ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಮಾಯೆ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಮಹಿಳೆಯರಿಗೆ ಜಯ
ಸೌದಿ ಅರೇಬಿಯಾದ ಮಹಿಳೆಯರಿಗೆ  ಕೊನೆಗೂ ಸಣ್ಣ ಜಯ ಸಿಕ್ಕಿದೆ. ಇದುವರೆಗೆ ಒಳ ಉಡುಪು ಖರೀದಿಸಲು ಪುರುಷರ ಎದುರು ತೀವ್ರ ಮುಜುಗರ ಪಡುತ್ತಿದ್ದ ಪ್ರಮದೆಯರಿಗೆ ಇನ್ನು ಮುಂದೆ ಅಂತಹ ಪರಿಸ್ಥಿತಿ ಎದುರಾಗದು. 

ಮಹಿಳೆಯರು ಮಾತ್ರ ಒಳ ಉಡುಪು ಮಾರಾಟ ಮಾಡುವ ನಿರ್ಬಂಧವು ಅಲ್ಲಿ ಈಗ ಜಾರಿಗೆ ಬಂದಿದೆ. ಪುರುಷರ ಎದುರು ಸರಿಯಾದ ಅಳತೆ ಹೇಳದೆ ಅಥವಾ ಅಳತೆಗೆ ತಕ್ಕುದಲ್ಲದ ಮತ್ತು ಅಳತೆ  ಮೀರಿದ  ಉಡುಪು ಖರೀದಿಸಿ ಫಜೀತಿಪಟ್ಟ ವನಿತೆಯರೆಲ್ಲ ಈಗ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾರೆ.

ಒಳ ಉಡುಪು ಮಾರಾಟ ಮಾಡುವ ಮಳಿಗೆಗಳಲ್ಲಿ ಮಹಿಳೆಯರನ್ನೇ ನೇಮಿಸಿಕೊಳ್ಳಲು ಅಲ್ಲಿನ ಸರ್ಕಾರ ಆದೇಶ ನೀಡಿತ್ತು.  ಆದೇಶ ಜಾರಿಗೆ ಸಾಕಷ್ಟು ಕಾಲಾವಕಾಶವನ್ನೂ ನೀಡಲಾಗಿತ್ತು.

ಅಭಿವೃದ್ಧಿಗೆ ನೀರು ಅಡ್ಡಿ

ಅಸಮರ್ಪಕ ವಿದ್ಯುತ್ ಪೂರೈಕೆಯು ಆರ್ಥಿಕ ಚಟುವಟಿಕೆಗಳಿಗೆ ಈಗ ಅಡ್ಡಿಯಾಗಿ ಪರಿಣಮಿಸಿದ್ದರೆ, ಮುಂಬರುವ ದಿನಗಳಲ್ಲಿ ನೀರಿನ ಅಲಭ್ಯತೆಯೇ  ಪ್ರಮುಖ ಅಡಚಣೆಯಾಗಲಿದೆ. 

ಅದರಲ್ಲೂ ವಿಶೇಷವಾಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ, ರಾಸಾಯನಿಕಗಳು, ಜವಳಿ, ಸಿಮೆಂಟ್ ಉತ್ಪಾದನಾ ಘಟಕಗಳಿಗೆ ನೀರು ದೊರೆಯದಿರುವುದೇ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ನಡೆಸಿದ ಸಮೀಕ್ಷೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT