ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ನಡುಕ

ಸೂಚ್ಯಂಕ 383 ಅಂಶ–₨46 ಪೈಸೆ ಕುಸಿತ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) ಶುಕ್ರವಾರ ಪ್ರಕಟಿಸಿದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅನಿರೀಕ್ಷಿತವಾಗಿ ಬಡ್ಡಿ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ದೇಶದ ಹಣಕಾಸು ಮಾರು­ಕಟ್ಟೆಯಲ್ಲಿ ದಿಢೀರ್‌ ಅಸ್ಥಿರತೆ ಕಾಣಿಸಿಕೊಂಡಿತು.

ಮುಂಬೈ ಷೇರು­ಪೇಟೆ ಸಂವೇದಿ ಸೂಚ್ಯಂಕ ವಹಿವಾಟಿನ ಒಂದು ಹಂತ ದಲ್ಲಿ 595 ಅಂಶ ಕುಸಿತ ಕಂಡಿತು. ನಂತರ ಗವ­ರ್ನರ್‌ ರಘುರಾಂ ರಾಜನ್‌ ನೀಡಿದ ಸಕಾರಾತ್ಮಕ ಹೇಳಿಕೆಯಿಂದ 212 ಅಂಶಗಳಷ್ಟು ಚೇತರಿಕೆ ಕಂಡಿತು. ದಿನ­ದಂತ್ಯದಲ್ಲಿ 383 ಅಂಶಗಳನ್ನು ಕಳೆದು­ಕೊಂಡ ಸೂಚ್ಯಂಕ 20,263 ಅಂಶ­ಗಳಲ್ಲಿ ವಹಿವಾಟು ಕೊನೆಗೊ­ಳಿಸಿತು.

ಷೇರುಪೇಟೆ ಕುಸಿತದಿಂದ ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯವೂ 46 ಪೈಸೆಗ­ಳಷ್ಟು ಕುಸಿದು ರೂ.62.23ಕ್ಕೆ ಜಾರಿತು. ಆಮದುದಾ­ರ ರಿಂದ ಡಾಲರ್‌ ಬೇಡಿಕೆ ಹೆಚ್ಚಿರು­ವುದು ಮತ್ತು ‘ಎಫ್‌ಐಐ’ ಹೂಡಿಕೆ ಮೇಲೆ ವಿಧಿಸಿರುವ ನಿರ್ಬಂಧ ಕೂಡ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿವೆ.

ಡಾಲರ್‌ ವಿರುದ್ಧ ರೂಪಾಯಿ ಅಪಮೌಲ್ಯ ತಪ್ಪಿಸಲು ಜುಲೈನಲ್ಲಿ ‘ಆರ್‌ಬಿಐ’ ಹಣಕಾಸು ಮಾರುಕಟ್ಟೆ ಮೇಲೆ ಕೆಲವು ನಿಯಂತ್ರಣ ಕ್ರಮ­ಗಳನ್ನು ವಿಧಿಸಿತ್ತು. ಇದನ್ನು ಭಾಗಶಃ ವಾಪಸ್‌ ಪಡೆಯು­ವುದಾಗಿ ಗವರ್ನರ್ ಹೇಳಿ ದ್ದಾರೆ. ಇದರಿಂದ ಮಧ್ಯಾಹ್ನ ನಂತರದ ವಹಿವಾಟಿನಲ್ಲಿ ಸೂಚ್ಯಂಕ ಚೇತರಿಕೆ ಕಂಡಿತು. ಆದರೆ, ಇದಕ್ಕೂ ಮುನ್ನ ಬಡ್ಡಿ ದರ ಏರಿಕೆ ಭೀತಿಯಿಂದ ಬ್ಯಾಂಕ್‌, ವಾಹನ ಉದ್ಯಮ ವಲಯದ ಷೇರು ಗಳು ಗರಿಷ್ಠ ಮಟ್ಟದಲ್ಲಿ ಹಾನಿ ಅನುಭವಿ­ಸಿದವು. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಷೇರುಪೇಟೆ ವಹಿವಾಟು ರೂ.298 ಕೋಟಿಯಷ್ಟು ಇಳಿಕೆಯಾಗಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ ದಿನದ ವಹಿವಾಟಿನಲ್ಲಿ 103 ಅಂಶಗಳಷ್ಟು ಇಳಿಕೆ ಕಂಡು 6,012 ಅಂಶಗಳಿಗೆ ವಹಿವಾಟು ಕೊನೆಗೊ­ಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT