ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಶಾಲೆ ಬಳಿ ದುರ್ವಾಸನೆಯ ಕೂಪ

Last Updated 11 ಫೆಬ್ರುವರಿ 2012, 5:20 IST
ಅಕ್ಷರ ಗಾತ್ರ

ಗಜೇಂದ್ರಗಡ: ಭವಿಷ್ಯದ ಪ್ರಜೆಗಳಿಗೆ `ಪಾಠ~ ಹೇಳುವ ಸರ್ಕಾರದ ಪ್ರತಿಷ್ಠಿತ ಶಾಲೆಯ ಬಳಿ ದುರ್ವಾಸನೆ, ಸಾಂಕ್ರಾ ಮಿಕ ರೋಗದ ಭೀತಿ.

ಸಮೀಪದ ಕಾಲಕಾಲೇಶ್ವರ ಗ್ರಾಮದ ಹೊರವಲಯದಲ್ಲಿರುವ ಮೂರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಸ್ನಾನಗೃಹ ಹಾಗೂ ಶೌಚಾಲಯಗಳಿಂದ ಹೊರ ಡುವ ಮಲಿನ ನೀರು ಸಂಗ್ರಹಕ್ಕಾಗಿ ಶಾಲೆಯ ಹಿಂಬದಿಯಲ್ಲಿ ನಿರ್ಮಿಸಲಾದ ಸೇಫ್ಟಿ ಟ್ಯಾಂಕ್(ಗಲೀಜು ನೀರು ಸಂಗ್ರಹ ತೊಟ್ಟಿ)ಗಳು ತುಂಬಿ ಹರಿಯುತ್ತಿದ್ದು ಇಲ್ಲಿನ ವಾತಾವರಣವನ್ನು ಕಲುಷಿತಗೊಳಿಸಿದೆ.

ನೂರಾರು ಮಕ್ಕಳ ವಸತಿ ಶಾಲೆಯಿಂದ ಹೊರಡುವ ಮಲಿನ ನೀರು ಶಾಲಾ ಆವರಣದಲ್ಲಿ ಗಲೀಜು ನೀರು ಸಂಗ್ರಹ ತೊಟ್ಟಿಗಳ ಸಾಮರ್ಥ್ಯಕ್ಕಿಂತಲ್ಲೂ ದೊಡ್ಡ ಪ್ರಮಾಣಲ್ಲಿ ಹರಿದು ಬರುತ್ತಿರುವುದರಿಂದ ಒಂದೆಡೆ ತೊಟ್ಟಿಗಳು ಭರ್ತಿಯಾದರೆ ನೀರಿನ ರಭಸಕ್ಕೆ ಸಂಗ್ರಹ ತೊಟ್ಟಿಗಳಲ್ಲಿ ಬಿರುಕುಗಳು ಉಂಟಾ ಗ್ದ್ದಿದು ಭಾರಿ ಪ್ರಮಾಣದ ಗಲೀಜು ನೀರು ಶಾಲಾ ಆವರಣದ ತಗ್ಗು ಪ್ರದೇಶದಲ್ಲಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. 

ಗ್ರಾಮೀಣ ಪ್ರದೇಶದ ಹಿಂದುಳಿದ ವರ್ಗಗಳ ಹಾಗೂ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು 1996ರಲ್ಲಿ ಅಂದಿನ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ತಾಲ್ಲೂಕಿಗೆ ಒಂದರಂತೆ `ಮೊರಾರ್ಜಿ ದೇಸಾಯಿ ವಸತಿ ಶಾಲೆ~ ಗಳ ಸ್ಧಾಪನೆಗೆ ಮುನ್ನುಡಿ ಬರೆದರು.

1996ರಿಂದ 2004ರ ವರೆಗೆ ಗ್ರಾಮದ ಖಾಸಗಿ ಕಟ್ಟಡದಲ್ಲಿ ಬಾಡಿಗೆ ರೂಪದಲ್ಲಿ ನಡೆಯುತ್ತಿದ್ದ ಶಾಲೆಗೆ ಶಾಶ್ವತ ಕಟ್ಟಡ ನಿರ್ಮಿಸಬೇಕು ಎಂಬ ಉದ್ದೇಶದಿಂದ ಶಾಸಕ ಕಳಕಪ್ಪ ಬಂಡಿ 2004ರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

2007ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದ ಶಾಲೆಗೆ ತಾಲ್ಲೂಕಿನಲ್ಲಿಯೇ ಅತ್ಯುತ್ತಮ ವಸತಿ ಶಾಲೆ ಎಂಬ ಹೆಗ್ಗಳಿಕೆಯೂ ಶಾಲೆಗಿದೆ. ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗೆ ಪ್ರತಿ ವರ್ಷ 210 ವಿದ್ಯಾರ್ಥಿಗಳು ವಸತಿ ಸಹಿತ ಶಿಕ್ಷಣ ಪಡೆಯುತ್ತಿದ್ದಾರೆ.

2010ರ ವರೆಗೂ ಕಲಿಕೆಗೆ ಯೋಗ್ಯವಾದ ಪರಿಸರವನ್ನು ಶಾಲಾ ಆವರಣ ಹೊಂದಿತ್ತು. ಆದರೆ, 2010ರಲ್ಲಿ ಗಜೇಂದ್ರಗಡದ `ಕಿತ್ತೂರ ರಾಣಿ ಚನ್ನಮ್ಮ ಇಂಗ್ಲಿಷ್ ಮೀಡಿಯಂ ವಸತಿ ಶಾಲೆ~ಯ ವಿದ್ಯಾರ್ಥಿಗಳಿಗೆ ವಸತಿ ತೊಂದರೆ ಉಂಟಾದ ಪರಿಣಾಮ 107 ವಿದ್ಯಾರ್ಥಿಗಳನ್ನು ಇಲ್ಲಿಗೆ ವರ್ಗಾಯಿಸಲಾಯಿತು. ಅಲ್ಲಿಂದ ಸಮಸ್ಯೆ ಆರಂಭವಾಯಿತು.

ಶಾಲೆಯ ಸುತ್ತ ಜಮೀನುಗಳಿಗೂ ಇಲ್ಲಿನ ಚರಂಡಿ ನೀರು ನುಗ್ಗುತ್ತಿರುವುದರಿಂದ ಬೆಳೆಗಳ ಮೇಲೆ ಪರಿಣಾಮ ಉಂಟಾಗುತ್ತಿದೆ. ಒಂದು ವರ್ಷದಿಂದ ಸೇಫ್ಟಿ ಟ್ಯಾಂಕ್‌ಗಳು ಒಡೆದು ದುರ್ನಾತ ಬೀರುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆ ನೀಗಿಸಲು ಮುಂದಾಗಲಿಲ್ಲ ಎಂಬುದು ಜನರ ಆರೋಪ.

ಸಮರ್ಪಕ ರಸ್ತೆ ಇಲ್ಲ:
 ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ವಂತ ಕಟ್ಟಡ ಹೊಂದಿ ವರ್ಷಗಳು ಗತಿಸಿದರೂ ಶಾಲೆಗೆ ಹೋಗಲು ಸಮರ್ಪಕ ರಸ್ತೆ ಇಲ್ಲ. ಮಳೆಗಾಲದಲ್ಲಿ ವಸತಿ ಶಾಲಾವರಣದಲ್ಲಿನ ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗುತ್ತಿರುವುದರಿಂದ ಬೆಳೆ ಹಾನಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT