ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಕನಡಕು: ಸಂಶೋಧಕರ ಅಭಿಮತ:ಬೆಳ್ಳಿ ನಾಣ್ಯಗಳು ಮೊಗಲರ ಕಾಲದವು

Last Updated 17 ಅಕ್ಟೋಬರ್ 2012, 4:15 IST
ಅಕ್ಷರ ಗಾತ್ರ

ಕೂಡ್ಲಿಗಿ: ತಾಲ್ಲೂಕಿನ ಮಾಕನಡಕು ಗ್ರಾಮದಲ್ಲಿ ಇತ್ತೀಚೆಗೆ ದೊರೆತ 40 ಬೆಳ್ಳಿಯ ನಾಣ್ಯಗಳು 17ನೇ ಶತಮಾನದ ಮೊಗಲರ ಆಳ್ವಿಕೆಯ ಕಾಲಕ್ಕೆ ಸೇರಿದವುಗಳೆಂದು  ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಮತ್ತು ಪುರಾತತ್ವ ಪ್ರಾಧ್ಯಾಪಕ ಡಾ.ಆರ್.ಎಂ.ಷಡಕ್ಷರಯ್ಯ ಅಭಿಪ್ರಾಯಪಟ್ಟಿದ್ದಾರೆ.

ಹೊಸಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ನಾಣ್ಯಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಈ ನಾಣ್ಯಗಳನ್ನು ಡಾ.ಷಡಕ್ಷರಯ್ಯ, ಹುಬ್ಬಳ್ಳಿಯ ನೆಹರೂ ಹಾ ವಿದ್ಯಾಲಯದ ಅಧ್ಯಾಪಕಿ ನಸೀಮ್‌ಬಾನು ಕವಿವಿದ ಕನ್ನಡ ಸಂಶೋಧನ ಸಂಸ್ಥೆಯ ವಸ್ತು ಸಂಗ್ರಹಾಲಯ ಅಧಿಕಾರಿ ಡಾ.ಎಸ್.ಕೆ.ಮೇಲಕರ್ ಮತ್ತು ಪ್ರಾಚೀನ ಭಾರತ ಇತಿಹಾಸ ಮತ್ತು ಶಾಸನ ಶಾಸ್ತ್ರ ವಿಭಾಗದ ಅಧ್ಯಾಪಕ ಎಸ್.ಜಿ.ಚಲುವಾದಿ ಅವರೊಂದಿಗೆ ಅವರು ಕೂಲಂಕಷವಾಗಿ ಅಧ್ಯಯನ ನಡೆಸಿದರು. 

ನಾಣ್ಯಗಳ ಮೇಲಿನ ಬರವಣಿಗೆಯು ಪರ್ಶಿಯನ್ ಭಾಷೆಯಲ್ಲಿವೆ ಮತ್ತು ಲಿಪಿಯು ಪರ್ಶಿಯನ್ ಮತ್ತು ಉರ್ದು ಮಿಶ್ರಿತವಾಗಿವೆ. ದೊಡ್ಡ ಗಾತ್ರದ 8 ನಾಣ್ಯಗಳು ಒಂದೇ ಕಾಲಕ್ಕೆ ಸೇರಿವೆ. ಅವುಗಳಲ್ಲಿ 1116 ಅಜಿಜುದ್ದಿನ್ ಮಹಮದ್‌ನ ಆಳ್ವಿಕೆಯ ಹೆಸರು ಇರುವುದರಿಂದ, ಇವುಗಳು ಈತನ ಆಳ್ವಿಕೆಯ ಕಾಲದಲ್ಲಿದ್ದವುಗಳಾಗಿವೆ. ಇದನ್ನು  ಹಿಜರಿ ಎಂದು ಬಳಸಿದರೆ ಇವುಗಳ ಕಾಲ ಕ್ರಿ.ಶ 1632 ಕ್ಕೆ ಸೇರುತ್ತವೆ.

ಸ್ವಲ್ಪ ಸಣ್ಣ ಗಾತ್ರದ ನಾಣ್ಯಗಳಲ್ಲೂ ಈತನ ಹೆಸರು ಮತ್ತು ಇದೇ ಕಾಲಮಾನದ ಬರವಣಿಗೆ ಇದೆ. ಇನ್ನುಳಿದ ಸಣ್ಣ ಗಾತ್ರದ ನಾಣ್ಯಗಳು ಈತನದಲ್ಲದೇ ಫಜಲ್‌ಷಾನ ಹೆಸರು ಇವೆ. ಹೀಗಾಗಿ ಇವುಗಳು ಈ ಇರ್ವರ ಆಳ್ವಿಕೆಯ ಕಾಲಕ್ಕೆ ಸೇರಿವೆ ಎಂದರು.

ಅನೇಕ ನಾಣ್ಯಗಳಲ್ಲಿ ಸನ್, ಹಿಜರಿ, 2, 12, 22, 43, 44, ,45 ಮತ್ತು 84 ಅಂಕೆಗಳಿವೆ. ಇವಲ್ಲದೇ ಮಬೂಸ್ ಮೈಮನ್ ಜೂಲೂಸ್ ಅರ್ಕಾತ್ ಎಂದು ಬರೆಯಲಾಗಿದೆ.  ಮತ್ತು ದಾರು ಕಿಲಾ ಷಾನ್ ಹಾಗೂ ಅಲಂಗೀರ್ ಹೆಸರುಗಳಿವೆ. ಈ ಸ್ಥಳಗಳಲ್ಲಿಯೇ ನಾಣ್ಯಗಳನ್ನು ಬಹುತೇಕ ಟಂಕಿಸಿರ ಬೇಕೆಂದು ಅಭಿಪ್ರಾಯ ಪಟ್ಟರು.

ಪತ್ರಿಕೆಯಲ್ಲಿ ವರದಿಯಾದ ಒಂದು ನಾಣ್ಯದ ಮೇಲಿನ ಬರವಣಿಗೆಯು ಕ್ರಿ.ಶ 1819 ಎಂದು ತಪ್ಪಾಗಿ ಗುರುತಿಸಿರು ವುದು ಕಂಡು ಬಂದಿದೆ. ಈ ಅಂಕೆಗಳು ಯಾವಾಗಲೂ, ಉರ್ದು, ಪರ್ಶಿಯನ್ ಮತ್ತು ಅರೆಬಿಕ್ ಅಂಕೆಗಳಲ್ಲಿ ಇರುವುದಿಲ್ಲ. ಇದರಲ್ಲಿ ಕಾಣುವ 8 ಅಂಕಿಯು ಮಾತ್ರ ಇಂಗ್ಲಿಷನಲ್ಲಿರುವುದು ವಿಶಿಷ್ಟವೆನಿಸಿದೆ.

ಇದನ್ನು 181 ಜುಲೂಸ್ ಎಂದು ಬರೆಯಲಾಗಿದೆ. ಅನೇಕ ಕಡೆಗಳಲ್ಲಿ ಚುಕ್ಕೆ ಮತ್ತು ಚಂದ್ರನ ಚಿಹ್ನೆಯು ಬರವಣಿಗೆಯ ಜೊತೆ ಯಲ್ಲಿದೆ. ಈ ನಾಣ್ಯಗಳು ಅನುಕ್ರಮ ವಾಗಿ 2,  2.5  5,  11.5,  12  ಗ್ರಾಂ.ನ ತೂಕದಲ್ಲಿವೆ. ಒಟ್ಟಾರೆ ಈ ನಾಣ್ಯಗಳ ಅಧ್ಯಯನದಿಂದ ಮೊಗಲರ ಆಳ್ವಿಕೆ ಮತ್ತು ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿರುತ್ತದೆ ಎಂದು ಅವರು ಹೇಳಿದರು. ನಾಣ್ಯಗಳ ಜೊತೆ ದೊರೆತ ಬಂಗಾರದ ತುಂಡು ಗಳು ಒಂದು ಬಳೆಯ ಭಾಗಗಳಾಗಿವೆ ಮತ್ತೊಂದು ಬಹುತೇಕ ಲಿಂಗವನ್ನು ಇಡುವ ಚೌಕದ ಭಾಗವಿರಬಹುದೆಂದು ಅಧ್ಯಯನಕಾರರು ಅಭಿಪ್ರಾಯ ಪಟ್ಟಿದ್ದಾರೆ.

ನಾಣ್ಯಗಳ ಅಧ್ಯಯನಕ್ಕೆ ಕೂಡ್ಲಿಗಿ ಡಿವೈಎಸ್‌ಪಿ ಪಿ.ಡಿ ಗಜಕೋಶ ಮತ್ತು ಪಿಎಸ್‌ಐ ಎಸ್.ರಘುನಾಥ, ಎಎಸ್‌ಐ ಎ.ಎಸ್.ವೀರಭದ್ರಪ್ಪ ಮತ್ತು ಸಿಬ್ಬಂದಿ ವರ್ಗದವರು ಸಹಕಾರ ನೀಡಿದ್ದಕ್ಕಾಗಿ ಡಾ.ಷಡಕ್ಷರಯ್ಯ ಹಾಗೂ ಅಧ್ಯಯನ ಕಾರರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT