ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರೇನಹಳ್ಳಿ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಾಗಡಿ ಮುಖ್ಯರಸ್ತೆ ಮಾರೇನಹಳ್ಳಿ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. 1524 ನವೆಂಬರ್ 27ರಂದು ವಿಜಯನಗರದ ಅರಸ ಶ್ರೀಕೃಷ್ಣದೇವರಾಯನ ಆಳ್ವಿಕೆ ಕಾಲದಲ್ಲಿ ಪಾಳೆಗಾರ ಕೋನಪ್ಪ ನಾಯಕರಿಂದ ಆಂಜನೇಯ ಮೂರ್ತಿ ಪ್ರತಿಷ್ಠಾಪನೆಗೊಂಡಿತು ಎಂಬ ಮಾಹಿತಿ ದೇವಾಲಯ ಆವರಣದಲ್ಲಿರುವ ಶಿಲಾ ಶಾಸನದಿಂದ ತಿಳಿದುಬಂದಿದೆ.

ಕಾಲನ ಒಡೆತಕ್ಕೆ ಸಿಕ್ಕಿ ಶಿಥಿಲಗೊಂಡ ದೇವಾಲಯಕ್ಕೆ 2002ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಪ್ರತಿವರ್ಷ ಚೈತ್ರ ಮಾಸದ ಶ್ರೀರಾಮ ನವಮಿ ದಿನ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ನಡೆಯುತ್ತದೆ. ಈ ಬಾರಿ ಗುರುವಾರದಿಂದ ಭಾನುವಾರದವರೆಗೆ (ಏ.18ರಿಂದ ಏ.21) 78ನೇ ವರ್ಷದ ಶ್ರೀಪ್ರಸನ್ನ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಗುರುವಾರ ಪುಣ್ಯಾಹವಾಚನ, ವಾಸ್ತುಹೋಮ, ರಾಕ್ಷೋಘ್ನ ಹೋಮ ಮತ್ತು ರಾಮತಾರಕ ಹೋಮ. ಸ್ಥಳ: ಮಾರೇನಹಳ್ಳಿ, ಮಾಗಡಿ ಮುಖ್ಯರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT