ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ: ಹೊಸ ಕೈಪಿಡಿ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾನಸಿಕ ಆರೋಗ್ಯ ಮಾರ್ಗದರ್ಶಿ
ಲೇ: ಎನ್.ವಿಶ್ವರೂಪಾಚಾರ್, ಪ್ರ: ಎನ್.ವಿಶ್ವರೂಪಾಚಾರ್, 86, 12ನೇ ಸಿ ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10, ಮೊಬೈಲ್ 9731314348; ಪುಟಗಳು 624; ಬೆಲೆ: ರೂ.340.

ಮನಸ್ಸಿನ ನಿಯಂತ್ರಣದ ವಿಚಾರ ಜನಸಾಮಾನ್ಯರಿಗೆ ಅರ್ಥವಾಗುವಂತೆ ಹಾಗೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವಂತೆ ಬರೆದ ಬರಹಗಳ ಸಂಗ್ರಹ ಈ ಪುಸ್ತಕ. ಈ ಪುಸ್ತಕದಲ್ಲಿ ಸಂಗ್ರಹಿಸಿರುವ ವಿಷಯಗಳ ಅಗಾಧತೆ ಮತ್ತು ವೈವಿಧ್ಯ ವಿಸ್ಮಯವನ್ನುಂಟು ಮಾಡುತ್ತದೆ ಎನ್ನುತ್ತಾರೆ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಮಾನಸಿಕರೋಗ ತಜ್ಞ ಡಾ ಎಂ. ಶ್ರೀನಿವಾಸ.

ಆರೋಗ್ಯಕರ ಮನಸ್ಸು ಹೊಂದುವುದು ಹೇಗೆ? ನಿಮ್ಮ ನಡವಳಿಕೆ ಹೇಗಿರಬೇಕು? ನಮ್ಮ ಭಾವನೆ ಹೇಗಿರಬೇಕು? ಕೋಪ ತಡೆಗಟ್ಟಿಕೊಳ್ಳುವುದು ಹೇಗೆ? ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ನೂರು ಮಾರ್ಗಗಳು, ದಾಂಪತ್ಯದಲ್ಲಿ ಒತ್ತಡ ಇತ್ಯಾದಿ ಹಲವು ವಿಷಯಗಳನ್ನು ತಿಳಿಗನ್ನಡದಲ್ಲಿ ಈ ಪುಸ್ತಕ ವಿವರಿಸುತ್ತದೆ. ನಾಳೆ (ಫೆ.5) ಬೆಂಗಳೂರು, ನಾಯಂಡನಹಳ್ಳಿಯಲ್ಲಿರುವ ಸ್ಪಂದನ ಹಾಸ್ಪಿಟಲ್‌ನಲ್ಲಿ ಈ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
್ಝ

ಆಹಾ ಅಡುಗೆ ಅಂಕಣದಲ್ಲಿ ಕಳೆದ ವಾರ ಪೈನಾಪಲ್ ಕೇಕ್ ಹಾಗೂ ಫ್ರೂಟ್‌ಬಾಲ್ ಕೇಕ್ ಮಾಡುವ ವಿಧಾನಗಳನ್ನು ಪ್ರಕಟಿಸಲಾಗಿದೆ. ಎರಡೂ ರೀತಿಯ ಕೇಕ್‌ಗಳನ್ನು ಮಾಡಲು ಹಿಟ್ಟಿನ ಮಿಶ್ರಣವನ್ನು ಬೇಯಲು ಇಡುವ ಮೊದಲು ಕುಕ್ಕರ್‌ನಲ್ಲಿ ಅರ್ಧ ಇಂಚು ಮರಳು ಹಾಕಿರಬೇಕು ಎಂಬ ಅಂಶ ಬಿಟ್ಟುಹೋಗಿತ್ತು. ಈ ಅಂಶವನ್ನು ಗಮನಿಸುವಂತೆ ಓದುಗರಲ್ಲಿ ವಿನಂತಿ-                   -ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT