ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮ್ಯಾನೇಜರ್ ವಿರುದ್ಧ ವೀಣಾ ಗರಂ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಭಾರತದ ಪ್ರಶಾಂತ್‌ ಸಿಂಗ್‌ ಎಂಬುವರು ತಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿದ್ದು, ಟ್ವಿಟ್ಟರ್‌­­-­­ನಲ್ಲಿ ತಮ್ಮ ವಿವಾದಾತ್ಮಕ ಛಾಯಾಚಿತ್ರಗಳನ್ನು ಹಾಕುವ ಮೂಲಕ ನಂಬಿಕೆದ್ರೋಹ ಮಾಡಿದ್ದಾರೆ ಎಂದು ಪಾಕಿಸ್ತಾನ ನಟಿ ವೀಣಾ ಮಲಿಕ್‌ ಆರೋಪಿಸಿದ್ದಾರೆ.

‘ಈ ಹಿಂದೆ ಪ್ರಶಾಂತ್ ನನ್ನ ಮ್ಯಾನೇಜರ್ ಆಗಿದ್ದರು. ಈಗ­ಅವರು ಹಣ ಹಾಗೂ ಕೀಳುಮಟ್ಟದ ಪ್ರಚಾರಕ್ಕಾಗಿ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

‘ಅವರೊಬ್ಬ ಸುಳ್ಳುಗಾರ. ಅವರ ಆರೋಪವೆಲ್ಲವೂ ಆಧಾರ ರಹಿತ. ನನಗೆ ಅಣ್ಣನ ರೀತಿಯಲ್ಲಿರುವ ಅವರು ನನ್ನ ಗೆಳೆಯ ಎಂಬುದು ಸುಳ್ಳು’ ಎಂದು ಜಿಯೊ ಸುದ್ದಿವಾಹಿನಿಗೆ ಹೇಳಿದ್ದಾರೆ.

ಪ್ರಶಾಂತ್‌ ಅವರಿಗೆ ₨10000 ನೀಡಿ ಕೆಲಸ ಕೊಟ್ಟಿದ್ದೆ. ಅವರು ತಮ್ಮ ಇತಿಮಿತಿ ಅರಿಯಬೇಕು ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT