ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ

Last Updated 2 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಹೆಚ್ಚುತ್ತಿರುವ ದೂಳು ಮತ್ತು ಮಾಲಿನ್ಯ ಪ್ರಮಾಣವನ್ನು ನಿವಾರಿಸುವಂತೆ ಆಗ್ರಹಿಸಿ ಕರುನಾಡ ಸೇನೆ ಕಾರ್ಯಕರ್ತರು ಬುಧವಾರ ಎಮ್ಮೆ ಸಮೇತ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಜಾರ ರಸ್ತೆಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ‘ಮಾಲಿನ್ಯ ನಿಯಂತ್ರಿಸುವಲ್ಲಿ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ. ಸ್ವಚ್ಛ ಪರಿಸರ ನಿರ್ಮಿಸಬೇಕಾದ ನಗರಸಭೆಯು ನಗರದ ಅಭಿವೃದ್ಧಿ ಮತ್ತು ನಿವಾಸಿಗಳ ಬಗ್ಗೆ ಕಾಳಜಿ ತೋರುತ್ತಿಲ್ಲ’ ಎಂದು ಆರೋಪಿಸಿದರು.

ಕರುನಾಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹೈಟೆಕ್ ಶ್ರೀನಾಥ್, ‘ಪರಿಸರ ಶುಚಿಯಿರದ ಕಾರಣ ಎಲ್ಲೆಡೆ ದೂಳು ಮತ್ತು ಮಾಲಿನ್ಯ ಆವರಿಸಿಕೊಂಡಿದೆ. ವಿದ್ಯಾರ್ಥಿಗಳು, ವೃದ್ಧರು, ವರ್ತಕರು ಸೇರಿದಂತೆ ಸಾರ್ವಜನಿಕರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಅಂಶ ಗೊತ್ತಿದ್ದರೂ ಕೂಡ ನಗರಸಭೆಯು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿನಕ್ಕೆ ಎರಡು ಹೊತ್ತು ಮಣ್ಣು ತೆಗೆಯುವ ಮೂಲಕ ನಗರವನ್ನು ಶುಚಿಯಾಗಿಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಪದಾಧಿಕಾರಿಗಳಾದ ಕೆ.ಶೇಖರ್, ಕೊಳವನಹಳ್ಳಿ ಮುನಿರಾಜು, ಮ.ಶ.ಸುಂದರಮೂರ್ತಿ, ಶಿವರಾಮೇಗೌಡ, ಬಾಲಕೃಷ್ಣ, ಶಶಿಕುಮಾರ್, ರವಿ, ದೇಶಾನಂಜುಂಡ ರಾಮಯ್ಯಶೆಟ್ಟಿ, ಸುಮಿತ್ರಾ, ಭಾಗ್ಯಮ್ಮ ಇತರರು ಹಾಜದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT