ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರ: ಏರ್‌ವ್ಯಾನ್ ಮಾರುಕಟ್ಟೆಗೆ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು:  ಮಹೀಂದ್ರ ಅಂಡ್ ಮಹೀಂದ್ರ ಸಮೂಹದ ಅಂಗ ಸಂಸ್ಥೆಯಾದ ಮಹೀಂದ್ರ ಏರೋಸ್ಪೇಸ್ ಸಂಸ್ಥೆ ತನ್ನ ಏರ್‌ವ್ಯಾನ್ ವಿಮಾನಗಳನ್ನು ಬುಧವಾರದಿಂದ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಆಯೋಜಿಸಲಾಗಿರುವ ‘ಏರೊ ಇಂಡಿಯಾ-2011’ ವೈಮಾನಿಕ ಪ್ರದರ್ಶನದಲ್ಲಿ ತೆರೆಯಲಾಗಿರುವ ಸಂಸ್ಥೆಯ ಮಳಿಗೆಯಲ್ಲಿ ‘ಪ್ರಜಾವಾಣಿ’ಯ ಜೊತೆ ಮಾತನಾಡಿದ ಮಹೀಂದ್ರ ಏರೋಸ್ಪೇಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ್ ಮೆಹ್ತಾ ಅವರು ಈ ವಿಷಯ ತಿಳಿಸಿದರು.

ಆಸ್ಟ್ರೇಲಿಯಾ ಮೂಲದ ‘ಏರೋಸ್ಟಾಫ್ ಆಸ್ಟ್ರೇಲಿಯಾ’ ಮತ್ತು ‘ಜಿಪ್ಸ್ ಏರೊ ಲಿಮಿಟೆಡ್’ ಸಂಸ್ಥೆಗಳನ್ನು 2009ರಲ್ಲಿ ಖರೀದಿಸಿದ ಭಾರತದ ವಾಹನ ತಯಾರಿಕಾ ಕಂಪೆನಿ ಮಹೀಂದ್ರ ಅಂಡ್ ಮಹೀಂದ್ರ, ಅಲ್ಲಿಂದ ವಿಮಾನಗಳ ತಯಾರಿಕೆ ಆರಂಭಿಸಿತ್ತು.‘ಈ ಮಾದರಿಯ ವಿಮಾನಗಳು ಎಂಟು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲವು.

ಇಲ್ಲಿಯವರೆಗೆ ವಿಶ್ವದಾದ್ಯಂತ ಈ ಮಾದರಿಯ ಒಟ್ಟು 200 ವಿಮಾನಗಳನ್ನು ಮಹೀಂದ್ರ ಏರೋಸ್ಪೇಸ್ ಸಂಸ್ಥೆ ಮಾರಾಟ ಮಾಡಿದೆ. ಇವತ್ತಿನಿಂದ ಈ ವಿಮಾನ ಭಾರತೀಯ ಮಾರುಕಟ್ಟೆಗೂ ಬಿಡುಗಡೆಯಾಗಲಿದೆ’ ಎಂದು ಅವರು ತಿಳಿಸಿದರು.

ಮಹೀಂದ್ರ ಏರೊಸ್ಪೇಸ್ ಸಂಸ್ಥೆ ವಿಮಾನಗಳನ್ನು ತಯಾರಿಸುತ್ತಿರುವ ಏಕೈಕ ಭಾರತೀಯ ಖಾಸಗಿ ಸಂಸ್ಥೆ. ‘ಈ ವಿಮಾನವನ್ನು ಸದ್ಯ ಆಸ್ಟ್ರೇಲಿಯಾದಲ್ಲಿ ತಯಾರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲೇ ಇದರ ತಯಾರಿಕಾ ಘಟಕ ಆರಂಭಿಸಲಾಗುವುದು. 5,10 ಮತ್ತು 18 ಮಂದಿ ಕೂರಬಲ್ಲ ವಿಮಾನಗಳನ್ನು ತಯಾರಿಸುವ ಯೋಜನೆ ಸಂಸ್ಥೆಗೆ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT