ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಲಗ್ಗೆ ಇಟ್ಟ ಚಪಾತಿ!

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇಂದಿನ ಹೈ-ಫೈ ಯುಗದಲ್ಲಿ ಎಲ್ಲವೂ ಯಾಂತ್ರೀಕರಣಗೊಂಡಿದೆ, ಬದುಕು ಸಹ. ಕೆಲಸದ ಒತ್ತಡದಿಂದ ಇಂದು ಮನೆಯಲ್ಲಿ ಅಡುಗೆ ಮಾಡಿಕೊಳ್ಳುವರ ಸಂಖ್ಯೆ ಕೂಡ ಅಪರೂಪವೆನಿಸಿದೆ. ಹೀಗಾಗಿ ಬಹುತೇಕ ಮಂದಿ ಈಗ  ಸಿದ್ಧ ಆಹಾರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೋಟೆಲ್ ಹಾಗೂ ಮನೆಗಳಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟ ಹಾಗೂ ಶುಚಿತ್ವವುಳ್ಳ ಚಪಾತಿ  ಪೂರೈಸುವ ಸಂಸ್ಥೆಯೊಂದು ಬೆಂಗಳೂರಿನಲ್ಲಿ ತಲೆ ಎತ್ತಿದೆ.

ಸಂಸ್ಥೆಯ ಹೆಸರು ‘ಲಂಚ್ ಡಬ್ಬಾ’. ಅಂದಹಾಗೆ, ಚಪಾತಿಗಳನ್ನು ಯಂತ್ರದ ಮೂಲಕ ತಯಾರಿಸಿ ಸರಬರಾಜು ಮಾಡುವ ಬೆಂಗಳೂರಿನ ಪ್ರಪ್ರಥಮ ಸಂಸ್ಥೆ ಎಂಬುದು ಇದರ ಹೆಗ್ಗಳಿಕೆ.

ನಟರಾಜ್, ಆರಾಧನಾ ಭಟ್ ಹಾಗೂ ರಾಘವೇಂದ್ರ ಅವರು ‘ಲಂಚ್ ಡಬ್ಬಾ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು. ಈ ಮೂರು ಯುವ ಮನಸ್ಸುಗಳು ಒಂದುಗೂಡಿ ಕಟ್ಟಿದ ಈ ಸಂಸ್ಥೆ ಕೆಲವೇ ತಿಂಗಳಲ್ಲಿ ಲಾಭದ ಹಾದಿಯಲ್ಲಿದೆ. ಇವರ ಉದ್ಯಮದ ಕನಸಿಗೆ ರೆಕ್ಕೆ ಕಟ್ಟಿದ್ದು ಮೆಟ್ರೊ ಸಿಟಿಯಲ್ಲಿನ ಜನರ ಒತ್ತಡ ಜೀವನ. ಮುಂಬೈನಲ್ಲಿ ಮಾರುಕಟ್ಟೆ ಆಕ್ರಮಿಸಿರುವ ಕಾರ್ಪೊರೇಟ್ ಫುಡ್ ಸಿಸ್ಟಮ್ ಸರ್ವಿಸ್. ದೈತ್ಯನಗರಿಗಳ ಜನರ ಬದುಕನ್ನು ಕಣ್ಣಮುಂದೆ ಕಂಡಿದ್ದು ಹಾಗೂ ಸ್ವತಃ ತಾವೇ ಅನುಭವಿಸಿದ್ದು ಇವರನ್ನು ಚಪಾತಿ ತಯಾರಿಕಾ ಉದ್ಯಮಕ್ಕೆ ಪ್ರೇರೇಪಿಸಿತು. ಮೂಲತಃ ಇವರೆಲ್ಲರೂ ವಿಭಿನ್ನ ಹಿನ್ನೆಲೆ ಉಳ್ಳವರು. ಈಗ ಒಂದುಗೂಡಿ ಸಣ್ಣ ಉದ್ಯಮ  ಸ್ಥಾಪಿಸಿ ಅದನ್ನು ದೊಡ್ಡದಾಗಿ ಬೆಳೆಸುವ ಹುಮ್ಮಸ್ಸಿನಲ್ಲಿದ್ದಾರೆ. ಜೊತೆಗೆ ಉದ್ಯೋಗ ಸೃಷ್ಟಿ ಕೂಡ ಇವರ ಉದ್ಯಮದ ಒಂದು ಆಶಯ.

ಬೆಂಗಳೂರು ನಗರಿ ಪ್ರಮಖವಾಗಿ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಉದ್ಯಮದತ್ತ ಹೆಜ್ಜೆ ಹಾಕಿದ್ದಾಗಿ ಆರಾಧನಾಭಟ್ ತಿಳಿಸುತ್ತಾರೆ.

ಜೊತೆಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟ ಹಾಗೂ ಶುಚಿತ್ವದಿಂದ ಕೂಡಿದ ಚಪಾತಿ ಪೂರೈಸುವುದು ಇವರ ಮೂಲ ಉದ್ದೇಶ. ಆಹಾರೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಕೈಗೊಂಡು ಯಂತ್ರದ ಮೂಲಕ ಚಪಾತಿ ತಯಾರಿಸಿ ಉದ್ಯಮ ಸ್ಥಾಪಿಸಲಾಗಿದೆ. ಸಾಮಾಜಿಕ ಕಳಕಳಿ ಜೊತೆ ಜೊತೆಗೆ ಮಾರುಕಟ್ಟೆ ಆಕ್ರಮಿಸುವುದು ಕೂಡ ಇವರ ಆಶಯ.

ಚಪಾತಿಗೆ ಯಾಂತ್ರಿಕ ಸ್ಪರ್ಶ
ರಕ್ಷಣಾ ಪಡೆಗೆ ಆಹಾರ ಪೂರೈಸುವ ‘ಸಿಎಫ್‌ಟಿಆರ್‌ಐ’ ಸೇರಿದಂತೆ 60 ರಾಷ್ಟ್ರಗಳು ಸಂಶೋಧನೆ ನಡೆಸಿ ರೂಪಿಸಿರುವ ಅತ್ಯುನ್ನತ ತಂತ್ರಜ್ಞಾನವುಳ್ಳ ಯಂತ್ರವನ್ನು ಇಲ್ಲಿ ಚಪಾತಿ ತಯಾರಿಕೆಗಾಗಿ ಬಳಸಲಾಗುತ್ತದೆ. ಈ ಯಂತ್ರಕ್ಕೆ ಗೋಧಿ ಹಿಟ್ಟನ್ನು ಕಲೆಸಿ ಹಾಕಿದರೆ ಸಾಕು ಕ್ಷಣಮಾತ್ರದಲ್ಲಿ ಗರಿ ಗರಿಯಾದ ಚಪಾತಿ ಹೊರಬರುತ್ತದೆ. ಈ ಯಂತ್ರ ಗಂಟೆಗೆ  2000 ಚಪಾತಿ ತಯಾರಿಸುವ ಸಾಮರ್ಥ್ಯ ಹೊಂದಿದೆ.

ಸಾಕಷ್ಟು ಪ್ರೋಟಿನ್ ಹೊಂದಿರುವ ಚಪಾತಿ ಎಂದರೇ ಎಲ್ಲರಿಗೂ ಇಷ್ಟವೇ. ಒಂದು ಚಪಾತಿ 30 ಗ್ರಾಂ ತೂಕವಿದ್ದು, 7.5 ಇಂಚು ಸುತ್ತಳತೆ ಹೊಂದಿರುತ್ತದೆ. ಒಂದು ವಾರದವರೆಗೆ ಇದನ್ನು ಉಪಯೋಗಿಸಬಹುದು. ಹೀಗೆ ತಯಾರದ ಚಪಾತಿಯನ್ನು ಆಕರ್ಷಕ ಸಿಲ್ವರ್ ಪ್ಯಾಕೆಟ್‌ನಲ್ಲಿ ಮಾರುಕಟ್ಟೆಗೆ ಸರಬರಾಜು ಮಾಡುತ್ತದೆ.

ಸದ್ಯಕ್ಕೆ ಈ ಸಂಸ್ಥೆಯು ಬೆಂಗಳೂರಿನ ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಹೋಟೆಲ್‌ಗಳಿಗೆ ಪ್ರತಿನಿತ್ಯ ಹತ್ತು ಸಾವಿರದವರೆಗೂ ಚಪಾತಿ ಸರಬರಾಜು ಮಾಡುತ್ತಿದೆ. ಇಲ್ಲಿನ ಪ್ರತಿಷ್ಠಿತ ಹೋಟೆಲ್‌ಗಳಾದ ಕದಂಬ, ಶಾಂತಿ ಸಾಗರ್, ಪೈ ಪ್ರೆಸಿಡೆಂಟ್ ಹಾಗೂ ನಗರದ ಇನ್ನಿತರೆ ಹೋಟೆಲ್‌ಗಳಿಗೆ ಇವರು ಚಪಾತಿ ರವಾನೆ ಮಾಡುತ್ತಿದ್ದಾರೆ. ಪ್ರತಿ ಚಪಾತಿಗೆ ` 1.80 ಪೈಸೆ ಮಾತ್ರ. ಆರ್ಡರ್ ನೀಡಿದರೆ ತಮ್ಮಲ್ಲಿಗೆ ಚಪಾತಿ ಪೂರೈಸುತ್ತಾರೆ. 

 ಬಸ್ ಹಾಗೂ ರೈಲ್ವೆ ನಿಲ್ದಾಣದಲ್ಲಿ ಗುಣಮಟ್ಟದ ಆಹಾರ ಪೂರೈಸುವ ನಿಟ್ಟಿನಲ್ಲಿ ಸಂಸ್ಥೆ ಮಳಿಗೆ (ಔಟ್‌ಲೆಟ್)ಗಳನ್ನು ತೆರೆಯುವ ಹವಣಿಕೆಯಲ್ಲಿದೆ. ಜೊತೆಗೆ ನಗರದಾದ್ಯಂತ ಅಂಗಡಿ ತೆರೆಯುವ ಉತ್ಸಾಹ ಸಹ ಇದೆ.

ಇಲ್ಲಿ ಪ್ರಾರಂಭಿಕವಾಗಿ ಕೇವಲ ಚಪಾತಿಯನ್ನಷ್ಟೇ ತಯಾರಿಸಲಾಗುತ್ತಿದೆ. ಆದರೆ ಔಟ್‌ಲೆಟ್‌ಗಳ ಮೂಲಕ ಟೊಮೆಟೊ, ಮೆಂತೆ, ಆಲೂ ಹೀಗೆ ಹತ್ತಕ್ಕೂ ಅಧಿಕ ಬಗೆಯ ವೈವಿಧ್ಯಮಯ ಸ್ವಾಧವುಳ್ಳ ಚಪಾತಿ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಗ್ರಾಹಕರ ಸನಿಹಕ್ಕೆ ತೆರಳುವ ಉದ್ದೇಶ ಹೊಂದಿರುವುದಾಗಿ ನಟರಾಜ್ ತಿಳಿಸುತ್ತಾರೆ.

ಡಯಾಬಿಟಿಸ್, ಬಿ.ಪಿ, ಒಬಿಸಿಟಿ ಹಾಗೂ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಪಾತಿ ಅತ್ಯುತ್ತಮ ಆಹಾರ. ಹೀಗಾಗಿ ವೈದ್ಯರು ಸಹ ಚಪಾತಿ ತಿನ್ನಲು ಸೂಚಿಸುತ್ತಾರೆ. ಡಯಟ್ ಮಾಡುವವರಿಗಂತೂ ಚಪಾತಿ ಅತ್ಯುತ್ತಮ ಆಹಾರ.

ಮಾಹಿತಿಗೆ 96329 15642 ಅಥವಾ 99017 28066. ಮಾಹಿತಿಗೆ ಅಂತರ್ಜಾಲ ತಾಣ www.lunchdabba.comಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT