ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಕಾರು ದುಬಾರಿ

₨3000ದಿಂದ ₨10,000 ಬೆಲೆ ಏರಿಕೆ
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗುವಾಹಟಿ(ಪಿಟಿಐ): ದೇಶದ ಕಾರು ತಯಾರಿಕಾ ಕ್ಷೇತ್ರದ ಅತಿದೊಡ್ಡ ಕಂಪೆನಿ ‘ಮಾರುತಿ ಸುಜುಕಿ ಇಂಡಿಯಾ ಲಿ.’(ಎಂ ಎಸ್‌ಐ), ತನ್ನ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಕನಿಷ್ಠ ₨3,000ದಿಂದ ಗರಿಷ್ಠ ₨10,000ದವರೆಗೂ ಏರಿಸಲು ಮುಂದಾಗಿದೆ.

ಇಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ‘ಎಂಎಸ್‌ಐ’ನ ಮಾರು ಕಟ್ಟೆ ವಿಭಾಗದ ಮುಖ್ಯ ನಿರ್ವಹಣಾಧಿ ಕಾರಿ ಮಯಾಂಕ್‌ ಪಾರೀಕ್‌, ದರ ಏರಿಕೆ ಅಕ್ಟೋಬರ್‌ ಮೊದಲ ವಾರದಿಂದ ಜಾರಿಯಾಗಲಿದೆ ಎಂದರು.

ವಿದೇಶಿ ವಿನಿಮಯ ಮಾರುಕಟ್ಟೆ ಯಲ್ಲಿ ರೂಪಾಯಿ ತೀವ್ರಿ ಅಪಮೌಲ್ಯ ಗೊಂಡಿರುವ ಹಿನ್ನೆಲೆಯಲ್ಲಿ ಕಾರು ತಯಾರಿಕೆ ವೆಚ್ಚದಲ್ಲಿ ಭಾರಿ ಹೆಚ್ಚಳವಾ ಗಿದೆ. ಹಾಗಾಗಿ ಬೆಲೆ ಏರಿಸುವುದು ಅನಿ ವಾರ್ಯವಾಗಿದೆ ಎಂದು ಹೇಳಿದರು.

ದೇಶದಲ್ಲಿ ತಯಾರಾಗುವ ಮಾರುತಿ ಕಾರುಗಳ ಬೆಲೆ ₨2.35 ಲಕ್ಷದಿಂದ ₨10.21 ಲಕ್ಷದವರೆಗೂ (ಎಕ್ಸ್‌ಷೋ ರೂಂ ದರ) ಇದೆ. ಜನವರಿಯಲ್ಲಿ ಕಾರು ಬೆಲೆಯನ್ನು ₨20,000ದವರೆಗೂ ‘ಎಂಎಸ್‌ಐ’ ಏರಿಸಿತ್ತು. ಹುಂಡೈ, ಜನರಲ್‌ ಮೋಟಾರ್ಸ್‌ ಮತ್ತು ಟೊಯೊಟಾ ಕಂಪೆನಿಗಳೂ ಕಾರುಗಳ ದರ ಏರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT