ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯ ಶಿಕ್ಷಣ ಬೇಕು:ಡಾ. ಪಾಟೀಲ

Last Updated 9 ಡಿಸೆಂಬರ್ 2013, 10:26 IST
ಅಕ್ಷರ ಗಾತ್ರ

ರಾಯಚೂರು: ಈ ದೇಶದಲ್ಲಿ ಜಾತಿ, ಅಪರಾಧ ಮತ್ತು ಭ್ರಷ್ಟಾಚಾರ ಎಂಬ ಮೂರು ದೊಡ್ಡ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ಕ್ಯಾನ್ಸರ್ ರೋಗದಂತೆ ಕಾಡುತ್ತಿವೆ. ಯುವಕರಿಗೆ ಮಾನವೀಯ ಮೌಲ್ಯವುಳ್ಳ ಶಿಕ್ಷಣವನ್ನು ಶಿಕ್ಷಣ ಸಂಸ್ಥೆ ನೀಡಬೇಕು. ಅನುಕಂಪವಿಲ್ಲದ ಶಿಕ್ಷಣ ಸುವಾಸನೆ ಇಲ್ಲದೆ ಹೂವ್ವಿನಂತೆ ಎಂದು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಹೇಳಿದರು.

ಭಾನುವಾರ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಾಯಕ ಎಜ್ಯುಕೇಶನಲ್ ಟ್ರಸ್ಟ್‌್ ನ  ಜಸ್ಟಿಸ್‌ ಶಿವರಾಜ ಪಾಟೀಲ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಯುವ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು’ ಎಂಬ ವಿಷಯ ಕುರಿತು ಮಾತನಾಡಿದರು.

ಒಂದು ಶಿಕ್ಷಣ ಸಂಸ್ಥೆಯಿಂದ ಮೌಲ್ಯಯುತ ವ್ಯಕ್ತಿಗಳು ರೂಪಗೊಂಡರೆ, ಆ ಶಿಕ್ಷಣ ಸಂಸ್ಥೆಗೆ ಅದಕ್ಕಿಂತ ದೊಡ್ಡ ಶ್ರೇಯಸ್ಸು ಮತ್ತೊಂದಿಲ್ಲ ಎಂದು ಹೇಳಿದರು.ಮಕ್ಕಳು ದೇಶದ ಆಸ್ತಿ. ಯುವಕರು ದೇಶದ ಶಕ್ತಿ. ಹಿರಿಯರು ಅನುಭವದ ದೊಡ್ಡ ಸಂಪತ್ತು. ಹೀಗಾಗಿ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಆಸ್ತಿ ಮಾಡಿದರೆ ಬುದ್ಧವಂತ ಮಕ್ಕಳಿದ್ದರೆ ಉಳಿಸಿಕೊಳ್ಳುತ್ತಾರೆ. ದಡ್ಡರಾದರೆ ಆಸ್ತಿ ಉಳಿಯುವುದಿಲ್ಲ. ಹೀಗಾಗಿ ಬುದ್ಧವಂತ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಈ ದೇಶ ಮತ್ತು ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳನ್ನಾಗಿ ಪಾಲಕರು ರೂಪಿಸಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಮಾನವೀಯ ಮೌಲ್ಯ, ನೈತಿಕ ಗುಣ ಬೆಳೆಸಬೇಕು ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ಸೆಷನ್ಸ್ ನ್ಯಾಯಾಧೀಶ ಸತೀಶಸಿಂಗ್, ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಲಿಂಗನಗೌಡ ಮಲ್ಹಾರ, ಖರಗಪುರ ಐ.ಐ.ಟಿ ಕೇಂದ್ರದ ಗುಂಡಪ್ಪಗೌಡ ಹಳ್ಳಿ, ಡಾ.ಗುಂಡಪ್ಪ ಪಟೇಲ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ್. ಶಂಕರಪ್ಪ, ಪಂಡಿತ ಡಾ.ನರಸಿಂಹಲು ವಡವಾಟಿ, ಗುಲ್ಬರ್ಗದ ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾರುತಿರಾವ್‌ ಡಿ. ಮಾಲೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಂಸ್ಥೆ ಅಧ್ಯಕ್ಷ ಚನ್ನಾರಡ್ಡಿ ಪಾಟೀಲ ಅವರು ನ್ಯಾಯಮೂರ್ತಿ ಶಿವರಾಜ ಪಾಟೀಲ ಹಾಗೂ ಮುಖ್ಯ ಅತಿಥಿಗಳನ್ನು ಸತ್ಕರಿಸಿದರು.
ಸರ್ವಜ್ಞ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚನ್ನಾರಡ್ಡಿ ಪಾಟೀಲ ಅವರು ಪ್ರಾಸ್ತಾವಿಕ ಮಾತನಾಡಿದರು.  ಸರಸ್ವತಿ ಹಾಗೂ ತಂಡದವರು ಭಾವಗೀತೆ ಮತ್ತು ವಚನ ಸಂಗೀತ ಪ್ರಸ್ತುತ ಪಡಿಸಿದರು. ಪ್ರಾಚಾರ್ಯ ಶಿವರಾಜ ಬೆಟ್ಟದೂರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT