ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.11ರಿಂದ ಮಾರಿಕಾಂಬಾ ಜಾತ್ರೆ

Last Updated 5 ಜನವರಿ 2014, 20:20 IST
ಅಕ್ಷರ ಗಾತ್ರ

ಶಿರಸಿ (ಉ.ಕ.ಜಿಲ್ಲೆ): ಎರಡು ವರ್ಷಗಳಿಗೊಮ್ಮೆ ನಡೆಯುವ ರಾಜ್ಯದ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ ಮಾ.11ರಿಂದ 19ರ ವರೆಗೆ ಒಂಬತ್ತು ದಿನ ನಡೆಯಲಿದೆ.

ಜಾತ್ರೆಯ ದಿನಾಂಕ ಹಾಗೂ ಮಹೂರ್ತ ನಿಗದಿಪಡಿಸಲು ಭಾನುವಾರ ಇಲ್ಲಿ ಕರೆದಿದ್ದ ಸಭೆಯಲ್ಲಿ ಜಾತ್ರೆಯ ದಿನಾಂಕ ಪ್ರಕಟಿಸಲಾಯಿತು.

ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆಯು 11ರ ರಾತ್ರಿ 10.45 ಗಂಟೆಗೆ, ರಥೋತ್ಸವ 12ರ ಬೆಳಿಗ್ಗೆ 7.19 ಗಂಟೆಗೆ, ನಂತರ ಶೋಭಾಯಾತ್ರೆ ಬೆಳಿಗ್ಗೆ 8.25 ಗಂಟೆಯ ನಂತರ ನಡೆಯಲಿದೆ. ಮಾ.13ರಿಂದ 19ರ ಬೆಳಿಗ್ಗೆ 10.20 ಗಂಟೆಯ ವರೆಗೆ ಬಿಡಕಿಬೈಲಿನಲ್ಲಿ ಜಾತ್ರಾ ಮಂಟಪದಲ್ಲಿ ಆಸೀನಳಾಗುವ ದೇವಿಗೆ ಸೇವೆ ಸಲ್ಲಿಸಲು ಅವಕಾಶವಿದೆ.   ಸಾರ್ವಜನಿಕರು ಭಾಗವಹಿಸುವಂತೆ ದೇವಸ್ಥಾನ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT