ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ದೌರ್ಬಲ್ಯದ ಮಕ್ಕಳನ್ನು ಕಡೆಗಣಿಸಬಾರದು

Last Updated 9 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: `ಮಾನಸಿಕ ದೌರ್ಬಲ್ಯ ಹೊಂದಿರುವ ಮಕ್ಕಳನ್ನು ಸಮಾಜದಲ್ಲಿ ಕಡೆಗಣಿಸಬಾರದು. ಅವರನ್ನು ಸಮಾಜದ ಅಂಗವಾಗಿ ಪರಿಗಣಿಸಬೇಕು~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಭಿಪ್ರಾಯಪಟ್ಟರು.
ಅಸೋಸಿಯೇಷನ್ ಫಾರ್ ದಿ ಮೆಂಟಲಿ ಚಾಲೆಂಜ್ಡ್ (ಎಎಂಸಿ) ಸಂಸ್ಥೆ ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಮಾನಸಿಕ ದೌರ್ಬಲ್ಯ ಪ್ರಕೃತಿದತ್ತವಾದುದು. ಅದು ಹುಟ್ಟಿನಿಂದ ಬರುವಂತಹದು. ಸಮಾಜದಲ್ಲಿ ಇತರರಂತೆ ಬದುಕುವ ನೆಲೆ ರೂಪಿಸುವ ಮೂಲಕ ಅವರಲ್ಲಿರುವ ಮಾನಸಿಕ ಕೊರತೆಯನ್ನು ನೀಗಿಸುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಅಗತ್ಯ~ ಎಂದು ನುಡಿದರು.

`ಎಲ್ಲರಲ್ಲೂ ಪ್ರತಿಭೆಗಳು ಸುಪ್ತವಾಗಿ ಅಡಕವಾಗಿರುತ್ತವೆ. ಇಂತಹ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರುವಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ಮಾನಸಿಕ ದೌರ್ಬಲ್ಯತೆಯುಳ್ಳ ಮಕ್ಕಳ ಆರೈಕೆಗೆ ತಾಯಂದಿರು ಹೆಚ್ಚಿನ ಕಾಳಜಿ ವಹಿಸಬೇಕು~ ಎಂದರು.

`ಕಾಲಚಕ್ರ ಬದಲಾದಂತೆ ವ್ಯಕ್ತಿಯ ಜೀವನದ ಘಟ್ಟಗಳು ಬದಲಾಗುತ್ತವೆ. ಇಂದು ಯುವಕರಾದವರು ನಾಳೆ ವೃದ್ಧರಾಗುತ್ತಾರೆ. ಇದೆಲ್ಲಾ ಪ್ರಕೃತಿ ನಿಯಮ. ಈ ಮಕ್ಕಳನ್ನು ಮಾನಸಿಕ ದೌರ್ಬಲ್ಯರೆಂದು ಪರಿಗಣಿಸದೆ ಅವರನ್ನು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಅವರಲ್ಲಿರುವ ಸೃಜನಶೀಲತೆಯನ್ನು ಬೆಳಕಿಗೆ ತರಬೇಕು~ ಎಂದರು.

`ಕರ್ನಾಟಕ ಸಾಮಾಜಿಕ ಸೇವಾ ಕಾರ್ಯಗಳಿಗೆ ಉತ್ತಮ ತಾಣವಾಗಿದೆ. ನಾನು ರಾಜ್ಯಪಾಲನಾಗಿ ಬಂದ ದಿನದಿಂದ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ನೋಡಿದ್ದೇನೆ. ಸಾಮಾಜಿಕ ಸೇವೆಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಜಾರಿಗೆ ತರಲು ಕರ್ನಾಟಕದಲ್ಲಿ ಉತ್ತಮ ವಾತಾವರಣವಿದೆ~ ಎಂದು ಪ್ರಶಂಸಿದರು.

`ಸಾಮಾಜಿಕ ಕಾರ್ಯದಲ್ಲಿ ತೊಡಗುವ ಯಾವುದೇ ಸಂಸ್ಥೆಗಳಿಗೆ ರಾಜಭವನದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಕಾರ್ಯದಲ್ಲಿ ತೊಡಗುವ ಸಂಸ್ಥೆಗಳಿಗೆ ನೆರವು ನೀಡುತ್ತೇನೆ~ ಎಂದು ಹೇಳಿದರು.
ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರು ಲಿಟಲ್ ಥಿಯೇಟರ್ ತಂಡದವರು `ರೊಬಿಸ್ ಗಾರ್ಡನ್~ ನಾಟಕ ಪ್ರದರ್ಶಿಸಿದರು.

ಸಂಸ್ಥೆಯ ಮುಖ್ಯಸ್ಥ ಕೆ.ಜೈರಾಜ್, ಸಂಸ್ಥಾಪಕ ಸದಸ್ಯೆ ಸುಧಾರೆಡ್ಡಿ, ಗೌರವ ಕಾರ್ಯದರ್ಶಿ ಮೀರಾ ರಾಮಚಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT