ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳ ಭರಾಟೆಯಲ್ಲಿ.ಮಾನವೀಯ ಮೌಲ್ಯ ಕುಸಿತ

Last Updated 18 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ಬೆಳ್ಳಾರೆ: ‘ಆಧುನಿಕ ಮಾಧ್ಯಮಗಳ ಭರಾಟೆಯಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿದೆ. ಕುಟುಂಬಗಳು ಚದುರಿಹೋಗುತ್ತಿರುವ ಈ ಸಂದರ್ಭದಲ್ಲಿ ಮನೆ ಮನೆಯಲ್ಲಿ ಸಾಹಿತ್ಯ ಬೆಳಗಬೇಕು’ ಎಂದು ಎಂದು ಕಥೆಗಾರ ಎಚ್.ಭೀಮರಾವರ್ ವಾಷ್ಠರ್ (ಶಾಸ್ತ್ರಿ) ಅಭಿಪ್ರಾಯಪಟ್ಟರು.ಬೆಳ್ಳಾರೆಯ ಸಾಹಿತಿ ಮುಸ್ತಾಫಾ ಬೆಳ್ಳಾರೆ ಸಂಪಾದಕತ್ವದ ಈದ್ ಮಿಲಾದ್ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಇನ್ನೊಂದೆಡೆ ಕೋಮು ಘರ್ಷಣೆಗಳು ನಡೆಯುತ್ತಿವೆ. ಇವೆಲ್ಲ ಅಭಿವೃದ್ದಿಗೆ ಪೂರಕವಲ್ಲ. ನಮ್ಮಲ್ಲಿ ಜಾತಿ ಧರ್ಮ ಸಮ್ಮೇಳನಗಳು ನಡೆಯುವ ಬದಲು ಸರ್ವಧರ್ಮ ಸಮ್ಮೆಳನಗಳು ನಡೆಯಬೇಕು. ಆ ಮೂಲಕ ಎಲ್ಲಾ ಧರ್ಮದವರ ನಡುವೆ ಭಾವೈಕ್ಯದ ಬೆಳಕು ಬೀರಲಿ’  ಎಂದು ಹೇಳಿದರು. ಕೇಂದ್ರ ನಾರು ಮಂಡಳಿ ನಿಗಮದ ನಿರ್ದೇಶಕ ಟಿ.ಎಂ. ಶಹೀದ್ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆನಂದ ಬೆಳ್ಳಾರೆ, ಲಿಂಗಪ್ಪ ಬೆಳ್ಳಾರೆ, ಮುಸ್ತಾಫಾ ಬೆಳ್ಳಾರೆ, ಮಹಮದ್ ಸುಳ್ಯ, ವಿಠಲ ವಾಷ್ಠರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT