ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಹಳ್ಳಿಯಲ್ಲಿ ಅಭಿವೃದ್ಧಿಯ ಚಿಗುರು

Last Updated 17 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

ಇರುವಷ್ಟೇ ಅನುದಾನವನ್ನು ಬಳಸಿಕೊಂಡು, ಅಭಿವೃದ್ಧಿ ಪಥದತ್ತ ದಾಪುಗಾಲು ಇಟ್ಟಿರುವ ಗ್ರಾಮವೇ -ಗೊಪ್ಪೇನಹಳ್ಳಿ.

ಚನ್ನಗಿರಿ ತಾಲ್ಲೂಕಿನ ಈ ಗ್ರಾಮದಲ್ಲಿ ಎರಡು ಸಾವಿರದ ಎಂಟುನೂರಾ ಎಂಬತ್ತೃೆದು ಜನಸಂಖ್ಯೆ ಇದೆ. ಒಟ್ಟು 648 ಕುಟುಂಬಗಳಿವೆ. ಲಿಂಗಾಯತ ವರ್ಗದವರು ಬಹುಸಂಖ್ಯಾತರಾಗಿದ್ದು, ಉಳಿದಂತೆ ಪರಿಶಿಷ್ಟ ಜಾತಿ, ವರ್ಗ, ನಾಯಕ, ವಿಶ್ವಕರ್ಮ ಜನಾಂಗದವರು ವಾಸ ಮಾಡುತ್ತಿದ್ದಾರೆ. ಶೇ. 60 ಸಾಕ್ಷರರಿದ್ದು, ಶಿಕ್ಷಕ, ವೈದ್ಯರು, ಎಂಜಿನಿಯರ್, ವಕೀಲರು ಇದ್ದಾರೆ.  ಪ್ರಮುಖ ವಾಣಿಜ್ಯ ಬೆಳೆಯಾಗಿ ಅಡಿಕೆ ಬೆಳೆಯ ಜತೆಗೆ ಮೆಕ್ಕೆಜೋಳ, ರಾಗಿ, ಹತ್ತಿ, ಅಲೂಗಡ್ಡೆ, ಸೇರಿದಂತೆ ಹಲವು ವೈವಿಧ್ಯಮಯ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಹಿಂದೆ ಇದನ್ನು `ಗೋಪ್ಯ ಗೊಂಡನಹಳ್ಳಿ~ ಗ್ರಾಮವೆಂದು ಹೆಸರನ್ನು ಪಡೆದುಕೊಂಡಿತ್ತು. ಸುತ್ತಮುತ್ತ ಬೋಳು ಗುಡ್ಡದ ತಪ್ಪಲಲ್ಲಿ ಈ ಗ್ರಾಮ ಇರುವುದರಿಂದ ಈ ಗ್ರಾಮವನ್ನು ಹುಡುಕಿಕೊಂಡು ಹೋಗಬೇಕಾಗಿದ್ದರಿಂದ `ಗೋಪ್ಯ ಗೊಂಡನಹಳ್ಳಿ~ ಗ್ರಾಮ ಎಂದು ಕರೆಯುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಈ `ಗೋಪ್ಯ ಗೊಂಡನಹಳ್ಳಿ~ ಗ್ರಾಮದ ಮುಂದೆ ಜನರ ಬಾಯಲ್ಲಿ `ಗೊಪ್ಪೇನಹಳ್ಳಿ~ ಗ್ರಾಮ ಎಂದಾಗಿ ಹೆಸರನ್ನು ಹೊಂದಿದೆ.

ಇಲ್ಲಿನ ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು ಎಂಟು ಮಂದಿ ಸದಸ್ಯರಿದ್ದಾರೆ. ಎಲ್ಲಾ ಸದಸ್ಯರನ್ನು ಚುನಾವಣೆಯಲ್ಲಿ ಪಕ್ಷಬೇಧ ಮರೆತು ಅವಿರೋಧವಾಗಿ ಆಯ್ಕೆ ಮಾಡಿದ ಜಿಲ್ಲೆಯ ಪ್ರಥಮ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವರು ಚುನಾವಣೆಯಿಲ್ಲದೇ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಡಿದ ಪಂಚಾಯ್ತಿಗೆ ್ಙ 15 ಲಕ್ಷ ಪ್ರೋತ್ಸಾಹಧನವನ್ನು ನೀಡಲಾಗುವುದೆಂಬ ಭರವಸೆ ಮಾತ್ರ ಇನ್ನೂ ಮರೀಚಿಕೆಯಾಗಿ ಉಳಿದಿದೆ.

ಗ್ರಾಮದ 130 ಮಂದಿ ಜಾಬ್‌ಕಾರ್ಡ್ ಹೊಂದಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ್ಙ 34 ಲಕ್ಷದ ಕಾಮಗಾರಿ ಕೈಗೊಳ್ಳಲಾಗಿದೆ. ಸ್ವಚ್ಛ ಗ್ರಾಮ ಯೋಜನೆಯಡಿ ಗ್ರಾಮದ ಬಹುತೇಕ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಮಾಡಲಾಗಿದೆ. 13 ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗೆ ್ಙ 3 ಲಕ್ಷ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಗ್ರಾಮದಲ್ಲಿನ ಒಟ್ಟು 648 ಕುಟುಂಬಗಳ ಪೈಕಿ 500ಕ್ಕಿಂತ ಹೆಚ್ಚು ಕುಟುಂಬಗಳ ಮನೆಗಳಲ್ಲಿ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಶೇ. 85ರಷ್ಟು ಸಾಧನೆಯನ್ನು ನಿರ್ಮಲ ಗ್ರಾಮ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ. 33 ಇಂದಿರಾ ಬಸವ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದೆ. ರಸ್ತೆ, ಚರಂಡಿ ಮುಂತಾದ ಕಾಮಗಾರಿಗಳನ್ನು ಮಾಡಲಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಆರ್.ವಿ. ಸುತಾರ.

ಪಾಂಡೋಮಟ್ಟಿ-ಗೊಪ್ಪೇನಹಳ್ಳಿ ಗ್ರಾಮಗಳ ನಡುವೆ ಒಂದು ಸರ್ಕಾರಿ ಆರೋಗ್ಯ ಕೇಂದ್ರವಿದೆ. ಇದನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪಶು ಚಿಕಿತ್ಸಾಲಯ, ಬಿಎಸ್‌ಎನ್‌ಎಲ್ ಟವರ್, ಖಾಸಗಿ ಕಾನ್ವೆಂಟ್ ಇವೆ.

ಶಿಲ್ಪಿಗಳ ಬೀಡು
ಈ ಗ್ರಾಮ ಜಕ್ಕಣಚಾರಿ ಪ್ರಶಸ್ತಿ ಹಾಗೂ ಶಿಲ್ಪಕಲಾ ಆಕಾಡೆಮಿ ಪ್ರಶಸ್ತಿ ಪಡೆದುಕೊಂಡಿರುವ ಅಪರೂಪದ ಶಿಲ್ಪಿಗಳನ್ನು ಹೊಂದಿರುವ ಗ್ರಾಮವಾಗಿದೆ. ಶಿಲ್ಪಿ ಚಂದ್ರಚಾರ್ಯ ಅವರು 69ರ ಇಳಿ ವಯಸ್ಸಿನಲ್ಲಿಯೂ ಅಪರೂಪದ ಕಲಾಕೃತಿಗಳನ್ನು ಕೆತ್ತನೆ ಮಾಡುತ್ತಾರೆ. ರಾಜ್ಯದ ತುಮಕೂರು, ಕೊಪ್ಪಳ, ಶಿವಮೊಗ್ಗ, ಬೆಂಗಳೂರು, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಮೈಸೂರು, ಹಾಸನ, ಉತ್ತರಕನ್ನಡ ಮುಂತಾದ ಜಿಲ್ಲೆಗಳಲ್ಲಿ ರಥಗಳನ್ನು ಕೆತ್ತನೆ ಮಾಡಿಕೊಟ್ಟಿರುವ ಕೀರ್ತಿ ಈ ಗ್ರಾಮದ ಶಿಲ್ಪಿಗಳಿಗೆ ಸೇರಿದೆ. ಹಾಗೆಯೇ ಜಕ್ಕಣಚಾರಿ ಪ್ರಶಸ್ತಿ ವಿಜೇತ ಶಿಲ್ಪಿ ಸುರೇಶ್‌ಚಾರ್ಯ ನುರಿತ ಹಿರಿಯ ಶಿಲ್ಪಿಗಳಾಗಿದ್ದಾರೆ.

ರುದ್ರೇಶ್ವರ ಪ್ರೌಢಶಾಲೆ ಸುಮಾರು 25 ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯನ್ನು ನೀಡುವಲ್ಲಿ ಮುಂದಿದೆ. ಆದರೆ ಈ ಶಾಲೆಯ್ಲ್ಲಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪಕ್ಕದಲ್ಲಿಯೇ ಒಂದು ಕೊಳವೆಬಾವಿ ಇದ್ದು, ಅದಕ್ಕೆ ಹೊಸದಾಗಿ ಪೈಪ್‌ಲೈನ್ ಮಾಡಿಸಿ ಮೋಟಾರ್ ಅಳವಡಿಸಿ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕಾಗಿದೆ ಎನ್ನುತ್ತಾರೆ ಕಲಾವತಿ.

ಈ ಭಾಗದ ಜನರ ಬಹುದಿನದ ಕನಸಾದ ಉಬ್ರಾಣಿ ಏತ ನೀರಾವರಿ ಯೋಜನೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಈ ಗ್ರಾಮದಿಂದ 1.5 ಕಿ.ಮೀ ದೂರದ ಮಲಹಾಳ್ ಕೆರೆಗೆ ಭದ್ರಾ ನೀರು ಹರಿದು ಬಂದಿದೆ. ಈ ಕೆರೆಯಲ್ಲಿ ಸದಾ ನೀರು ಸಂಗ್ರಹವಾಗುವುದರಿಂದ ಗೊಪ್ಪೇನಹಳ್ಳಿ, ಪೆನ್ನಸಮುದ್ರ ಹಾಗೂ ಮಲಹಾಳ್ ಗ್ರಾಮದ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿ ಅಡಿಕೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಗೋವಿಂದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT