ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕಂಡೇಯ ನದಿ ಬ್ಯಾರೇಜ್ ಉದ್ಘಾಟನೆ

Last Updated 3 ಡಿಸೆಂಬರ್ 2012, 7:40 IST
ಅಕ್ಷರ ಗಾತ್ರ

ಯಮಕನಮರಡಿ: ಮಾರ್ಕಂಡೆಯ ನದಿಗೆ ಎರಡು ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಕೇವಲ 6 ತಿಂಗಳಲ್ಲಿ ಪೂರ್ಣಗೊಳಿಸಿ ರೈತರ ಬಹುದಿನಗಳ ಕನಸನ್ನು ಈಡೇರಿಸಲಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ತಾಲ್ಲೂಕಿನ ಕಡೋಲಿ- ಕಾಕತಿ ಗ್ರಾಮದ ಮಧ್ಯ ಮಾರ್ಕಂಡೆಯ ನದಿಗೆ ರೂ 1.3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾರೇಜು ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಬ್ಯಾರೇಜ್‌ನಲ್ಲಿ 100 ಮೀಟರ್ ನೀರು ಸಂಗ್ರಹವಾಗಿದೆ. ಅಲ್ಲದೇ ಸುಮಾರು 225 ಹೆಕ್ಟೇರ್ ಪ್ರದೇಶದ ಜಮೀನಿಗೆ ನೀರಾವರಿ ಸೌಲಭ್ಯ ದೊರೆತಿದೆ ಜೊತೆಗೆ ಅಲತಗಾ, ಅಗಸಗಾ, ಕಡೋಲಿ, ಕಾಕತಿ, ದೇವಗೇರಿ ಈ ಎಲ್ಲ ಗ್ರಾಮಗಳ ರೈತರು ನೀರಾವರಿ ಸೌಲಭ್ಯ ಮಾಡಿಕೊಂಡು ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಂಡಿದ್ದಾರೆ ಎಂದರು.

ಕಡೋಲಿ ಗ್ರಾಮದ ಹಿರಿಯರಾದ ಅನು ಕಟಾಬಂಳೆ ಮಾತನಾಡಿ, ಶಾಸಕ ಸತೀಶ ಜಾರಕಿಹೊಳಿ ತಮ್ಮ 4.5 ವರ್ಷದ ಅಧಿಕಾರ ಅವಧಿಯಲ್ಲಿ ರಸ್ತೆ, ಬ್ಯಾರೇಜ್, ಕುಡಿಯುವ ನೀರು, ಶಿಕ್ಷಣ ಹೀಗೆ ಅನೇಕ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಸವಂತ ಮಾಯನಾಚೆ, ಹುಕ್ಕೇರಿ ಗ್ರಾ.ವಿ.ಸ.ಸಂಘ ನಿರ್ದೇಶಕರಾದ ರಾಜೇಂದ್ರ ಸಿದ್ದಪ್ಪಾ ತುಬಚಿ, ಹೊಸ ವಂಟಮೂರಿ ತಾಪಂ ಸದಸ್ಯ ರಾಮಣ್ಣಾ ಗುಳ್ಳಿ, ಸಾಗರ ಪಾಟೀಲ, ನಾರಾಯಣ ಹೊಳಿ, ಈರಣ್ಣ ರಾಜಕಟ್ಟಿ, ಪರಶು ರಾಮ ನಾರ್ವೇಕರ, ಬಸವರಾಜ ಸುಣ ಗಾರ, ಶಂಕರಾವ ತಬಗಿ, ಸತ್ಯಪ್ಪಾ ಮುಚ್ಚಂಡಿ, ಮಾರುತಿ ಗುಟಗುದ್ದಿ, ರವಿ ಹಂದಿಗುಂದ, ಪಾಂಡು ರಂಗಸುಭೆ ಸಣ್ಣ ನೀರಾವರಿ ಇಲಾಖೆ ಆರ್.ಎಂ.ಚಿಕ್ಕಮಠ, ಸಂಜಯ ಮಾಳಗಿ, ಅರುಣ ಟೋಪ್ಪಣ್ಣವರ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT