ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕು ಹೋರಾಟಗಾರ್ತಿ ನಸ್ರಿನ್‌ ಬಿಡುಗಡೆ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಟೆಹ್ರಾನ್‌ (ಎಪಿ): ಮೂರು ವರ್ಷಗಳ ಕಾಲ ಬಂಧನದಲ್ಲಿದ್ದ ಮಾನವ ಹಕ್ಕು ಹೋರಾಟಗಾರ್ತಿ ನಸ್ರಿನ್‌ ಸೊತೊದೆ ಅವರನ್ನು ಕೊನೆಗೂ ಇರಾನ್‌ ಬಿಡುಗಡೆ ಮಾಡಿದೆ.

ಅಧ್ಯಕ್ಷ  ಹಸನ್‌ ರೊಹನಿ ಅವರು ಮುಂದಿನ ವಾರ ನ್ಯೂಯಾರ್ಕ್ ಗೆ ತೆರ­ಳ­ಲಿದ್ದು, ಇದಕ್ಕೂ ಮುನ್ನವೇ ವಕೀಲೆ ನಸ್ರಿನ್‌ ಅವರನ್ನು ಬಿಡುಗಡೆ ಮಾಡ­ಲಾಗಿದೆ.

ಇರಾನ್‌ ಒಳಗೆ ಹಾಗೂ ಹೊರಗೆ ಮುಕ್ತವಾತಾವರಣ ಕಲ್ಪಿಸ­ಲಾ­ಗುವುದು ಎಂದು ಹಸನ್‌ ಅವರು ಅಧ್ಯಕ್ಷರಾದ ಬಳಿಕ ಅಭಯ ನೀಡಿ­ದ್ದನ್ನು ಇಲ್ಲಿ ಉಲ್ಲೇಖಿ­ಸಬಹುದು.  ಇಬ್ಬರು ಮಕ್ಕಳ ತಾಯಿ ನಸ್ರಿನ್‌ ಅವರನ್ನು 2011ರ ಮಾರ್ಚ್‌ ನಲ್ಲಿ ಬಂಧಿಸ­ಲಾಗಿತ್ತು.
 
ಮೊಹಮ್ಮದ್‌ ಖಟಾಮಿ  ಅವಧಿ­ಯಲ್ಲಿ ಉಪವಿದೇಶಾಂಗ ಸಚಿವರಾಗಿದ್ದ ಮೊಸೆನ್‌ ಅಮಿನ್‌ ಜದೆ,  ವಾಣಿಜ್ಯ ಖಾತೆ ಉಪ ಸಚಿವರಾಗಿದ್ದ ಫೈಜೊಲ್ಲಾ ಅರಬ್‌ ಸೊರ್‌ಕಿ ಮತ್ತು ಪತ್ರಕರ್ತೆ ಇಶಾ ಸಹರ್ಕಿಜ್‌ ಅವರನ್ನೂ ಬಿಡುಗಡೆ ಮಾಡಲಾಗಿದೆ.

ಭದ್ರತೆಗೆ  ಅಪಾಯ ತಂದೊಡ್ಡುವ ಆರೋಪದ ಮೇಲೆ 2009ರಲ್ಲಿ ( ವಿವಾದಿತ ಚುನಾವಣೆ ನಡೆದ ಸಂದರ್ಭ) ಇವರನ್ನು ಬಂಧಿಸಲಾಗಿತ್ತು.  ‘ಇರಾನ್‌ ಹೆಚ್ಚು ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದಿದ್ದಾರೆ  ರಾಜಕೀಯ ವಿಶ್ಲೇಷಕ ಸರೊಶ್‌ ಫರ್ಹದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT