ತ್ತದೆ.

ಅಪಾಯದ ಮುನ್ಸೂಚನೆಯ ಕಂಡುಬಂದಾಗ ಮಹಿಳೆಯರು ಉಂಗು­ರದ ತಿರುಗಣಿಯನ್ನು ತಿರುಗಿ­ಸಿದರೆ, ಈ ರಸಾಯಾನಿಕ ಅಂಶ ಎದುರಿಗಿರುವ ಮನುಷ್ಯನ ದೇಹ­ದೊಳಗೆ ತೂರುತ್ತದೆ  ಎಂದು ಟ್ರಸ್ಟ್  ಅಧ್ಯಕ್ಷ ಇಮ್ರಾನ್ ಖಾನ್ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.

ನಂತರ ಮಾತನಾಡಿದ ಶಾಸಕಿ ತಾರಾ ಅನೂರಾಧ, ‘ಹೊಸ ವಿನ್ಯಾಸ­ದಲ್ಲಿ ಈ ರೀತಿಯ ಉಂಗುರಗಳು ಮಾರುಕಟ್ಟೆಗೆ ಬರಲಿ. ಆದರೆ ದುರ್ಬಳಕೆ ಬೇಡ’ ಎಂದು ಸಲಹೆ ನೀಡಿದರು. ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಂಕರ್‌ ಬಿದರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT