ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಯುವ ಪ್ರತಿಭೋತ್ಸವ

Last Updated 15 ಜನವರಿ 2013, 19:59 IST
ಅಕ್ಷರ ಗಾತ್ರ

ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾರುತಿ ಸುಜುಕಿ ಕಂಪೆನಿಯು ಇತ್ತೀಚೆಗಷ್ಟೆ `ಕಲರ್ಸ್‌ ಆಫ್ ಯೂತ್ 2012- ಟ್ಯಾಲೆಂಟ್ ಹಂಟ್' ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇಡೀ ಭಾರತದಲ್ಲಿನ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಯನ್ನು ಶೋಧಿಸುವ ಕಾರ್ಯ ಇದಾಗಿದ್ದು, ಕರ್ನಾಟಕದ ಭಾಗವಾಗಿ ಬೆಂಗಳೂರಿನ ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಸಭಾಂಗಣದಲ್ಲಿ ಯುವ ಪ್ರತಿಭಾನ್ವೇಷಣಾ ಸ್ಪರ್ಧೆ ನಡೆಯಿತು.

ದೇಶದಲ್ಲಿನ 10 ಕಡೆಗಳಲ್ಲಿ ಈ ಪ್ರತಿಭಾನ್ವೇಷಣಾ ಸ್ಪರ್ಧೆಯನ್ನು ಮಾರುತಿ ಸುಜುಕಿ ಆಯೋಜಿಸಿದೆ. ಕರ್ನಾಟಕದಾದ್ಯಂತ 30 ಕಾಲೇಜಿನ 110 ವಿದ್ಯಾರ್ಥಿಗಳು ನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಂತಿಮ ಹಂತ ತಲುಪಿದ ವಿಜೇತರು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಸಂಗೀತ, ನೃತ್ಯ, ಚಿತ್ರಕಲೆ, ಛಾಯಾಗ್ರಹಣ, ಆವಿಷ್ಕಾರ ಇತ್ಯಾದಿಯಾಗಿ ಒಟ್ಟು ಆರು ಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ.

ಎಸ್‌ಐಬಿಎಂ ಕಾಲೇಜಿನ ವಿದ್ಯಾರ್ಥಿ ಲೌಡೆಸ್ ಸೋರ್ಸ್ ವಯಲಿನ್‌ನಲ್ಲಿ, ದಯಾನಂದ ದಂತವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಥಿಯೋಡೊರ್ ಸುನಿತ್ ಮ್ಯಾನ್ಯುಯೆಲ್ ಬೀಟ್ ಬಾಕ್ಸಿಂಗ್‌ನಲ್ಲಿ, ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸೋನಾ ಜಿ. ತೆರಾತಿಲ್ ನೃತ್ಯದಲ್ಲಿ,  ಕ್ರೈಸ್ಟ್ ವಿವಿಯ ವಿದ್ಯಾರ್ಥಿ ಫಾತಿಮಾ ರಾಜ್ ಕೆ ಸಂಗೀತದಲ್ಲಿ, ಡಾ. ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಜಾಕೋಬ್ ಐಪ್ ಸ್ಕಿಟ್‌ನಲ್ಲಿ ವಿಜೇತರಾದರು. ತೀರ್ಪುಗಾರರಾಗಿ ಬಾಲಿವುಡ್ ನಟಿ ಇಶಾ ಕೊಪ್ಪಿಕರ್, ಪರಿಕ್ರಮ ಬ್ಯಾಂಡ್‌ನ ಸುಭೀರ್ ಮಲಿಕ್ ಇದ್ದರು.

`ಕ್ಲಾಸ್ ರೂಮಿನ ನಾಲ್ಕು ಗೋಡೆಗಳ ಒಳಗಿನ ಕಲಿಕೆಗೆ ಪ್ರತಿಭೆ ಸೀಮಿತವಾಗಬಾರದು. ಇದೇ ಕಾರಣಕ್ಕೆ ಮಾರುತಿ ಸುಜುಕಿ ಯುವಜನರನ್ನು ಪ್ರೋತ್ಸಾಹಿಸುತ್ತಾ ಬಂದಿದೆ' ಎಂದರು ಮಾರುತಿ ಸುಜುಕಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಮುಖ್ಯ ನಿರ್ವಾಹಕ ಅಧಿಕಾರಿ ಮಯಾಂಕ್ ಪರೀಕ್.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಾರುತಿ ಸುಜುಕಿ ಕಾರನ್ನು ಬಹುಮಾನವಾಗಿ ಕಂಪೆನಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT