ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಕೊ ಸಿಮೊನೆಲಿ ದುರ್ಮರಣ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸೆಪಾಂಗ್ (ಐಎಎನ್‌ಎಸ್): ಇಟಲಿಯ ಮೋಟೋ ಜಿಪಿ ಚಾಲಕ ಮಾರ್ಕೊ ಸಿಮೊನೆಲಿ ಭಾನುವಾರ ಮಲೇಷ್ಯನ್ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಘಟನೆ ರೇಸಿಂಗ್ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದೆ.

ಸೆಪಾಂಗ್‌ನಲ್ಲಿ ನಡೆದ ರೇಸ್‌ನ ಎರಡನೇ ಲ್ಯಾಪ್ ವೇಳೆ ದುರ್ಘಟನೆ ಸಂಭವಿಸಿದೆ. ಹೋಂಡಾ ಬೈಕ್ ಚಾಲನೆ ಮಾಡಿದ ಸಿಮೊನೆಲಿ ಆಯತಪ್ಪಿ ಟ್ರ್ಯಾಕ್‌ನಲ್ಲಿ ಬಿದ್ದರು. ಹಿಂದಿನಿಂದ ಬಂದ ಯಮಾಹ ತಂಡದ ಕಾಲಿನ್ ಎಡ್ವರ್ಡ್ಸ್ ಮತ್ತು ಡುಕಾಟಿ ತಂಡದ ವ್ಯಾಲೆಂಟಿನೊ ರೋಸಿ ಅವರ ಬೈಕ್ ಸಿಮೊನೆಲಿಗೆ ಅಪ್ಪಳಿಸಿದೆ. ಇದರ ಪರಿಣಾಮ ಅವರ ಹೆಲ್ಮೆಟ್ ಕಿತ್ತುಬಂದಿದ್ದು, ತಲೆಗೆ     ಗಂಭೀರ ಗಾಯವಾಯಿತು.

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಜೀವ ಉಳಿಸಲು ಆಗಲಿಲ್ಲ. ಸಿಮೊನೆಲಿ 2008 ರಲ್ಲಿ 250 ಸಿಸಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಎನಿಸಿದ್ದರು. ಘಟನೆಯ ಕಾರಣ ಸಂಘಟಕರು ರೇಸ್‌ನ್ನು ರದ್ದುಗೊಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕದಲ್ಲಿ `ಲಾಸ್ ವೆಗಾಸ್ 300 ಇಂಡಿಕಾರ್~ ಸರಣಿ ರೇಸ್ (ಕಾರು ರೇಸ್)  ವೇಳೆ ನಡೆದ ಅಪಘಾತದಲ್ಲಿ ಇಂಗ್ಲೆಂಡ್‌ನ ಚಾಲಕ ಡ್ಯಾನ್ ವೆಲ್ಡನ್  ಸಾವನ್ನಪ್ಪಿದ್ದರು. ರೇಸ್ ಅಭಿಮಾನಿಗಳು ಈ ಘಟನೆಯ ಆಘಾತದಿಂದ ಚೇತರಿಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT