ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಮಾಯೆ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ವಿದೇಶಕ್ಕೆ ಹರಿಯುತ್ತಿದೆ ಕಪ್ಪುಹಣ
ಕಪ್ಪುಹಣದ ಬಗ್ಗೆ ಶ್ವೇತಪತ್ರ ಹೊರಡಿಸುವ, ಹಣದ ಲೇವಾದೇವಿ  ತಡೆಗಟ್ಟಲು ಕಾನೂನುಗಳನ್ನು ಇನ್ನಷ್ಟು ಬಲಪಡಿಸುವ ಮಸೂದೆ ಜಾರಿಗೆ ತರುವುದಾಗಿ ಕೇಂದ್ರ ಹೇಳುತ್ತಿರುವಂತೆಯೇ ಆಘಾತಕಾರಿ ಸುದ್ದಿಯೊಂದು ಬಂದಿದೆ. 2009ರಲ್ಲಿ 128 ಶತಕೋಟಿ ಡಾಲರ್‌ಗಳಷ್ಟು (ರೂ 6,65,600 ಕೋಟಿ) ಕಪ್ಪುಹಣ ದೇಶದಿಂದ ಹೊರ ಹೋಗಿದೆ.

ವಾಷಿಂಗ್ಟನ್ ಮೂಲದ ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರೆಟಿ (ಜಿಎಫ್‌ಐ) ಸಿದ್ಧಪಡಿಸಿದ ವರದಿಯಲ್ಲಿ ಈ ಸಂಗತಿ ಇದೆ. 2000ದಿಂದ 2009ರ ವಧಿಯಲ್ಲಿ 157 ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಅಕ್ರಮವಾಗಿ ಹೊರಹೋದ ಹಣವೆಷ್ಟು ಎಂಬುದನ್ನು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಈ  ಸಂಗತಿ ಬಯಲಿಗೆ ಬಂದಿದೆ.

2009ರಲ್ಲಿ ಇಂತಹ ಕಪ್ಪುಹಣದಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 903 ಶತಕೋಟಿ ಡಾಲರ್‌ಗಳಷ್ಟು (ರೂ46,95,600 ಕೋಟಿ) ನಷ್ಟವಾಗಿದೆ. 2008ರಲ್ಲಿ ಈ ಕಪ್ಪುಹಣದ ರವಾನೆ ಪ್ರಮಾಣ ಮತ್ತಷ್ಟು ಜಾಸ್ತಿ ಇತ್ತು. ಅದರಿಂದ ಈ ದೇಶಗಳು 1.55 ಲಕ್ಷ ಕೋಟಿ ಡಾಲರ್‌ಗಳ (ರೂ 80.6 ಲಕ್ಷ ಕೋಟಿ) ನಷ್ಟ ಅನುಭವಿಸಿದ್ದವು. ಭಾರತಕ್ಕೆ ಇಲ್ಲೂ ಸ್ವಲ್ಪ ಸಮಾಧಾನದ ಸಂಗತಿ ಇದೆ. ಕಪ್ಪುಹಣದಿಂದ ತೊಂದರೆಗೊಳಗಾದ ಪಟ್ಟಿಯಲ್ಲಿ ಭಾರತ 15ನೇ ಸ್ಥಾನದಲ್ಲಿದೆ.

ಪ್ರವಾಸ: ಕುಂದದ ಉತ್ಸಾಹ
ಇಂಧನ ಬೆಲೆ ಏರಿಕೆ, ಹಣದುಬ್ಬರದಂತಹ ಸನ್ನಿವೇಶಗಳಿಂದಲೂ ರಜಾ ದಿನಗಳನ್ನು ವಿರಾಮವಾಗಿ ಕಳೆಯುವ ಭಾರತೀಯರ ತುಡಿತ ಕಡಿಮೆಯಾಗಿಲ್ಲದಿರುವುದು `ಟ್ರಿಪ್ ಅಡ್ವೈಸರ್~ ಟ್ರಾವೆಲ್ ವೆಬ್‌ಸೈಟ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ಶೇ 44ರಷ್ಟು ಭಾರತೀಯರು ಮುಂದಿನ ವರ್ಷವೂ ರಜಾ ದಿನಗಳನ್ನು ವಿರಾಮವಾಗಿ, ಮಜಾವಾಗಿ ಕಳೆಯುವುದಕ್ಕೆ ಈಗಲೇ ಯೋಜನೆ ರೂಪಿಸಿಕೊಂಡಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT