ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾನವೀಯ ಬಾಂಧವ್ಯಕ್ಕೆ ಕನ್ನಡ ಸೇತುವೆ'

Last Updated 17 ಡಿಸೆಂಬರ್ 2012, 6:18 IST
ಅಕ್ಷರ ಗಾತ್ರ

ಧಾರವಾಡ:  `ಇಂದಿನ ಸಂದರ್ಭದಲ್ಲಿ ಮನುಷ್ಯ ಮನುಷ್ಯರ ನಡುವೆ ಸಂಬಂಧ ವನ್ನು ಬೆಸೆಯಲು ಕನ್ನಡ ಶಬ್ದಗಳು ಹೆಚ್ಚು ಬಳಕೆಯಾಗಬೇಕಿವೆ' ಎಂದು ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಭಾನುವಾರ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮಮ್ಮಿ , ಡ್ಯಾಡಿ ಎಂಬ ಇಂಗ್ಲಿಷ್ ಪದಗಳು ಸಂಬಂಧದ ಅಭಿರುಚಿಯನ್ನು ಕೆಡಿಸುತ್ತಿವೆ. ಅವ್ವ, ಅಪ್ಪ ಎಂಬ ಕನ್ನಡ ಶಬ್ದಗಳು ಮನಸ್ಸಿಗೆ ಮುದ ನೀಡುತ್ತವೆ. ಇಂಥ ಕನ್ನಡ ಶಬ್ದಗಳು ಈಗ ಜಾಗತೀಕರಣದ ಕೈಯಲ್ಲಿ ಸಿಕ್ಕು ಕಣ್ಮರೆಯಾಗಿವೆ ಈ ನಿಟ್ಟಿನಲ್ಲಿ ಕನ್ನಡಿಗರಾದ ನಾವು ಕನ್ನಡದ ಬಗ್ಗೆ ಇರುವ ಮನೋಭಾವವನ್ನು ಭಿನ್ನ ಮಾಡಿಕೊಳ್ಳಬೇಕಿದೆ' ಎಂದರು.

`ಕನ್ನಡದ ಅಧ್ಯಾಪಕರು ಹಾಗೂ ಸಾಹಿತಿಗಳು ಮಾಡದೇ ಇರುವಂತ ಕೆಲಸವನ್ನು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಾಡುತ್ತಿದ್ದಾರೆ.ವ್ಯಾಪಾರಕ್ಕಾಗಿ ಮಾ ರುಕಟ್ಟೆ ಎಷ್ಟು ಮುಖ್ಯವೋ ಸಂಚಾರ ಕ್ಕಾಗಿ ಸಾರಿಗೆಯೂ ಅಷ್ಟೇ ಮುಖ್ಯವಾಗಿದೆ.

ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿ ರುವ ಸಿಬ್ಬಂದಿ, ಪ್ರಯಾಣಿಕ ರೊಂದಿಗೆ ಶುದ್ಧ ಕನ್ನಡವನ್ನೇ ಮಾತನಾ ಡುತ್ತಾರೆ. ಸಾಹಿತಿಗಳು ಒಂದು ವೇಳೆ ಎಲ್ಲ ಭಾಷೆ ಗಳನ್ನು ಬಳಸಿಕೊಂಡು ಮಾತನಾಡಿ ದರೂ ಸಾರಿಗೆ ಸಂಸ್ಥೆ ಸಿಬ್ಬಂದಿ ಮಾತ್ರ ಕನ್ನಡವನ್ನೇ ಬಳಸುತ್ತಾರೆ' ಎಂದು ಅವರು ಹೇಳಿದರು.

ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿದರು. ಕನ್ನಡ ಕ್ರಿಯಾ ಸಮಿತಿ ರಾಜ್ಯ ಅಧ್ಯಕ್ಷ ವ.ಚ.ಚನ್ನೇಗೌಡ, ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಎಚ್.ಚಂದ್ರಶೇಖರ, ಚನ್ನಯ್ಯಗೌಡ ಹಾಗೂ ವೆಂಕಟೇಶ ಮರೆಗುದ್ದಿ ಇದ್ದರು.

ನಾಗವೇಣಿ ಪ್ರಾರ್ಥಿಸಿದರು. ಜ್ಯೋತಿಬಾ ಖೈರೋಜಿ ಪ್ರಾಸ್ತಾವಿಕ ಮಾತನಾಡಿದರು. ಅಮೃತ ಹೊಸಳ್ಳಿ ಸ್ವಾಗತಿಸಿದರು. ಮಾನಪ್ಪ ಬಡಿಗೇರ ನಿರೂಪಿಸಿದರು. ವೈ.ಆರ್.ತಂಬೂರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT