ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಶಾಲೆ: ಕೇಂದ್ರದ ಅನುದಾನ ಶೇ 75ಕ್ಕೆ ಏರಿಕೆ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬ್ಲಾಕ್ ಮಟ್ಟದಲ್ಲಿ `ಮಾದರಿ ಶಾಲೆ~ಗಳನ್ನು ಸ್ಥಾಪಿಸಲು ನೀಡುವ ಅನುದಾನವನ್ನು 2012-13ನೇ ಹಣಕಾಸು ವರ್ಷದಲ್ಲಿ ಶೇ 75ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ 1080 ಕೋಟಿ ರೂಪಾಯಿ ತೆಗೆದಿಟ್ಟಿದ್ದು, 19.85 ಲಕ್ಷ ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ.

`ಮಾದರಿ ಶಾಲೆ~ ಯೋಜನೆಯ ಪರಿಣಾಮಕಾರಿ ಮತ್ತು ತ್ವರಿತ ಅನುಷ್ಠಾನ ಹಾಗೂ ರಾಜ್ಯ ಸರ್ಕಾರಗಳ ಮೇಲಿನ ಹೊರೆ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮುನ್ನ ರಾಜ್ಯ ಸರ್ಕಾರಗಳು ಯೋಜನೆಯ ಶೇ 50ರಷ್ಟು ವೆಚ್ಚ ಭರಿಸಬೇಕಾಗಿತ್ತು. ಇನ್ನು ಮುಂದೆ ಅದು ಶೇ 25ಕ್ಕೆ ಇಳಿಯಲಿದೆ.

ಪ್ರತಿ ಬ್ಲಾಕ್‌ನಲ್ಲಿ ಒಂದಾದರೂ ಹಿರಿಯ ಪ್ರೌಢಶಾಲೆಯು `ಮಾದರಿ ಶಾಲೆ~ಯಾಗಿರಬೇಕು ಎಂಬುದು ಯೋಜನೆಯ ಉದ್ದೇಶ. ಇಂತಹ 6000 ಬ್ಲಾಕ್‌ಗಳನ್ನು ದೇಶದಲ್ಲಿ ಗುರುತಿಸಿದ್ದು, ಇದರಲ್ಲಿ 3,500 ಬ್ಲಾಕ್‌ಗಳು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿವೆ. ಅಲ್ಲಿ ಮಾದರಿ ಶಾಲೆಗಳು ಅಸ್ತಿತ್ವಕ್ಕೆ ಬರಲಿವೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ 2500 ಬ್ಲಾಕ್‌ಗಳಲ್ಲಿ ಈ ಶಾಲೆಗಳ ಸ್ಥಾಪನೆಗೆ ಖಾಸಗಿ ಸಹಯೋಗ ಪಡೆಯಲಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT