ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿಯಾದ ರಹಸ್ಯ!

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಜೈಲಿನಲ್ಲಿ ಮಾಲಿಯಾಗಿದ್ದ ಲಾಲೂ’ (ಪ್ರ.ವಾ., ಡಿ. 17). ಶಿಕ್ಷಕ­ರಾಗಿ ನಿಯೋಜಿತರಾಗಿದ್ದ ಲಾಲೂ, ಮಾಲಿ ಕೆಲಸ ಕೊಡುವಂತೆ ಕೋರಿ­ಕೊಂಡಿ­ದ್ದರಂತೆ: ಆಶ್ಚರ್ಯ! ಶಿಕ್ಷಕನ ಕೆಲಸ ನಿರಾಕರಿಸಿ, ಮಾಲಿ­ಯಾದದ್ದಕ್ಕೆ ಈ ಮೂರು ಭಾವನೆಗಳಲ್ಲೊಂದು ಕಾರಣ­ವಿರಬೇಕು: (1) ಬೋಧನೆ ನಿರುಪ­ಯುಕ್ತ.

(‘ಆರ್ಟ್‌ ಈಸ್‌ ಯೂಸ್‌­ಲೆಸ್‌’ ಎಂದ­ಹಾಗೆ, ‘ಟೀಚಿಂಗ್‌ ಈಸ್‌ ಯೂಸ್‌­ಲೆಸ್‌’). (2) ಬೋಧನೆಯ ಕೆಲಸಕ್ಕೆ ನೈತಿಕ ಅರ್ಹತೆಯಿಲ್ಲ. (3) ಎಲ್ಲ­ಕ್ಕಿಂತ ಮಿಗಿಲಾಗಿ, ಮಾಲಿ­ಯಾ­ದರೆ, ಗಿಡಗಳನ್ನೆ ಮೇವು ಮಾಡಿ­ಕೊಂಡು ತಿಂದು ತಣಿಯಬಹುದು! ಸಾಮಾನ್ಯವಲ್ಲ, ಲಾಲೂ ತಲೆ! (ರಾಜಕೀಯ ಶಿಕ್ಷಣ, ಅರ್ಥಾತ್‌ ಭ್ರಷ್ಟಾ­ಚಾರ ಶಿಕ್ಷಣ ಕೊಡುವಂತೆ ಹೇಳಿ­ದ್ದರೆ, ಅವರು ಸಂತೋಷದಿಂದ ಒಪ್ಪುತ್ತಿದ್ದ­ರೇನೊ?).
–ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT