ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷಿ ವರದಿ ಅನುಷ್ಟಾನಕ್ಕೆ ಆಗ್ರಹ

Last Updated 20 ಸೆಪ್ಟೆಂಬರ್ 2013, 10:45 IST
ಅಕ್ಷರ ಗಾತ್ರ

ದೇವನಹಳ್ಳಿ: ಇಪ್ಪತ್ತೈದು ವರ್ಷಗಳಿಂದ ನೆನೆಗುದಿಗೆ ಬಿದಿ್ದರುವ ಡಾ.ಸರೋಜಿನಿ ಮಹಿಷಿ ವರದಿಯನು್ನ ಸರ್ಕಾರ ಅನು ಷಾ್ಠನಗೊಳಿಸಬೇಕೆಂದು ತಾಲೂ್ಲಕು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಸಾ್ವಮಿ ಬಣ) ಅಧ್ಯಕ್ಷ ಶಿವಪ್ರಸಾದ್ ಆಗ್ರಹಿಸಿದರು
.
ಸುದಿ್ದಗೋಷಿ್ಠಯಲ್ಲಿ ಮಾತನಾಡಿದ ಅವರು, ‘ಜಾಗತೀಕರಣದ ನೆಪದಲ್ಲಿ ಹೂಡಿಕೆದಾರರನು್ನ ಬರ ಮಾಡಿಕೊ ಳ್ಳುತಿ್ತರುವ ರಾಜ್ಯ ಸರ್ಕಾರ ಅವರಿಗೆ ನಮ್ಮ ಭೂಮಿ, ನೀರು ವಿದು್ಯತ್‌, ಸಂಪರ್ಕ ರಸೆ್ತಗಳ ಸೌಲಭ್ಯ ಒದಗಿಸು ತಿ್ತದೆ. ಇದರಿಂದ ಸಾಕಷು್ಟ ಉದಿ್ದಮೆಗಳು ಜನ್ಮತಾಳುತಿ್ತವೆ. ಆದರೆ ಈ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದೋ್ಯಗ ನೀಡುವಲ್ಲಿ ಕಂಪೆನಿಗಳು ಸರ್ಕಾರದ ಇಲಾಖೆಗಳು ನಿರ್ಲಕ್ಷ್ಯ ವಹಿಸಿವೆ. ಕನ್ನಡಿಗರಿಗೆ ಮೀಸಲಾದ ಉದೋ್ಯಗಗಳು ಅನ್ಯ ರಾಜ್ಯದವರ ಪಾಲಾಗುತಿ್ತವೆ. ಇದೊಂದು ದುರಂತ’ ಎಂದರು.

ಹೊರಗಿನಿಂದ ಬಂದು ಇಲ್ಲಿ ಬಂಡವಾಳ ಹೂಡುವ ಕಂಪೆನಿಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಈ ನಿಟಿ್ಟನಲ್ಲಿ ಕನ್ನಡಿಗರಿಗೆ ನ್ಯಾಯ ಒದಗಿ ಸುವ ಡಾ.ಸರೋಜಿನಿ ಮಹಿಷಿ ವರದಿ ಹೊರ ಬಂದು ಇಂದಿಗೆ ಇಪ್ಪತ್ತೈದು ವರ್ಷ ಕಳೆದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಖಾರವಾಗಿ ಪ್ರಶಿ್ನಸಿದರು.

ರಾಜ್ಯದಲ್ಲಿ ಅಭಿವೃದಿ್ಧ ನೆಪದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಬಂಡ ವಾಳ ಶಾಹಿಗಳಿಗೆ ನೀಡಲಾಗುತ್ತಿದೆ. ಉದೋ್ಯಗ ನೀಡಿಕೆಯಲ್ಲಿ ನಿರ್ಲಕ್ಷ ತೋರ ಲಾಗುತ್ತಿದೆ. ಇದು ಖಂಡನೀಯ ಎಂದರು.

ಡಾ.ಸರೋಜಿನಿ ಮಹಿಷಿ ವರದಿ ಅನುಷಾ್ಠನಗೊಳಿಸುವಂತೆ ಒತಾ್ತಯಿಸಿ 25ರಂದು ಕ.ರ.ವೇ ವತಿಯಿಂದ ಬೆಂಗಳೂರಿನ ನಾ್ಯಷನಲ್‌ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ರಾ್ಯಲಿ ನಡೆಸಲಾಗುತಿ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣ ವೇದಿಕೆ ಉಪಾಧ್ಯಕ್ಷ ಹೇಮಂತಗೌಡ, ಖಜಾಂಚಿ ರಾಜಕುಮಾರ್, ಕಸಬಾ ಹೋಬಳಿ ಕ.ರ.ವೇ ಉಪಾಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲೇ್ಲಶ್, ವಿದಾ್ಯರ್ಥಿ ಘಟಕ ಉಪಾಧ್ಯಕ್ಷ ಮದನಗೌಡ ಸೇರಿದಂತೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT