ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಮನ್‌ ಮ್ಯಾಥ್ಯೂಗೆ ಪ್ರಶಸ್ತಿ

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಮಾನ್ಯ ತಿಲಕ್‌ ಸ್ಥಾಪಿಸಿರುವ ಟ್ರಸ್ಟ್‌ ನೀಡುವ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿಗೆ ‘ಮಲಯಾಳ ಮನೋರಮಾ’ ಪತ್ರಿಕೆಯ ಪ್ರಧಾನ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಾಮನ್‌ ಮ್ಯಾಥ್ಯೂ ಭಾಜನರಾಗಿದ್ದಾರೆ.

ಕೇಸರಿ ಮರಾಠಾ ಟ್ರಸ್ಟ್ ನೀಡುವ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪತ್ರಿಕೋದ್ಯಮ ಉತ್ಕೃಷ್ಟತಾ ಪ್ರಶಸ್ತಿ­ಯನ್ನು ಮ್ಯಾಥ್ಯೂ ಅವರಿಗೆ ಜನವರಿ 4ರಂದು ನೀಡಲಾಗುವುದು.

ಟ್ರಸ್ಟ್‌ನ 133ನೇ ಸ್ಥಾಪನಾ ದಿನದಂದು ಪುಣೆಯ ತಿಲಕ್‌ವಾಡಾ­ದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಲ್ಲಿಸಿರುವ ಅಪ್ರತಿಮ ಸೇವೆ­ಗಾಗಿ ಮಾಮನ್‌ ಮ್ಯಾಥ್ಯೂರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಸರಿ ಸಂಪಾದಕ ಟ್ರಸ್ಟಿ ದೀಪಕ್‌ ತಿಲಕ್‌ ಹೇಳಿದ್ದಾರೆ.

ಮ್ಯಾಥ್ಯೂ ಅವರು 44 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿ­ರುವುದು ಮಾತ್ರವಲ್ಲದೆ, ಭಾರತೀಯ ಸಂಪಾದಕರ ಸಂಘ, ಪತ್ರಿಕೆ ಮಾಲೀಕರ ಸಂಘಟನೆಯಾದ ಭಾರತೀಯ ವಾರ್ತಾ ಪತ್ರಿಕೆ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT