ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಬಂದ ಜಂಬುನೇರಳೆ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ರಾಜಫಲ ಮಾವಿನ ಕಾಲ ಮುಗಿಯುವ ಹೊತ್ತಿಗೆ ಜಂಬು ನೇರಳೆ ಮಾರುಕಟ್ಟೆ ಪ್ರವೇಶಿಸಿದೆ. ಮಧುಮೇಹಕ್ಕೆ ಇದರ ಸೇವನೆ ಪರಿಣಾಮಕಾರಿ ಎಂಬ ಪ್ರತೀತಿ ವ್ಯಾಪಕವಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಬೇಡಿಕೆಯೂ ವೃದ್ಧಿಸುತ್ತಿದೆ.

ನಗರದ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಮಂಡಿಪೇಟೆ, ಎಸ್‌ಐಟಿ ಮುಖ್ಯರಸ್ತೆಯಲ್ಲಿ ಜಂಬು ನೇರಳೆ ಹಣ್ಣನ್ನು ತಳ್ಳುವ ಗಾಡಿಗಳಲ್ಲಿ ಮಾರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

`ಗೌರಿಬಿದನೂರು ಭಾಗದ ಜಂಬುನೇರಳೆಯ ರುಚಿ ಹೆಚ್ಚು~ ಎನ್ನುತ್ತಾರೆ ಪ್ರತಿವರ್ಷ ನೇರಳೆ ಮಾರುವ ಅಸ್ಲಾಂ.
ಮಂಗಳವಾರ ತುಮಕೂರು ಸಗಟು ಮಾರುಕಟ್ಟೆಯಲ್ಲಿ ಒಂದು ಗೂಡೆಗೆ (ಮಕ್ಕರಿ ಅಥವಾ ಮೂಟೆ) ರೂ. 2000 ದರವಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ರೂ. 150ರಂತೆ ನೇರಳೆ ಮಾರಾಟವಾಗುತ್ತಿದೆ.

`ಜನ ಸಿಕ್ಕಾಪಟ್ಟೆ ಚೌಕಾಸಿ ಮಾಡ್ತಾರೆ ಸಾರ್. ನಮ್ಗೆ ಕೆ.ಜಿ.ಗೆ ರೂ. 100 ಬೀಳುತ್ತೆ. ಮೇಲೆ ಐವತ್ತಾದ್ರೂ ಲಾಭ ಸಿಕ್ಕಲ್ಲ ಅಂದ್ರೆ ವ್ಯಾಪಾರಾನಾದ್ರೂ ಯಾಕೆ ಮಾಡ್ಬೇಕು ಹೇಳಿ?~ ಎಂದು ಪ್ರಶ್ನಿಸುತ್ತಾರೆ ವ್ಯಾಪಾರಿಗಳು.
`ಶುಗರ್‌ಗೆ ಇದು ಒಳ್ಳೇದು ಅಂತ ಮೊನ್ನೆ ಟೀವಿಲಿ ಹೇಳಿದ್ರು. ಅದ್ಕೆ ಅಪ್ಪಂಗೆ ಕೊಡೋಣ ಅಂತ ತಗೊಳ್ತಿದ್ದೀನಿ~ ಎಂದು ಗ್ರಾಹಕ ರಾಜೀವ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT