ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತೇಶ್ವರ ಕಾರ್ತಿಕೋತ್ಸವ

Last Updated 10 ಡಿಸೆಂಬರ್ 2013, 9:35 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ನಗರದಲ್ಲಿನ ಮಾರು­ತೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.

ಮಾರುತೇಶ್ವರ ಮೂರ್ತಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯ­ಕ್ರಮಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು.

ನಂತರ ಕನಕದಾಸ ವೃತ್ತದ ಬಳಿ ಇರುವ ಮಲ್ಲಿಕಾರ್ಜುನ ದೇವಸ್ಥಾನ­ದಿಂದ ದೇವಸ್ಥಾನದ ಮೆರವಣಿಗೆ ಮೂಲಕ ತಂದ ಕಳಸವನ್ನು ಆರೋಹಣ ಮಾಡಲಾಯಿತು. ಕಳಸ ಹಿಡಿದ  ಮಹಿಳೆಯರು ವಿವಿಧ ವಾಧ್ಯ ಮೇಳದ ಕಲಾವಿದರು ಹಾಗೂ ಡಾ.ಅಂಬೇಡ್ಕರ್‌ ನಗರದ ಭಕ್ತರು ಮೆರವಣಿಗೆ­ಯಲ್ಲಿದ್ದರು. ನಂತರ ನಡೆದ ದೀಪೋತ್ಸ­ವದಲ್ಲಿ ಭಕ್ತರು ಭಾವಹಿಸಿದ್ದರು.

ಸಂಜೆ ಕಲಾವಿದ ದುರಗಪ್ಪ ಹಿರೇಮನಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯ­ಕ್ರಮ ನಡೆಯಿತು. ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ, ದೇವಸ್ಥಾನಕ್ಕೆ ಭೇಟಿ ನೀಡಿ ಮಾರುತೇಶ್ವರನ ದರ್ಶನ ಪಡೆದದರು.

ಪ್ರಮಖರಾದ ಕಟ್ಟೆಪ್ಪ ಹಿರೇಮನಿ, ಕಂಟೆಪ್ ಮಾಸ್ತರ್, ಶರಣಪ್ಪ ಗುಮ­ಗೇರಿ, ಶೇಖಪ್ಪ ಮ್ಯಾಗೇರಿ, ಹನು­ಮಂತಪ್ಪ ವೆಂಕಟಾಪುರ, ಪುರಸಭೆ ಸದಸ್ಯ ಚಂದ್ರಶೇಖರ ಹಿರೇಮನಿ, ಬಾಬೂ­ಸಾಬ ಆನೇಹೊಸೂರು, ತಾಜು­ದ್ದೀನ್ ದಳಪತಿ, ರಾಮಣ್ಣ ಇಂಗಳಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT