ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಜಾಗೃತರಾದರೆ ಮೌಢ್ಯ ನಿಯಂತ್ರಣ

ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಕೆ.ಎಸ್‌. ಭಗವಾನ್‌ ಅಭಿಮತ
Last Updated 7 ಡಿಸೆಂಬರ್ 2013, 9:13 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮನೆಯಲ್ಲಿರುವ ಮಹಿಳೆಯರು ಬದಲಾದರೆ ಮಾತ್ರ ಮೌಢ್ಯ ತಡೆಗಟ್ಟಲು ಸಾಧ್ಯ’ ಎಂದು ವಿಚಾರವಾದಿ ಕೆ.ಎಸ್. ಭಗವಾನ್ ಅಭಿಪ್ರಾಯಪಟ್ಟರು.

ನಗರದ ಪ್ರವಾಸಿಮಂದಿರದ ಸಭಾಂಗಣದಲ್ಲಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನಾಚರಣೆ ಹಾಗೂ ಮೌಢ್ಯ, ಅಂಧಶ್ರದ್ದೆ ಮತ್ತು ಶೋಷಣೆಯನ್ನು ನಿಷೇಧಿಸುವ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ದಾರ್ಶನಿಕರೆಲ್ಲರೂ ಹಿಂದೂ ಧರ್ಮದಲ್ಲಿನ ಮೌಢ್ಯ, ಕಂದಾಚಾರ, ಶೋಷಣೆ, ಜಾತಿ ವ್ಯವಸ್ಥೆ ವಿರುದ್ಧ ಅಂದಿನಿಂದಲೇ ಹೋರಾಟ ಮಾಡಿದ್ದರು. ರಾಜ್ಯ ಸರ್ಕಾರ ಕೂಡ ಮೌಢ್ಯವನ್ನು ತಡೆಗಟ್ಟಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಪ್ರಗತಿಪರ ಚಿಂತಕ ವೆಂಕಟರಮಣಸ್ವಾಮಿ, ಹಿರಿಯ ರಂಗಕರ್ಮಿ ಕೆ. ವೆಂಕಟರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಡಿ. ಸಿಲ್ವ, ಅರಕಲವಾಡಿ ನಾಗೇಂದ್ರ, ಅಬ್ರಾರ್, ಸಿ.ಎನ್. ಗೋವಿಂದರಾಜು, ಸಿ.ಎಂ. ನರಸಿಂಹಮೂರ್ತಿ ಹಾಜರಿದ್ದರು.

‘ಶೋಷಿತರ ಸಮಾನತೆಗೆ ಹೋರಾಟ’
ಚಾಮರಾಜನಗರ:
‘ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಿಕೊಳ್ಳಲು ಯುವಜನರು ಮುಂದಾಗಬೇಕು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಹೇಳಿದರು.

ನಗರದ ಜಿಲ್ಲಾ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಸಮಾಜದಲ್ಲಿ ಜಡ್ಡುಗಟ್ಟಿದ್ದ ಜಾತಿ ವ್ಯವಸ್ಥೆಗೆ ಕೊಡಲಿ ಪೆಟ್ಟು ತಂದು ಶೋಷಿತರ ಸಮಾನತೆ ಬದುಕಿಗೆ ಅವಿರತ ಹೋರಾಟದ ಮೂಲಕ ವ್ಯವಸ್ಥಿತ ಬದುಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆರ್.ಪಿ. ನಂಜುಂಡಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಪಿ. ಮಹೇಶ್, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಬಸವರಾಜು, ಹೊಂಗನೂರು ಬಸವರಾಜು, ಬ.ಮ. ಕೃಷ್ಣಮೂರ್ತಿ, ಪರ್ವತರಾಜ್‌ ಹಾಜರಿದ್ದರು.  

‘ಕಾಂಗ್ರೆಸ್ ಮೊಸಳೆ ಕಣ್ಣೀರು’
ಚಾಮರಾಜನಗರ:
‘ಅಂಬೇಡ್ಕರ್ ಅವರ  ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ, ಅವರ ಆತ್ಮ ಚರಿತ್ರೆಯ ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು’ ಎಂದು ರಾಜ್ಯ ರೇಷ್ಮೆ ಉದ್ದಿಮೆ ನಿಗಮದ ಮಾಜಿ ಅಧ್ಯಕ್ಷ ನೂರೊಂದು ಶೆಟ್ಟಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎಸ್‌.ಸಿ ಮೋರ್ಚಾದಿಂದ  ಶುಕ್ರವಾರ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರ ಬೆಳವಣಿಗೆಯನ್ನು ಸಹಿಸದ ಕಾಂಗ್ರೆಸ್ ಪಕ್ಷ ಅವರ ಎಲ್ಲಾ ಹೋರಾಟಕ್ಕೆ ವಿರುದ್ಧವಾಗಿ ನಡೆದುಕೊಂಡಿತ್ತು. ಈಗ ಅಂಬೇಡ್ಕರ್ ಅವರ ಅನುಯಾಯಿಗಳಂತೆ ವರ್ತಿಸುವ  ಮೂಲಕ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಟೀಕಿಸಿದರು.

ತಾಲ್ಲೂಕು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಆರ್. ಮಹದೇವ್ ಮಾತನಾಡಿದರು. ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಿತ್ಯಾ, ರೇವಣ್ಣ,  ಎಂ. ಶಿವನಂಜಯ್ಯ.  ಶಿವಣ್ಣ ಇದ್ದರು.

‘ಚಿಂತನೆ ಸಮರ್ಪಕ ಅನುಷ್ಠಾನವಾಗಲಿ’
ಕೊಳ್ಳೇಗಾಲ:
ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕೆಂಬ ಅಂಬೇಡ್ಕರ್‌ ಅವರ ಚಿಂತನೆ ಸಮರ್ಪಕ ಅನುಷ್ಠಾನ ಆಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಮ್ಮ ತಿಳಿಸಿದರು.

ಪಟ್ಟಣದ ಗುರುಭವನದಲ್ಲಿ ಶುಕ್ರವಾರ ನಡೆದ ಮುಖ್ಯಶಿಕ್ಷಕರ ಸಭೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವಾಸು, ದೈಹಿಕ ಪರಿವೀಕ್ಷಕ ಜಾರ್ಜ್‌ ಪಿಲೀಪ್‌, ಬುಕಾನಿ, ಎಂ. ಬಸವಣ್ಣ, ನೇತ್ರಾವತಿ, ನಟರಾಜ್‌, ಆನಂದರಾಜ್‌ ಇತರರು ಇದ್ದರು.

ಪರಿಪೂರ್ಣ ಶಿಕ್ಷಣ ನೀಡಲು ಸಲಹೆ
ಕೊಳ್ಳೇಗಾಲ
: ದಲಿತರು, ಹಿಂದುಳಿದವರು ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದಾಗ ಮಾತ್ರ ಅಂಬೇಡ್ಕರ್‌ ಅವರ ಕನಸು ನನಸಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಪ್ರಭುಸ್ವಾಮಿ ತಿಳಿಸಿದರು.

ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಲಬಾರ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್‌. ನಂಜುಂಡಸ್ವಾಮಿ, ಮಲಬಾರ್‌ಗೋಲ್ಡ್‌ ಮೈಸೂರು ವಿಭಾಗ ನಿರ್ದೇಶಕ ಶರಪುದ್ದೀನ್‌, ಡಾ.ಶರತ್‌, ಡಾ.ಶಹಿರ್‌, ಡಾ.ಮರಿಯಪ್ಪ,  ಬಸವಣ್ಣ, ದೊರೆರಾಜ್‌, ಕಮಲ್‌, ಕನಕರಾಜು ಇದ್ದರು.

‘ಶೋಷಿತರು ಆಳುವ ವರ್ಗವಾಗಲಿ’
ಯಳಂದೂರು:
‘ಸಮಾಜದಲ್ಲಿ ಶೋಷಿತ ವರ್ಗ ಆಳುವ ವರ್ಗವಾದಾಗ ಮಾತ್ರ ಅಂಬೇಡ್ಕರ್‌ ಕಂಡ ಕನಸು ನನಸಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಮಂಜುನಾಥ್‌ ತಿಳಿಸಿದರು.

ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಹಶೀಲ್ದಾರ್‌ ಮಾಳಿಗಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿಜಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಂಗನಾಥ್‌, ಉಪಾಧ್ಯಕ್ಷ ಮಹೇಶ್‌ಕುಮಾರ್‌ ಮಾತನಾಡಿದರು.

ತಾ.ಪಂ. ಸದಸ್ಯ ಕೆ.ಪಿ. ಶಿವಣ್ಣ, ಎಲ್‌. ರಾಮಚಂದ್ರು, ಉಪ ತಹಶೀಲ್ದಾರ್‌ ವೈ.ಎಂ. ನಂಜಯ್ಯ, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್‌, ರೇಷ್ಮೆ ಇಲಾಖೆಯ ರಾಚಪ್ಪ, ಉಪನೋಂದಣಾಧಿಕಾರಿ ರುದ್ರಯ್ಯ, ತೋಟಗಾರಿಕೆ ಇಲಾಖೆಯ ಚಂದ್ರು, ಸಿಡಿಪಿಒ ನಾಗೇಶ್‌, ಮಹದೇವಸ್ವಾಮಿ, ಕಂದಹಳ್ಳಿ ನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT