ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತ್ಕಲ್ಲು ಕಂಬಳ: ಸಮಾಲೋಚನಾ ಸಭೆ

Last Updated 5 ಡಿಸೆಂಬರ್ 2012, 5:51 IST
ಅಕ್ಷರ ಗಾತ್ರ

ಹೆಬ್ರಿ: ಕುಚ್ಚೂರು ಮಾತ್ಕಲ್ಲು ದೇವರ ಕಂಬಳ ಕಳೆದ ಹಲವು ವರ್ಷಗಳಿಂದ ನಿಂತುಹೋಗಿದ್ದು ಕಂಬಳವನ್ನು ಇದೇ 9ರಂದು ನಡೆಸುವ ಕುರಿತು ಸೋಮವಾರ ಮಾತ್ಕಲ್ಲ ಮೇಲೆ ಸಮಾಲೋಚನಾ ಸಭೆ ನಡೆಯಿತು.

ಕಂಬಳ ಸಮಿತಿ, ಕೊಡಮಣಿತ್ತಾಯ ಧೂಮಾವತಿ ಗರಡಿ, ಕುಚ್ಚೂರು ದೊಡ್ಮನೆಯವರು, ಮಾತ್ಕಲ್ಲು ಕಂಬಳ ಮನೆಯವರು, ಕುಚ್ಚೂರು ಧಾರ್ಮಿಕ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಕಂಬಳ ನಡೆಸುಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನೀರೆ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರ ನೀರೆ ಕೃಷ್ಣ ಶೆಟ್ಟಿ ಕಂಬಳೋತ್ಸವದ ಕುರಿತು ಮಾಹಿತಿ ನೀಡಿದರು. ಕಂಬಳಕ್ಕೆ ಜಾರ‌್ಮಕ್ಕಿ ಸತೀಶ ಶೆಟ್ಟಿ ರೂ.25 ಸಾವಿರ ದೇಣಿಗೆ ಪ್ರಕಟಿಸಿದರು.

ಕಂಬಳೋತ್ಸವದ ಅಧ್ಯಕ್ಷತೆಯನ್ನು ಶಾಸಕ ಗೋಪಾಲ ಭಂಡಾರಿ ವಹಿಸುವರು. ಸಚಿವ ಕೋಟ ಶ್ರಿನಿವಾಸ ಪೂಜಾರಿ, ಕುಚ್ಚೂರು ದೊಡ್ಮನೆ ಎಚ್.ಆರ್.ಶೆಟ್ಟಿ, ಕುಚ್ಚೂರು ಸುರೇಶ ರಾವ್, ಬಾರ್ಕೂರು ಶಾಂತಾರಾಮ ಶೆಟ್ಟಿ, ಪಂಚಾಯಿತಿ ಅಧ್ಯಕ್ಷೆ ಸರೋಜಾ, ರಮಾನಂದ ಹೆಗ್ಡೆ, ನೀರೆ ಕೃಷ್ಣ ಶೆಟ್ಟಿ, ಭೂತುಗುಂಡಿ ಕರುಣಾಕರ ಶೆಟ್ಟಿ, ಕಿರಣ್ ತೋಳಾರ್, ನಿತ್ಯಾನಂದ ಭಟ್ ಮತ್ತಿತರರು ಭಾಗವಹಿಸುವರು ಎಂದರು.

ಸಮಾಲೋಚನಾ ಸಭೆಯಲ್ಲಿ ಕಿರಣ್ ತೋಳಾರ್, ಅಶ್ವಿನಿ ತೋಳಾರ್, ರೋಶನ್ ಕುಮಾರ್ ಶೆಟ್ಟಿ  , ಸುಧಾಕರ ಶೆಟ್ಟಿ, ರಮೇಶ ಪೂಜಾರಿ, ನಿತ್ಯಾನಂದ ಭಟ್, ರಘು ಕುಲಾಲ್, ಶ್ರಿಧರ ಜೋಯಿಸ್, ವಿಜಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT