ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಮ್ಮ ಜಾತ್ರಾ ಮಹೋತ್ಸವ

Last Updated 2 ಏಪ್ರಿಲ್ 2013, 6:42 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಹನೂರು ಪಟ್ಟಣದಲ್ಲಿ ಏಪ್ರಿಲ್ 1ರಿಂದ ಬೆಟ್ಟಳ್ಳಿ ಮಾರಮ್ಮನ ಬೃಹತ್ ಜಾತ್ರಾ ಮಹೋತ್ಸವ ಆರಂಭವಾಗಿದೆ. ಜಾತ್ರೆ ಅಂಗವಾಗಿ 15 ದಿನಗಳಿಂದ ಪಟ್ಟಣದ ದೇವಾಲಯದಲ್ಲಿ ನಿತ್ಯ ಸಂಜೆ ರಂಗಕುಣಿತ ನಿರಂತರವಾಗಿ ನಡೆದುಕೊಂಡು ಬಂದಿದೆ.

ಏ.1ರಂದು ಜಾಗರಣೆ ಸಮರ್ಪಣೆ ನಡೆಯಿತು. ಏ.2ರಂದು ತಂಪುಜ್ಯೋತಿ ಸಮರ್ಪಣೆ ನಡೆಯಲಿದೆ. ಏ.3ರಂದು ಹಬ್ಬದ ಪ್ರಮುಖ ಭಾಗವಾಗಿರುವ ಬಾಯಿಬೀಗ ಕಾರ್ಯಕ್ರಮ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಹಾಗೂ ಗಡಿಭಾಗದ ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ಆಗಮಿಸಿ ಬಾಯಿಬೀಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಏ.4ರಂದು ಬೆಳಿಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ಅಗ್ನಿಕುಂಡ ದರ್ಶನ ನೆರವೇರಲಿದೆ.
ಭಕ್ತರಿಗಾಗಿ ಕುಡಿಯುವ ನೀರು ಪೂರೈಸಲು ಟ್ಯಾಂಕರ್‌ಗಳ ವ್ಯವಸ್ಥೆ ಸೇರಿದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT