ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿಯಲ್ಲಿ ವಕೀಲರಿಂದ ಕಲಾಪ ಬಹಿಷ್ಕಾರ

Last Updated 12 ಜುಲೈ 2012, 9:15 IST
ಅಕ್ಷರ ಗಾತ್ರ

ಮಾನ್ವಿ: ಕೇಂದ್ರ ಸರ್ಕಾರದ ಉದ್ದೇಶಿತ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ-2011 ಮತ್ತಿತರ ಹೊಸ ಮಸೂದೆಗಳನ್ನು ವಿರೋಧಿಸಿ ಸ್ಥಳೀಯ ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ  ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುವ ಮೂಲಕ  ಪ್ರತಿಭಟನೆ ನಡೆಸಿದರು.

ನಂತರ ತಹಸೀಲ್ದಾರ್ ಕಚೇರಿಗೆ ತೆರಳಿದ ವಕೀಲರು ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಎಮ್.ಗಂಗಪ್ಪ ಕಲ್ಲೂರು ಅವರಿಗೆ ಸಲ್ಲಿಸಿದರು. ರಾಜ್ಯಸಭೆಯಲ್ಲಿ ಅಂಗೀಕರವಾದ ಉನ್ನತ ಶಿಕ್ಷಣ ಮಸೂದೆ-2011, ಹೊರದೇಶದ ಶಿಕ್ಷಣ ಸಂಸ್ಥೆಗಳ ಮಸೂದೆ-2010, ಶೈಕ್ಷಣಿಕ ಮಂಡಳಿಯ ಮಸೂದೆ-2010, ರಾಷ್ಟ್ರೀಯ ಕಾನೂನು ಶಾಲಾ ಮಸೂದೆ-2011, ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ-2012 ಮತ್ತಿತರ ಮಸೂದೆಗಳನ್ನು ಕೇಂದ್ರ ಸರ್ಕಾೃ ಜಾರಿಗೊಳಿಸಬಾರದು ಎಂದು  ಮನವಿ ಮೂಲಕ ಒತ್ತಾಯಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಚೆನ್ನನಗೌಡ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ನಾಯಕ, ವಕೀಲರಾದ ಮಹಿಮೂದ ಅಲಿ, ಬಿ.ಕೆ.ಅಮರೇಶಪ್ಪ, ಶೇಖರಪ್ಪ ಪಾಟೀಲ್,  ಗುಮ್ಮಾ ಬಸವರಾಜ, ಎ.ಬಿ,ಉಪ್ಪಳಮಠ, ಸೈಯದ್ ತನ್ವೀರುಲ್ ಹಸನ್, ವೀರನಗೌಡ ಪೋತ್ನಾಳ, ಪಿ.ತಿಪ್ಪಣ್ಣ ಬಾಗಲವಾಡ,  ಜಯಶ್ರೀ, ಬಿ.ವಿಶ್ವನಾಥ, ಎಮ್.ಡಿ.ಆಸೀಫ್ ಹುಸೇನ್,  ಪಂಪಾಪತಿ ಬಾಗಲವಾಡ, ಉಮೇಶ ಕೆ, ಮನೋಹರ ವಿಶ್ವಕರ್ಮ, ಸಿದ್ದಲಿಂಗಪ್ಪ ಕೊಟ್ನೇಕಲ್, ಶರಣಬಸವ ಹರವಿ, ಶ್ಯಾಮಸುಂದರ ನಾಯಕ, ರವಿಕುಮಾರ ಪಾಟೀಲ್, ಸಮದಾನಿ ಸಿದ್ದಿಕಿ, ಮೌನೇಶ ರಾಠೋಡ, ದೂಮಣ್ಣ ನಾಯಕ, ಹನುಮಂತ ನಾಯಕ ನೀರಮಾನ್ವಿ, ಜಾಲಾಪುರ ವೆಂಕಟೇಶ ನಾಯಕ ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT