ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿಯ ಮೆರುಗು

Last Updated 23 ಡಿಸೆಂಬರ್ 2010, 7:10 IST
ಅಕ್ಷರ ಗಾತ್ರ

ಇಬ್ಬನಿ ತಬ್ಬಿದ ಇಳೆಯ ಮೇಲೆ ಸರ ಮೆಲ್ಲನೇ ಕಣ್ಣು ತೆರೆದಾಗ ಹಸಿರ ಹಾಸಿನ ಮೇಲೆ ಕುಳಿತ ಸಣ್ಣ ಮಂಜಿನ ಹನಿಗಳು ವಜ್ರಗಳಂತೆ ಕೋರೈಸುತ್ತವೆ. ಪ್ರಕೃತಿಯ ಈ ರಮಣೀಯತೆಗೆ ಸಾಟಿ ಉಂಟೆ? ಮಾಗಿಯ ಚುಮು ಚುಮು ಚಳಿಗೆ ಮುದುಡುವ ನಿಸರ್ಗದ ಮುಂಜಾವಿನ ವರ್ಣನೆಗೆ ನಿಲುಕದ್ದು.

ಹುಲ್ಲು ಹಾಸಿನ ಮೇಲೆ ಸದ್ದಿಲ್ಲದೆ ಮುತ್ತಿಟ್ಟಂತೆ ಕುಳಿತ ಮಾಗಿ ಹನಿಗಳನ್ನು ರವಿ ದಿಟ್ಟಿಸಿದಾಗ ಅವು ಕರಗಿ ನೀರಾಗುವುದು ನಿಸರ್ಗದ ಸೊಗಸು. ನೀ ಹೊಸೆಯುವ ಸೂತ್ರದ ಬಲೆಗೆ ನಾ ಮುತ್ತ ಪೋಣಿಸುವೆ ಎಂಬಂತೆ ಜೇಡರ ಬಲೆಗಳ ಮೇಲೆ ನಸುಕು ಹರಿಯುವುದರೊಳಗೆ ಮುತ್ತಿನ ಹಾರ ಕಟ್ಟುವ ಮಾಗಿಯ ಕೆಲಸ ಮೆಚ್ಚದಿರಲಾದೀತೆ? ಇಂದಿನ ವೈವಿಧ್ಯಮಯ ವಿನ್ಯಾಸ ಹೊತ್ತ ಮುತ್ತು, ವಜ್ರಗಳ ಹಾರಗಳಿಗೆ ಮಾಗಿಯ ಹಾರವೇ ಮಾದರಿಯಾಗಿರಬಹುದೇ?

ಎಳೆ ಬಿಸಿಲಿಗೆ ಚಿಗುರು ಎಲೆಗಳ ಸೊಬಗ ಹೆಚ್ಚಿಸುವ ಮಾಗಿಯ ಮಿರುಗಿಗೆ ವಜ್ರ, ಪಾದರಸವೂ ನಾಚಿನೀರಾಗಬೇಕಲ್ಲವೇ? ಕಪ್ಪೆ ಚಿಪ್ಪಿನೊಳಗಿನ ಮುತ್ತು ಮೌನಿಯಾಗದಿರಲು ಸಾಧ್ಯವೆ? ಕವಿ, ಕಲಾವಿದರ ಅಭಿವ್ಯಕ್ತಿಗೆ ಇದೇ ಮಾಗಿಯೇ ಸ್ಫೂರ್ತಿಯಲ್ಲವೇ?...
ವರ್ಣನೆಗೂ ನಿಲುಕದ ಮಾಗಿಯ ಸೌಂದರ್ಯವನ್ನು ಚುಮುಚುಮು ಚಳಿಯಲ್ಲಿ ಬೆಚ್ಚನೆಯ ಉಡುಪಿನೊಳಗಿದ್ದು ಕಣ್ತುಂಬಿಕೊಳ್ಳಲು ಇಲ್ಲಿರುವ ಚಿತ್ರಗಳು ಸಾಕೇ?

ಹವಾಮಾನದ ಏರುಪೇರಿನಿಂದೇಳುವ ಮೋಡಗಳ ಮುಸುಕಿನ ನಡುವೆಯೂ ಆಗೀಗ ಇಳೆಯ ಮುತ್ತುವ ಮಂಜಿನ ಮುಸುಕಿದ್ದರೆ ಇಂಥ ಸುಮಧುರ ಚಿತ್ರಗಳು ಕಾಣಲು ಸಾಧ್ಯ. ತಡವಾಗಿಯಾದರೂ ಬಂದಿತಲ್ಲ ಚುಮುಚುಮು ಚಳಿ. ಇದು ಕೂಡ ಪ್ರಕೃತಿಯದ ಕೊಡುಗೆ ತಾನೆ ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT